IND vs BAN: ಭಾರತ ವಿರುದ್ಧದ ಏಕದಿನ ಪಂದ್ಯ ವೀಕ್ಷಣೆಗೆ ಬಾಂಗ್ಲಾದೇಶ ನಿಗದಿ ಪಡಿಸಿದ ಟಿಕೆಟ್ ಬೆಲೆ ಎಷ್ಟು ಗೊತ್ತೆ?: ಶಾಕ್​ ಆಗ್ತೀರಾ

India vs Bangladesh 1st ODI: ಭಾರತ-ಬಾಂಗ್ಲಾದೇಶ ನಡುವಣ ಏಕದಿನ ಸರಣಿಗೆ ಸ್ಟೇಡಿಯಂನಲ್ಲಿ ಅಭಿಮಾನಿಗಳಿಲ್ಲದೆ ಖಾಲಿ ಖಾಲಿ ಆಗಬಹುದು ಎಂದು ಅರಿತುಕೊಂಡು ಬಾಂಗ್ಲಾದೇಶ ಕ್ರಿಕೆಟ್ ಬೊರ್ಡ್ ಏಕದಿನ ಸರಣಿ ಟಿಕೆಟ್ ಅನ್ನು ಅತಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ.

TV9 Web
| Updated By: Vinay Bhat

Updated on:Dec 03, 2022 | 9:47 AM

ಎಡೆಬಿಡದೆ ನಡೆಯುತ್ತಿರುವ ಕ್ರಿಕೆಟ್ ಪಂದ್ಯಗಳು ಅಥವಾ ಟಿ20ಪಂದ್ಯಗಳ ಫೀವರ್ ಹೆಚ್ಚಾಗಿರುವ ಕಾರಣ ಏಕದಿನ ಕ್ರಿಕೆಟ್​ನ ಮೂಲೆ ಗುಂಪಾಗುತ್ತಿದೆ. 50 ಓವರ್​ಗಳ ಪಂದ್ಯವನ್ನು ವೀಕ್ಷಣೆ ಮಾಡುತ್ತಿರುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಡಿಸೆಂಬರ್ 04 ಭಾನುವಾರದಿಂದ ಆರಂಭವಾಗಲಿರುವ ಭಾರತ ಹಾಗೂ ಬಾಂಗ್ಲಾದೇಶ ನಡುವಣ ಏಕದಿನ ಸರಣಿಗೂ ಇದರ ಬಿಸಿ ತಟ್ಟುವ ಸಾಧ್ಯತೆ ಇದೆ.

1 / 8
ಆದರೆ, ಭಾರತ ಹಾಗೂ ಬಾಂಗ್ಲಾದೇಶ ನಡುವಣ ಏಕದಿನ ಸರಣಿಗೆ ಸ್ಟೇಡಿಯಂನಲ್ಲಿ ಅಭಿಮಾನಿಗಳಿಲ್ಲದೆ ಖಾಲಿ ಖಾಲಿ ಆಗಬಹುದು ಎಂದು ಅರಿತುಕೊಂಡು ಬಾಂಗ್ಲಾದೇಶ ಕ್ರಿಕೆಟ್ ಬೊರ್ಡ್ ಇದರಿಂದ ಪಾರಾಗಲೂ ಹೊಸ ಮಾರ್ಗ ಹುಡುಕಿದೆ. ಭಾರತ ವಿರುದ್ಧದ ಏಕದಿನ ಸರಣಿ ಟಿಕೆಟ್ ಅನ್ನು ಅತಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಹಾಗಾದರೆ ಭಾರತ-ಬಾಂಗ್ಲಾ ಮೊದಲ ಏಕದಿನ ಪಂದ್ಯದ ಟಿಕೆಟ್ ಬೆಲೆ ಎಷ್ಟು?.

2 / 8
ಮೊದಲ ಏಕದಿನ ಪಂದ್ಯದ ಟಿಕೆಟ್​ನ ಆರಂಭಿಕ ಬೆಲೆ ಕೇವಲ 160 ರೂ. ನಿಗದಿ ಮಾಡಲಾಗಿದೆ. ಗರಿಷ್ಠ ಮೊತ್ತ ಎಂದರೆ 1,200 ರೂ. ಆಗಿದೆ. ಮೊದಲ ಎರಡು ಏಕದಿನ ಪಂದ್ಯ ಢಾಕಾದಲ್ಲಿ ನಡೆಯಲಿದ್ದು ಅಭಿಮಾನಿಗಳು ಬರಲಿ ಎಂಬ ಕಾರಣಕ್ಕೆ ಬಾಂಗ್ಲಾ ಕ್ರಿಕೆಟ್ ಬೋರ್ಡ್ ಅತ್ಯಂತ ಕಡಿಮೆ ಬೆಲೆಗೆ ಟಿಕೆಟ್ ಮಾರಾಟ ಮಾಡುತ್ತಿದೆ.

