AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023: CSK ವಿರುದ್ಧ ಗುಜರಾತ್ ಟೈಟಾನ್ಸ್​ ಬಲಿಷ್ಠ…ಆದರೆ

CSK vs GT Head To Head Records: ಇಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆದ್ದಿರುವುದು ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಎಂಬುದು ಉಲ್ಲೇಖಾರ್ಹ. ಏಕೆಂದರೆ ಈ ಪಂದ್ಯವು ನಡೆದಿದ್ದು ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ.

TV9 Web
| Updated By: ಝಾಹಿರ್ ಯೂಸುಫ್|

Updated on: May 27, 2023 | 7:22 PM

Share
IPL 2023 Final CSK vs GT: ಐಪಿಎಲ್ ಸೀಸನ್ 16 ಫೈನಲ್ ಫೈಟ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿದೆ. ಭಾನುವಾರ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಯಾರು ಗೆಲ್ತಾರೆ ಎಂಬುದೇ ಈಗ ಕುತೂಹಲ.

1 / 8
ಏಕೆಂದರೆ ಉಭಯ ತಂಡಗಳು ಬಲಿಷ್ಠವಾಗಿದ್ದು, ಹೀಗಾಗಿ ಎರಡೂ ತಂಡಗಳಿಂದ ರೋಚಕ ಹೋರಾಟವನ್ನು ನಿರೀಕ್ಷಿಸಬಹುದು. ಏಕೆಂದರೆ ಈ ಬಾರಿ ಸಿಎಸ್​ಕೆ ಹಾಗೂ ಜಿಟಿ 2 ಪಂದ್ಯಗಳಲ್ಲಿ ಮುಖಾಮುಖಿಯಾಗಿದೆ. ವಿಶೇಷ ಎಂದರೆ ಮೊದಲ ಮುಖಾಮುಖಿಯಲ್ಲಿ ಗುಜರಾತ್ ಟೈಟಾನ್ಸ್ ಗೆದ್ದರೆ, ಕೊನೆಯ ಮುಖಾಮುಖಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಜಯ ಸಾಧಿಸಿದೆ.

2 / 8
ಆದರೆ ಇಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆದ್ದಿರುವುದು ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಎಂಬುದು ಉಲ್ಲೇಖಾರ್ಹ. ಏಕೆಂದರೆ ಈ ಪಂದ್ಯವು ನಡೆದಿದ್ದು ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ. ಅದೇ ಗುಜರಾತ್ ಟೈಟಾನ್ಸ್ ಸಿಎಸ್​ಕೆ ವಿರುದ್ಧ ಗೆದ್ದಿದ್ದು ಅಹಮದಾಬಾದ್​ನಲ್ಲಿ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಎಂಬುದು ವಿಶೇಷ.

3 / 8
ಇದೀಗ ನರೇಂದ್ರ ಮೋದಿ ಸ್ಟೇಡಿಯಂನಲ್ಲೇ ಐಪಿಎಲ್ ಫೈನಲ್ ನಡೆಯುತ್ತಿದೆ. ಇದೇ ಮೈದಾನದಲ್ಲಿ ನಡೆದ ಐಪಿಎಲ್​ 2023 ರ ಮೊದಲ ಪಂದ್ಯದಲ್ಲಿ ಸಿಎಸ್​ಕೆ ವಿರುದ್ಧ ಗುಜರಾತ್ ಟೈಟಾನ್ಸ್ ತಂಡವು 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತ್ತು.

4 / 8
ಇದಲ್ಲದೆ ಸಿಎಸ್​ಕೆ ತಂಡವು ಗುಜರಾತ್ ವಿರುದ್ಧ ಏಕೈಕ ಬಾರಿ ಮಾತ್ರ ಜಯ ಸಾಧಿಸಿದೆ. ಅಂದರೆ ಇದುವರೆಗೆ ಆಡಲಾದ 4 ಪಂದ್ಯಗಳಲ್ಲಿ 3 ಪಂದ್ಯಗಳಲ್ಲೂ ಗುಜರಾತ್ ಟೈಟಾನ್ಸ್​ ಗೆಲುವು ದಾಖಲಿಸಿದೆ.

5 / 8
ಅತ್ತ ಗುಜರಾತ್ ಟೈಟಾನ್ಸ್ ತಂಡವು ತವರಿನಲ್ಲಿ ಆಡಿದ 9 ಪಂದ್ಯಗಳಲ್ಲಿ 6 ರಲ್ಲಿ ಜಯ ಸಾಧಿಸಿದ ದಾಖಲೆ ಹೊಂದಿದೆ. ಅಂದರೆ ಇಲ್ಲಿ ಮೇಲ್ನೋಟಕ್ಕೆ ಉಭಯ ತಂಡಗಳು ಸಮಬಲ ಹೊಂದಿದ್ದರೂ ಗುಜರಾತ್ ಟೈಟಾನ್ಸ್​ ತಂಡ ತವರಿನಲ್ಲಿ ಆಡುತ್ತಿರುವುದು ಪ್ಲಸ್ ಪಾಯಿಂಟ್.

6 / 8
ಹಾಗೆಯೇ ಸಿಎಸ್​ಕೆ ತಂಡವು ಅತ್ಯುತ್ತಮ ಪ್ರದರ್ಶನ ನೀಡಿ ಅಂತಿಮ ಹಂತದಲ್ಲಿ ಮುಗ್ಗರಿಸಿದ ಇತಿಹಾಸವನ್ನೂ ಕೂಡ ಹೊಂದಿದೆ. ಅಂದರೆ ಐಪಿಎಲ್​ನಲ್ಲಿ ಇದುವರೆಗೆ 9 ಫೈನಲ್ ಆಡಿರುವ ಧೋನಿ ಪಡೆ ಗೆದ್ದಿರುವುದು ಕೇವಲ 4 ಪಂದ್ಯಗಳಲ್ಲಿ ಮಾತ್ರ. ಇತ್ತ ಹಾರ್ದಿಕ್ ಪಾಂಡ್ಯ ಮೊದಲ ಫೈನಲ್​ನಲ್ಲೇ ಗೆದ್ದು, ಇದೀಗ 2ನೇ ಬಾರಿಗೆ ಫೈನಲ್​ ಪ್ರವೇಶಿಸಿದೆ.

7 / 8
ಅಲ್ಲದೆ ಗುಜರಾತ್ ಟೈಟಾನ್ಸ್​ ತಂಡವು ತವರಿನಲ್ಲಿ ಸಿಎಸ್​ಕೆಯನ್ನು ಮಣಿಸಿದ ಆತ್ಮ ವಿಶ್ವಾಸದಲ್ಲಿ ಪುಟಿದೇಳುತ್ತಿದೆ. ಇದಾಗ್ಯೂ ಕೊನೆಯ ಮುಖಾಮುಖಿಯಲ್ಲಿ ಹಾರ್ದಿಕ್ ಪಾಂಡ್ಯ ಪಡೆಗೆ 15 ರನ್​ಗಳಿಂದ ಸೋಲುಣಿಸಿರುವ ಸಿಎಸ್​ಕೆ ಭರ್ಜರಿ ಪೈಪೋಟಿ ನೀಡುವುದಂತು ನಿಶ್ಚಿತ. ಹೀಗಾಗಿ ಫೈನಲ್ ಫೈಟ್​ನಲ್ಲಿ ರಣರೋಚಕ ಹೋರಾಟವನ್ನು ನಿರೀಕ್ಷಿಸಬಹುದು.

8 / 8
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ

ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು

‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?

ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್

ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್

ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ

ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್

ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ

ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ

ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!