IPL 2023: ಫೈನಲ್ ಪಂದ್ಯದಲ್ಲಿ ಧೋನಿ ಖಾತೆಗೆ ಸೇರಲಿದೆ ಮತ್ತೊಂದು ವಿಶ್ವ ದಾಖಲೆ..!
MS Dhoni: ಮೊದಲ ಕ್ವಾಲಿಫೈಯರ್‌ನಲ್ಲಿ ಸಿಎಸ್‌ಕೆ ವಿರುದ್ಧ ಸೋಲನುಭವಿಸಿದ್ದ ಗುಜರಾತ್ ಎರಡನೇ ಕ್ವಾಲಿಫೈಯರ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿ ಮತ್ತೊಮ್ಮೆ ಫೈನಲ್ಗೆ ಲಗ್ಗೆ ಇಟ್ಟಿದೆ.
1 / 6
ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ 2023 ರ ಫೈನಲ್‌ನಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ ವಿರುದ್ಧ ಸೆಣಸಲಿದೆ.
2 / 6
ಮೊದಲ ಕ್ವಾಲಿಫೈಯರ್‌ನಲ್ಲಿ ಸಿಎಸ್‌ಕೆ ವಿರುದ್ಧ ಸೋಲನುಭವಿಸಿದ್ದ ಗುಜರಾತ್ ಎರಡನೇ ಕ್ವಾಲಿಫೈಯರ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿ ಮತ್ತೊಮ್ಮೆ ಫೈನಲ್ಗೆ ಲಗ್ಗೆ ಇಟ್ಟಿದೆ. ಎರಡೂ ತಂಡಗಳು ಮತ್ತೊಮ್ಮೆ ಕಣಕ್ಕಿಳಿಯಲು ಸಜ್ಜಾಗಿವೆ. ಇದೇ ಪಂದ್ಯದಲ್ಲಿ ಚೆನ್ನೈ ನಾಯಕ ಧೋನಿ ಕೂಡ ಅಪರೂಪದ ದಾಖಲೆಯೊಂದನ್ನು ಬರೆಯಲಿದ್ದಾರೆ.
3 / 6
ಧೋನಿ ಇದುವರೆಗೆ ಐಪಿಎಲ್‌ನ ಪ್ರತಿ ಸೀಸನ್‌ನಲ್ಲಿ ಆಡಿದ್ದಾರೆ. 2008 ರಲ್ಲಿ ಚೆನ್ನೈ ತಂಡವನ್ನು ಮುನ್ನಡೆಸಲು ಪ್ರಾರಂಭಿಸಿದ್ದ ಧೋನಿ 2015 ರವರೆಗೆ ಈ ಕೆಲಸವನ್ನು ನಿರಂತರವಾಗಿ ಮಾಡಿದ್ದರು ಆ ನಂತರ 2016 ಮತ್ತು 2017ರ ಐಪಿಎಲ್ನಲ್ಲಿ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡವನ್ನು ಮುನ್ನಡೆಸಿದ್ದರು.
4 / 6
ನಂತರ 2018 ರಲ್ಲಿ ಮತ್ತೆ ಚೆನ್ನೈ ತಂಡಕ್ಕೆ ಮರಳಿದ್ದ ಧೋನಿ 2022 ರ ಸೀಸನ್ ಆರಂಭದ ಮೊದಲು ಸಿಎಸ್‌ಕೆ ನಾಯಕತ್ವದಿಂದ ಕೆಳಗಿಳಿದು ಜಡೇಜಾಗೆ ನಾಯಕತ್ವ ಹಸ್ತಾಂತರಿಸಿದ್ದರು. ಆದರೆ ರವೀಂದ್ರ ಜಡೇಜಾ ಲೀಗ್ನ ಮಧ್ಯದಲ್ಲೇ ತಂಡವನ್ನು ತೊರೆದಿದ್ದರಿಂದ ಮತ್ತೆ ಧೋನಿ ತಂಡದ ನಾಯಕತ್ವವಹಿಸಿಕೊಳ್ಳಬೇಕಾಯಿತು.
5 / 6
ಇದರೊಂದಿಗೆ ಐಪಿಎಲ್ನಲ್ಲಿ ಸುದೀರ್ಘ ಪಯಣ ಮುಂದುವರೆಸಿರುವ ಧೋನಿ ಗುಜರಾತ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಕಣಕ್ಕಿಳಿದರೆ, ಐಪಿಎಲ್ನಲ್ಲಿ 250 ಪಂದ್ಯಗಳನ್ನು ಪೂರೈಸಿದ ಮೊದಲ ಆಟಗಾರ ಎನಿಸಿಕೊಳ್ಳಲಿದ್ದಾರೆ.
6 / 6
ಇನ್ನು ಧೋನಿ ಅವರ ನಂತರ ರೋಹಿತ್ ಶರ್ಮಾ 243 ಪಂದ್ಯಗಳನ್ನು ಆಡಿದ್ದು ಎರಡನೇ ಸ್ಥಾನದಲ್ಲಿದ್ದರೆ, ದಿನೇಶ್ ಕಾರ್ತಿಕ್ (242), ವಿರಾಟ್ ಕೊಹ್ಲಿ (237) ಮತ್ತು ರವೀಂದ್ರ ಜಡೇಜಾ (225) ಕ್ರಮವಾಗಿ ಪಟ್ಟಿಯಲ್ಲಿ ಧೋನಿಯ ಹಿಂದಿದ್ದಾರೆ.