3 / 8
ಮೊದಲ ಏಕದಿನ ಪಂದ್ಯಕ್ಕೆ ಇಂದು ಡಿಸೆಂಬರ್ 3 ಬೆಳಗ್ಗೆ 9 ಗಂಟೆಯಿಂದ ಟಿಕೆಟ್ ಮಾರಾಟ ಶುರುವಾಗಿದೆ. ಮೀರ್​ಪುರ್​ನ ಶಹೀದ್ ಸುಹ್ರವರ್ದಿ ಕ್ರೀಡಾಂಗಣದಲ್ಲಿ ಟಿಕೆಟ್ ಪಡೆದುಕೊಳ್ಳಬಹುದು. ಮೈದಾನದ ಪೂರ್ವ ಭಾಗದಲ್ಲಿರುವ ಗ್ಯಾಲರಿ ಟಿಕೆಟ್ 160 ರೂ., ನಾರ್ಥ್​-ಸೌತ್ ಗ್ಯಾಲರಿ ಟಿಕೆಟ್‌ಗಳ ಬೆಲೆ 238 ರೂ., ಕ್ಲಬ್ ಹೌಸ್ ಟಾಕಾ 397ರೂ., ವಿಐಪಿ ಗ್ಯಾಲರಿ 793 ರೂ. ಮತ್ತು ಗ್ರ್ಯಾಂಡ್‌ಸ್ಟ್ಯಾಂಡ್ ಟಿಕೆಟ್ ಬೆಲೆ 1,200 ರೂ. ಆಗಿದೆ.

4 / 8
ಇತ್ತೀಚೆಗಷ್ಟೆ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್​ನಲ್ಲಿ ನಡೆದ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಣ ಏಕದಿನ ಪಂದ್ಯ ವೀಕ್ಷಣೆಗೆ ಸ್ಟೇಡಿಯಂನಲ್ಲಿ ಪ್ರೇಕ್ಷಕರೇ ಇರಲಿಲ್ಲ. ಇದನ್ನು ಮನಗಂಡು ಬಾಂಗ್ಲಾ ಕ್ರಿಕೆಟ್ ಕಡಿಮೆ ಬೆಲೆಗೆ ಟಿಕೆಟ್ ಮಾರಾಟ ಮಾಡುತ್ತಿದೆ ಎನ್ನಲಾಗಿದೆ.

5 / 8
ಭಾರತ- ಬಾಂಗ್ಲಾದೇಶ ನಡುವಣ ಏಕದಿನ ಸರಣಿ ವರ್ಲ್ಡ್ ಸೂಪರ್ ಲೀಗ್​ನ ಭಾಗಕ್ಕೆ ಬರುವುದಿಲ್ಲ. ಯಾಕೆಂದರೆ ಈಗಾಗಲೇ ಉಭಯ ತಂಡಗಳು ಐಸಿಸಿ ಏಕದಿನ ವಿಶ್ವಕಪ್​ಗೆ ಅರ್ಹತೆ ಪಡೆದುಕೊಂಡಿದೆ. ಹೀಗಿದ್ದರೂ ಎರಡೂ ತಂಡಗಳ ನಡುವಣ ಕಾಳಗ ಸಾಕಷ್ಟು ರೋಚಕತೆ ಸೃಷ್ಟಿಸಿದೆ.

6 / 8
ಬಾಂಗ್ಲಾದೇಶ ಅಭಿಮಾನಿಗಳು ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಬ್ಯಾಟಿಂಗ್ ವೈಭವವನ್ನು ವೀಕ್ಷಿಸಲು ಮೈದಾನಕ್ಕೆ ಬರುವ ಸಾಧ್ಯತೆ ಇದೆ. ಅಲ್ಲದೆ ಏಳು ವರ್ಷಗಳ ಬಳಿಕ ಕೊಹ್ಲಿ-ರೋಹಿತ್ ಈ ಮೈದಾನದಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಇತ್ತ ಬಾಂಗ್ಲಾಕ್ಕೆ ಸ್ಟಾರ್ ಆಟಗಾರರಾದ ತಮಿಮ್ ಇಖ್ಬಾಲ್ ಮತ್ತು ಟಸ್ಕಿನ್ ಅಹ್ಮದ್ ಅಲಭ್ಯರಾಗಿರುವುದು ದೊಡ್ಡ ಹಿನ್ನಡೆಯಾಗಿದೆ.

