IPL 2023: ಆಡಿದ ಮೊದಲ ಪಂದ್ಯದಲ್ಲೇ ಫ್ರಾಂಚೈಸಿಗಳಿಗೆ ನಿರಾಸೆ ಮೂಡಿಸಿದ ಕೋಟಿ ವೀರರು..!

IPL 2023: ಫ್ರಾಂಚೈಸಿಗಳು ಹೀಗೆ ಹಣ ಸುರಿಯಲು ಕಾರಣವೂ ಇದ್ದು, ಕೋಟಿ ಕೋಟಿ ಪಡೆದ ಆಟಗಾರರಿಗೆ ಪಂದ್ಯದ ದಿಕ್ಕನ್ನೇ ಬದಲಿಸುವ ತಾಕತ್ತಿರುತ್ತದೆ. ಆದರೆ ಆಡಿದ ಮೊದಲ ಪಂದ್ಯದಲ್ಲೇ ಈ ಕೋಟಿ ವೀರರು ನಿರಾಸ ಪ್ರದರ್ಶನ ನೀಡಿದ್ದಾರೆ.

ಪೃಥ್ವಿಶಂಕರ
|

Updated on: Apr 03, 2023 | 3:54 PM

ಐಪಿಎಲ್ ಆರಂಭಕ್ಕೂ ಮುನ್ನ ಹಲವು ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ಖರೀದಿಸಲು ಅವರ ಮೇಲೆ ಹಣದ ಹೊಳೆಯನ್ನೇ ಹರಿಸಿದ್ದವು. ಫ್ರಾಂಚೈಸಿಗಳು ಹೀಗೆ ಹಣ ಸುರಿಯಲು ಕಾರಣವೂ ಇದ್ದು, ಕೋಟಿ ಕೋಟಿ ಪಡೆದ ಆಟಗಾರರಿಗೆ ಪಂದ್ಯದ ದಿಕ್ಕನ್ನೇ ಬದಲಿಸುವ ತಾಕತ್ತಿರುತ್ತದೆ. ಆದರೆ ಆಡಿದ ಮೊದಲ ಪಂದ್ಯದಲ್ಲೇ ಈ ಕೋಟಿ ವೀರರು ನಿರಾಸ ಪ್ರದರ್ಶನ ನೀಡಿದ್ದಾರೆ. ಹಾಗಿದ್ದರೆ ಅತ್ಯಧಿಕ ಮೊತ್ತಕ್ಕೆ ಸೇಲ್ ಆಗಿದ್ದ ಆಟಗಾರರ ಮೊದಲ ಪಂದ್ಯದ ಪ್ರದರ್ಶನ ಹೇಗಿತ್ತು? ಇಲ್ಲಿದೆ ವಿವರ.

1 / 5
ಇದೇ ಮಿನಿ ಹರಾಜಿನಲ್ಲಿ ಮುಂಬೈ ತಂಡ, ಆಸ್ಟ್ರೇಲಿಯಾದ ಕ್ಯಾಮರೂನ್ ಗ್ರೀನ್‌ಗಾಗಿ 17.5 ಕೋಟಿ ಖರ್ಚು ಮಾಡಿತ್ತು. ತನ್ನ ಬಿರುಗಾಳಿಯ ಬ್ಯಾಟಿಂಗ್ ಮತ್ತು ಬೌಲಿಂಗ್‌ನಿಂದ ಗ್ರೀನ್ ತಂಡಕ್ಕೆ ಉಪಯುಕ್ತರಾಗುತ್ತಾರೆ ಎಂದು ಭಾವಿಸಿದ್ದರು. ಆದರೆ ಗ್ರೀನ್ ಆಡಿದ ಮೊದಲ ಪಂದ್ಯದಲ್ಲಿ ವಿಫಲರಾದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೇವಲ ಐದು ರನ್​ಗಳಿಗೆ ಸುಸ್ತಾದ ಗ್ರೀನ್ ಬೌಲಿಂಗ್‌ನಲ್ಲಿ ಮಾಡಿದ ಎರಡು ಓವರ್‌ಗಳಲ್ಲಿ ಬರೋಬ್ಬರಿ 30 ರನ್‌ಗಳನ್ನು ನೀಡಿ, ಕೇವಲ ಒಂದು ವಿಕೆಟ್ ಪಡೆದರು. ಈ ಪಂದ್ಯದಲ್ಲಿ ಮುಂಬೈ ಸೋತಿತು.

