IPL 2023: ಕೇವಲ 8 ರನ್‌; ಚೆಪಾಕ್‌ನಲ್ಲಿ ವಿಶೇಷ ದಾಖಲೆ ಬರೆಯಲಿದ್ದಾರೆ ಧೋನಿ..!

Updated on: Apr 03, 2023 | 5:30 PM

MS Dhoni IPL Record: ಧೋನಿ ಈ ಕೆಲಸ ಮಾಡಿದರೆ ಈ ಸಾಧನೆ ಮಾಡಿದ ಏಳನೇ ಬ್ಯಾಟ್ಸ್​ಮನ್ ಆಗಲಿದ್ದಾರೆ. ಧೋನಿ ಪ್ರಸ್ತುತ 235 ಐಪಿಎಲ್ ಪಂದ್ಯಗಳಲ್ಲಿ 4992 ರನ್ ಗಳಿಸಿದ್ದಾರೆ.

1 / 5
ಗುಜರಾತ್ ಟೈಟಾನ್ಸ್ ವಿರುದ್ಧ ಆಡಿದ ಮೊದಲ ಪಂದ್ಯದಲ್ಲಿ ಸೋಲನುಭವಿಸಿದ್ದ ಚೆನ್ನೈ ತಂಡ ಇಂದು ಲಕ್ನೋ ತಂಡವನ್ನು ಎದುರಿಸುತ್ತಿದೆ. ಚೆಪಾಕ್​ನಲ್ಲಿ ನಡೆಯುವ ಈ ಪಂದ್ಯದಲ್ಲಿ ಸಿಎಸ್​ಕೆ ನಾಯಕ ಧೋನಿ ವಿನೂತನ ದಾಖಲೆ ಬರೆಯಲಿದ್ದು, ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಗುಜರಾತ್ ಟೈಟಾನ್ಸ್ ವಿರುದ್ಧ ಆಡಿದ ಮೊದಲ ಪಂದ್ಯದಲ್ಲಿ ಸೋಲನುಭವಿಸಿದ್ದ ಚೆನ್ನೈ ತಂಡ ಇಂದು ಲಕ್ನೋ ತಂಡವನ್ನು ಎದುರಿಸುತ್ತಿದೆ. ಚೆಪಾಕ್​ನಲ್ಲಿ ನಡೆಯುವ ಈ ಪಂದ್ಯದಲ್ಲಿ ಸಿಎಸ್​ಕೆ ನಾಯಕ ಧೋನಿ ವಿನೂತನ ದಾಖಲೆ ಬರೆಯಲಿದ್ದು, ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

2 / 5

ಲಕ್ನೋ ವಿರುದ್ಧ ಧೋನಿ ಎಂಟು ರನ್ ಗಳಿಸಿದರೆ ಐಪಿಎಲ್‌ನಲ್ಲಿ 5000 ರನ್ ಪೂರೈಸಿದ ಬ್ಯಾಟ್ಸ್‌ಮನ್ ಆಗಲಿದ್ದಾರೆ. ಐಪಿಎಲ್​ನಲ್ಲಿ ಇದುವರೆಗೆ ಕೇವಲ ಆರು ಬ್ಯಾಟ್ಸ್​ಮನ್​ಗಳು 5000ಕ್ಕೂ ಹೆಚ್ಚು ರನ್ ಗಳಿಸಿದ್ದು, ಧೋನಿ ಈ ಕೆಲಸ ಮಾಡಿದರೆ ಈ ಸಾಧನೆ ಮಾಡಿದ ಏಳನೇ ಬ್ಯಾಟ್ಸ್​ಮನ್ ಆಗಲಿದ್ದಾರೆ. ಧೋನಿ ಪ್ರಸ್ತುತ 235 ಐಪಿಎಲ್ ಪಂದ್ಯಗಳಲ್ಲಿ 4992 ರನ್ ಗಳಿಸಿದ್ದಾರೆ.

3 / 5

ಧೋನಿಗೂ ಮೊದಲು ವಿರಾಟ್ ಕೊಹ್ಲಿ, ಶಿಖರ್ ಧವನ್, ಡೇವಿಡ್ ವಾರ್ನರ್, ರೋಹಿತ್ ಶರ್ಮಾ, ಸುರೇಶ್ ರೈನಾ, ಎಬಿ ಡಿವಿಲಿಯರ್ಸ್ ಐಪಿಎಲ್‌ನಲ್ಲಿ 5000 ಕ್ಕೂ ಹೆಚ್ಚು ರನ್ ಗಳಿಸಿದ ದಾಖಲೆ ಬರೆದಿದ್ದಾರೆ. ಧೋನಿ 5000 ರನ್ ಗಳಿಸಿದರೆ, ಈ ಸಾಧನೆ ಮಾಡಿದ ಐದನೇ ಭಾರತೀಯ ಎನಿಸಿಕೊಳ್ಳಲಿದ್ದಾರೆ.

4 / 5

ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪೈಕಿ ವಿರಾಟ್ ಕೊಹ್ಲಿ ನಂಬರ್-1 ಸ್ಥಾನದಲ್ಲಿದ್ದಾರೆ. ಧೋನಿಗಿಂತ ಕಡಿಮೆ ಪಂದ್ಯಗಳನ್ನು ಆಡಿರುವ ಕೊಹ್ಲಿ ಧೋನಿಗಿಂತ ಹೆಚ್ಚು ರನ್ ಗಳಿಸಿದ್ದಾರೆ. ಕೊಹ್ಲಿ 224 ಪಂದ್ಯಗಳಲ್ಲಿ 5 ಶತಕ ಮತ್ತು 45 ಅರ್ಧ ಶತಕ ಸೇರಿದಂತೆ 6706 ರನ್ ಗಳಿಸಿದ್ದಾರೆ.

5 / 5

ವಾಸ್ತವವಾಗಿ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಲ್ಕು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿದೆ. ಆದರೆ ಕಳೆದ ಸೀಸನ್ ಚೆನ್ನೈಗೆ ಉತ್ತಮವಾಗಿರಲಿಲ್ಲ. ಹೀಗಾಗಿ ಈ ಆವೃತ್ತಿಯಲ್ಲಿ ಚೆನ್ನೈ ತಂಡ ಉತ್ತಮ ಪ್ರದರ್ಶನ ನೀಡಿ ಕಪ್ ಗೆಲ್ಲುವ ತವಕದಲ್ಲಿದೆ.

Published On - 5:30 pm, Mon, 3 April 23

Loading...
Unable to load recommendations.
Follow Us