Updated on:Dec 01, 2022 | 11:02 PM
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 16 ಮಿನಿ ಹರಾಜಿಗಾಗಿ ಒಟ್ಟು 991 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ 714 ಭಾರತೀಯ ಆಟಗಾರರಿದ್ದರೆ, 277 ವಿದೇಶಿ ಆಟಗಾರರಿದ್ದಾರೆ ಎಂದು BCCI ತಿಳಿಸಿದೆ.
ಇನ್ನು 991 ಆಟಗಾರರಲ್ಲಿ 19 ಭಾರತೀಯ ಕ್ಯಾಪ್ಡ್ ಆಟಗಾರರು (ಭಾರತದ ಪರ ಆಡಿದ), 166 ವಿದೇಶಿ ರಾಷ್ಟ್ರೀಯ ಆಟಗಾರರು ಕಾಣಿಸಿಕೊಂಡಿದ್ದಾರೆ. ಹಾಗೆಯೇ ಅಸೋಸಿಯೇಟ್ ದೇಶದ 20 ಆಟಗಾರರು ಹೆಸರು ನೀಡಿದ್ದಾರೆ.
ಅದೇ ರೀತಿ ಈ ಪಟ್ಟಿಯಲ್ಲಿ ರಾಷ್ಟ್ರೀಯ ತಂಡದ ಪರ ಆಡದ, ಐಪಿಎಲ್ನಲ್ಲಿ ಆಡಿದ 91 ಭಾರತೀಯ ಹಾಗೂ 3 ವಿದೇಶಿ ಆಟಗಾರರು ಕೂಡ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಭಾರತದ 604 ಆಟಗಾರರು ಹಾಗೂ 88 ವಿದೇಶಿ ಆಟಗಾರರು ಚೊಚ್ಚಲ ಐಪಿಎಲ್ ಅವಕಾಶ ಹೆಸರು ನೀಡಿದ್ದಾರೆ.
ಆದರೆ ಈ ಆಟಗಾರರ ಪಟ್ಟಿಯನ್ನು ಶಾರ್ಟ್ ಲೀಸ್ಟ್ ಮಾಡಿದ ಬಳಿಕವಷ್ಟೇ ಹರಾಜು ನಡೆಯಲಿದೆ. ಅಂದರೆ ಐಪಿಎಲ್ ಮಿನಿ ಹರಾಜಿಗೂ ಮುನ್ನ ಎಲ್ಲಾ ಫ್ರಾಂಚೈಸಿಗಳು ಬಿಡ್ಡಿಂಗ್ ಮಾಡಲು ಇಚ್ಛಿಸುವ ಆಟಗಾರರ ಅಂತಿಮ ಪಟ್ಟಿಯನ್ನು ಸಲ್ಲಿಸಲಿದೆ. ಅದರಲ್ಲಿ ಸ್ಥಾನ ಪಡೆಯುವ ಆಟಗಾರರು ಮಾತ್ರ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
IPL 2023 ರ ಮಿನಿ ಹರಾಜಿಗಾಗಿ ಒಟ್ಟು 991 ಆಟಗಾರರು (714 ಭಾರತೀಯ ಮತ್ತು 277 ವಿದೇಶಿ ಆಟಗಾರರು) ಹೆಸರು ನೀಡಿದ್ದು, ಡಿಸೆಂಬರ್ 23 ರಂದು ಕೊಚ್ಚಿನ್ನಲ್ಲಿ ನಡೆಯಲಿರುವ ಹರಾಜಿನಲ್ಲಿ ಇವರಲ್ಲಿ ಯಾರಿಗೆಲ್ಲಾ ಅವಕಾಶ ಸಿಗಲಿದೆ ಕಾದು ನೋಡಬೇಕಿದೆ.
Published On - 10:23 pm, Thu, 1 December 22