- Kannada News Photo gallery Cricket photos Kannada News | IPL 2023 Gujarat Titans Become The First Team To Reach The IPL Finals In Their First Two Editions
IPL 2023: ಹಿಂದೆಂದೂ ಸೃಷ್ಟಿಯಾಗದ ದಾಖಲೆ; ಐಪಿಎಲ್‌ನಲ್ಲಿ ಇತಿಹಾಸ ಬರೆದ ಗುಜರಾತ್ ಟೈಟಾನ್ಸ್..!
IPL 2023: ಕಳೆದ ವರ್ಷ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದ ಗುಜರಾತ್ ತಂಡ ಕೇವಲ ಎರಡು ವರ್ಷಗಳಲ್ಲಿ ಯಾವ ತಂಡವೂ ಮಾಡಲಾಗದ ಅಪರೂಪದ ಸಾಧನೆಯೊಂದನ್ನು ಮಾಡಿದೆ.
Updated on: May 27, 2023 | 8:09 PM

ಕಳೆದ ವರ್ಷ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದ ಗುಜರಾತ್ ತಂಡ ಕೇವಲ ಎರಡು ವರ್ಷಗಳಲ್ಲಿ ಯಾವ ತಂಡವೂ ಮಾಡಲಾಗದ ಅಪರೂಪದ ಸಾಧನೆಯೊಂದನ್ನು ಮಾಡಿದೆ. ಕಳೆದ ಎರಡು ವರ್ಷಗಳಲ್ಲಿ ಸ್ಟಾರ್ ಆಟಗಾರರು ಮತ್ತು ಸ್ಟಾರ್ ಕೋಚಿಂಗ್ ಸಿಬ್ಬಂದಿಯನ್ನು ಹೊಂದಿರುವ ಬಲಿಷ್ಠ ತಂಡವನ್ನು ಸೋಲಿಸುವ ಮೂಲಕ ಗುಜರಾತ್ ಐಪಿಎಲ್ ಇತಿಹಾಸದಲ್ಲಿ ತನ್ನದೇ ಆದ ಹೆಜ್ಜೆ ಗುರುತು ಮೂಡಿಸಿದೆ.

ಐಪಿಎಲ್‌ಗೆ ಪಾದಾರ್ಪಣೆ ಮಾಡಿದ 2 ವರ್ಷಗಳಲ್ಲಿ ಗುಜರಾತ್ ಟೈಟಾನ್ಸ್ ಐಪಿಎಲ್ ಇತಿಹಾಸದಲ್ಲಿ ಎರಡನೇ ಬಾರಿಗೆ ಫೈನಲ್‌ಗೆ ಪ್ರವೇಶಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಳೆದ ಬಾರಿ ಐಪಿಎಲ್‌ಗೆ ಎಂಟ್ರಿಕೊಟ್ಟ ಗುಜರಾತ್ ತಂಡ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಚಾಂಪಿಯನ್ ಆಗಿತ್ತು.

ಐಪಿಎಲ್‌ನಲ್ಲಿ ಇದುವರೆಗೆ ಯಾವುದೇ ತಂಡ ಮೊದಲ 2 ವರ್ಷಗಳಲ್ಲಿ ಎರಡು ಬಾರಿ ಫೈನಲ್ ಆಡಿಲ್ಲ. ಐಪಿಎಲ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಗುಜರಾತ್ ಟೈಟಾನ್ಸ್ ಪಾತ್ರವಾಗಲಿದೆ.

ಚೊಚ್ಚಲ ಆವೃತ್ತಿಯಲ್ಲೇ ಗುಜರಾತ್ ಟೈಟಾನ್ಸ್ ತಂಡವನ್ನು ಫೈನಲ್‌ಗೆ ಕರೆದೊಯ್ದ ಶ್ರೇಯ ಹಾರ್ದಿಕ್ ಪಾಂಡ್ಯಗೆ ಸಲ್ಲುವಷ್ಟೇ ಮುಖ್ಯ ಕೋಚ್ ಆಶಿಶ್ ನೆಹ್ರಾಗೆ ಸಲ್ಲಬೇಕಾಗುತ್ತದೆ. ಯುವ ಮತ್ತು ಅನುಭವಿ ಆಟಗಾರರ ಸಮಾನ ಮಿಶ್ರಣವನ್ನು ಹೊಂದಿರುವ ಈ ತಂಡವನ್ನು ಕೇವಲ ಎರಡು ವರ್ಷಗಳಲ್ಲಿ ಈ ಇಬ್ಬರು ಐಪಿಎಲ್ ಇತಿಹಾಸದಲ್ಲಿ ಹಳೆಯ ಮತ್ತು ಬಲಿಷ್ಠ ತಂಡಗಳಿಗಿಂತ ಬಹಳ ಮುಂದಕ್ಕೆ ಕೊಂಡೊಯ್ದಿದ್ದಾರೆ.

ಐಪಿಎಲ್ 2023 ರಲ್ಲಿ ಗುಜರಾತ್ ಟೈಟಾನ್ಸ್ ಟ್ರೋಫಿಯಿಂದ ಕೇವಲ ಒಂದು ಹೆಜ್ಜೆ ದೂರದಲ್ಲಿದೆ. ಫೈನಲ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಗುಜರಾತ್ ಟೈಟಾನ್ಸ್ ಈ ಸೀಸನ್ನಲ್ಲಿ ಮತ್ತೊಮ್ಮೆ ಚೆನ್ನೈ ತಂಡವನ್ನು ಸೋಲಿಸಿ ಟ್ರೋಫಿಯನ್ನು ವಶಪಡಿಸಿಕೊಳ್ಳುವ ತವಕದಲ್ಲಿದೆ.