7 / 8
ಭಾರತ- ಬಾಂಗ್ಲಾದೇಶ ನಡುವೆ ಡಿಸೆಂಬರ್ 4 ರಂದು ಮೊದಲ ಏಕದಿನ ಪಂದ್ಯ ನಡೆಯಲಿದ್ದು, ಡಿ. 7 ರಂದು ದ್ವಿತೀಯ ಏಕದಿನ ಮತ್ತು ತೃತೀಯ ಪಂದ್ಯ ಡಿಸೆಂಬರ್ 10ಕ್ಕೆ ಆಯೋಜಿಸಲಾಗಿದೆ. ಮೊದಲ ಎರಡು ಏಕದಿನ ಪಂದ್ಯ ಢಾಕಾದ ಬಾಂಗ್ಲಾದೇಶ ರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯಲಿದೆ. ಕೊನೆಯ ಪಂದ್ಯ ಚಿತ್ತಗಾಂಗ್​ನಲ್ಲಿ ಜರುಗಲಿದೆ.

8 / 8

Published On - 9:39 am, Sat, 3 December 22

Follow us
ಮಹಿಳಾ ಪ್ರಯಾಣಿಕರಿಂದ ತುಂಬಿದ ಬಸ್: ಮೂಡಿಗೆರೆಯಲ್ಲಿ ವಿದ್ಯಾರ್ಥಿಗಳ ಪರದಾಟ

ಚಿಕ್ಕಂದಿನಲ್ಲಿ ಅಪ್ಪನ ಕಳೆದುಕೊಂಡಿದ್ದ ವಿಕ್ರಂಗೌಡ ತಂಗಿಯ ಮದುವೆ ಮಾಡಿಸಿದ್ದ

ಶೋರೂಮಲ್ಲಿದ್ದ ಬ್ಯಾಟರಿಗಳು ಸ್ಪೋಟಗೊಂಡ ಕಾರಣ ಹೆಚ್ಚಿದ ಬೆಂಕಿ ಪ್ರಮಾಣ

ರಾಯಚೂರಿನಲ್ಲಿ ಮಧ್ಯರಾತ್ರಿ ಜೆಸಿಬಿ ಘರ್ಜನೆ: ಶಿವ, ಗಣೇಶನ ಗುಡಿ ತೆರವು

ಪ್ರಧಾನಿ ಮೋದಿಯನ್ನು ಅಪ್ಪುಗೆಯಿಂದ ಬರಮಾಡಿಕೊಂಡ ಇರ್ಫಾನ್ ಅಲಿ

ವೈಲ್ಡ್ ಕಾರ್ಡ್ ಸ್ಪರ್ಧಿಯಿಂದ ಸುರೇಶ್​ಗೆ ಅವಮಾನ; ಮನೆ ಬಿಟ್ಟು ಹೋಗ್ತಾರಾ?

ಸರ್ಫರಾಝ್ ಹಿಡಿದ ಕ್ಯಾಚ್ ನೋಡಿ ಬಿದ್ದು ಬಿದ್ದು ನಕ್ಕಿದ ವಿರಾಟ್ ಕೊಹ್ಲಿ

ಅರಳಿ ಮರದ ಎಲೆ ದೀಪದ ಮಹತ್ವ ಹಾಗೂ ಇದರ ಹಿಂದಿನ ರಹಸ್ಯ ತಿಳಿಯಿರಿ

Nithya Bhavishya: ಈ ರಾಶಿಯವರಿಗೆ ಐದು ಗ್ರಹಗಳ ಶುಭ ಫಲವಿದೆ

ನಿಲ್ಲಿಸಿದ್ದ ಸ್ಕೂಟಿಯಿಂದ ಬುಸ್​ಗುಟ್ಟುತ್ತಾ ಹೊರಬಂದ ವಿಷಕಾರಿ ಹಾವು