Updated on:Dec 03, 2022 | 12:38 PM
ನ್ಯೂಜಿಲೆಂಡ್ ಹಾಗೂ ಬಾಂಗ್ಲಾದೇಶ ನಡುವೆ ಮೊದಲ ಬಾರಿಗೆ ಮಹಿಳಾ ಟಿ 20 ಸರಣಿಯನ್ನು ಆಡಲಾಗುತ್ತಿದೆ. ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಬಾಂಗ್ಲಾ ಮಹಿಳಾ ತಂಡ ಅತಿಥೇಯ ನ್ಯೂಜಿಲೆಂಡ್ ಎದುರು 132 ರನ್‌ಗಳ ಹೀನಾಯ ಸೋಲು ಕಂಡಿದೆ.
ಈ ಪಂದ್ಯದಲ್ಲಿ ಮೊದಲ ಬ್ಯಾಟ್ ಮಾಡಿದ ಕಿವೀಸ್ ತಂಡ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 164 ರನ್ ಗಳಿಸಿತು. ತಂಡದ ಪರ ಕ್ಯಾಪ್ಟನ್ ಸೋಫಿ ಡಿವೈನ್ 34 ಎಸೆತಗಳಲ್ಲಿ 45 ರನ್ ಗಳಿಸಿದರೆ, ಮ್ಯಾಡಿ ಗ್ರೀನ್ ಅಜೇಯ ಇನ್ನಿಂಗ್ಸ್ ಆಡಿದ್ದು 23 ಎಸೆತಗಳಲ್ಲಿ 36 ರನ್ ಗಳಿಸಿದರು.
ಅನನುಭವಿ ಬಾಂಗ್ಲಾದೇಶ ತಂಡಕ್ಕೆ ಈ ಗುರಿ ಕಠಿಣವಾಗಿತ್ತು ಎಂಬುದು ಪಂದ್ಯ ಆರಂಭವಾದ ಕೆಲವೇ ಸಮಯದಲ್ಲಿ ಬಹಿರಂಗವಾಯಿತು. ಈ ಗುರಿ ಬೆನ್ನಟ್ಟಿದ ಬಾಂಗ್ಲಾ ತಂಡದ ಎಲ್ಲಾ ಆಟಗಾರರು 89 ಎಸೆತಗಳಲ್ಲಿ ಕೇವಲ 32 ರನ್ ಗಳಿಸಲಷ್ಟೇ ಶಕ್ತರಾದರು.
ಬಾಂಗ್ಲಾದೇಶ ಪರ ದಾಖಲಾದ ಅತಿ ಹೆಚ್ಚು ಸ್ಕೋರ್ ಎಂದರೆ ಅದು ಕೇವಲ 6 ರನ್ ಮಾತ್ರ. ಇನ್ನುಳಿದಂತೆ ಮೂವರು ಬ್ಯಾಟರ್ಗಳು ತಮ್ಮ ಖಾತೆಯನ್ನು ಸಹ ತೆರೆಯಲಿಲ್ಲ. ನ್ಯೂಜಿಲೆಂಡ್ ಪರ ಲೇಹ್ ತಾಹುಹು 4 ಓವರ್‌ಗಳಲ್ಲಿ ಕೇವಲ 6 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದರು.
ಈ ಉಭಯ ತಂಡಗಳ ನಡುವಿನ ಎರಡನೇ ಟಿ20 ಪಂದ್ಯ ನಾಳೆ ಅಂದರೆ, ಡಿ.4ರಂದು ನಡೆಯಲಿದೆ. ಈ ಪಂದ್ಯ ಬೆಳಿಗ್ಗೆ 6.30 ಗಂಟೆಗೆ ಆರಂಭವಾಗಲಿದೆ.
Published On - 12:38 pm, Sat, 3 December 22