2 / 5
ಸನ್ ರೈಸರ್ಸ್ ಹೈದರಾಬಾದ್ ಕೂಡ ಇಂಗ್ಲೆಂಡ್​ನ ಹ್ಯಾರಿ ಬ್ರೂಕ್ ಅವರನ್ನು 13.25 ಕೋಟಿ ರೂ.ಗೆ ಖರೀದಿಸಿತು. ಇವರನ್ನು ಸೇರಿಸಿಕೊಳ್ಳುವ ಮೂಲಕ ತಂಡದ ಬ್ಯಾಟಿಂಗ್ ವಿಭಾಗವನ್ನು ಬಲಿಷ್ಠಗೊಳಿಸಲು ಪ್ರಯತ್ನಿಸಿತ್ತು. ಆದರೆ ಬ್ರೂಕ್ ಮೊದಲ ಪಂದ್ಯದಲ್ಲಿ ಕೇವಲ 13 ರನ್ ಗಳಿಸಿದರೆ, ಇದಕ್ಕಾಗಿ ಬರೋಬ್ಬರಿ 21 ಎಸೆತಗಳನ್ನು ಎದುರಿಸಿದರು. ಈ ಪಂದ್ಯದಲ್ಲಿ ಹೈದರಾಬಾದ್ ಕೂಡ ಸೋತಿತು.

3 / 5
ಮತ್ತೊಬ್ಬ ಇಂಗ್ಲೆಂಡ್ ಆಟಗಾರ ಬೆನ್ ಸ್ಟೋಕ್ಸ್ ಅವರನ್ನು ಚೆನ್ನೈ, 16.25 ಕೋಟಿ ಖರ್ಚು ಮಾಡಿತ್ತು. ಆದರೆ ಸ್ಟೋಕ್ಸ್ ಮೊದಲ ಪಂದ್ಯದಲ್ಲಿ ಕೇವಲ ಏಳು ರನ್ ಗಳಿಸಿದ್ದರು. ಅಲ್ಲದೆ ಇಡೀ ಟೂರ್ನಿಯಲ್ಲಿ ಬೌಲಿಂಗ್ ಮಾಡದ ನಿರ್ಧಾರಕ್ಕೆ ಬಂದಿರುವ ಸ್ಟೋಕ್ಸ್ ಚೆನ್ನೈಗೆ ಬಿಗ್ ಶಾಕ್ ನೀಡಿದ್ದಾರೆ.

4 / 5
ಐಪಿಎಲ್​ನ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿರುವ ಸ್ಯಾಮ್ ಕರನ್ ಅವರನ್ನು ಪಂಜಾಬ್ ಕಿಂಗ್ಸ್ 18.5 ಕೋಟಿಗೆ ಖರೀದಿಸಿತು. ಗ್ರೀನ್, ಸ್ಟೋಕ್ಸ್ ಮತ್ತು ಬ್ರೂಕ್‌ಗೆ ಹೋಲಿಸಿದರೆ, ಕರನ್ ಮೊದಲ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದರು. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ 17 ಎಸೆತಗಳಲ್ಲಿ ಎರಡು ಸಿಕ್ಸರ್‌ಗಳ ಸಹಿತ 26 ರನ್ ಗಳಿಸಿದ ಕರನ್, ಈ ಪಂದ್ಯದಲ್ಲಿ  ಆಂಡ್ರೆ ರಸೆಲ್ ಅವರ ವಿಕೆಟ್ ಕೂಡ ಪಡೆದರು.

5 / 5
Follow us