- Kannada News Photo gallery Cricket photos Kannada News | IPL 2023 Final CSK vs GT: Head To Head Records
IPL 2023: CSK ವಿರುದ್ಧ ಗುಜರಾತ್ ಟೈಟಾನ್ಸ್ ಬಲಿಷ್ಠ…ಆದರೆ
CSK vs GT Head To Head Records: ಇಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆದ್ದಿರುವುದು ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಎಂಬುದು ಉಲ್ಲೇಖಾರ್ಹ. ಏಕೆಂದರೆ ಈ ಪಂದ್ಯವು ನಡೆದಿದ್ದು ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ.
Updated on: May 27, 2023 | 7:22 PM

IPL 2023 Final CSK vs GT: ಐಪಿಎಲ್ ಸೀಸನ್ 16 ಫೈನಲ್ ಫೈಟ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿದೆ. ಭಾನುವಾರ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಯಾರು ಗೆಲ್ತಾರೆ ಎಂಬುದೇ ಈಗ ಕುತೂಹಲ.

ಏಕೆಂದರೆ ಉಭಯ ತಂಡಗಳು ಬಲಿಷ್ಠವಾಗಿದ್ದು, ಹೀಗಾಗಿ ಎರಡೂ ತಂಡಗಳಿಂದ ರೋಚಕ ಹೋರಾಟವನ್ನು ನಿರೀಕ್ಷಿಸಬಹುದು. ಏಕೆಂದರೆ ಈ ಬಾರಿ ಸಿಎಸ್ಕೆ ಹಾಗೂ ಜಿಟಿ 2 ಪಂದ್ಯಗಳಲ್ಲಿ ಮುಖಾಮುಖಿಯಾಗಿದೆ. ವಿಶೇಷ ಎಂದರೆ ಮೊದಲ ಮುಖಾಮುಖಿಯಲ್ಲಿ ಗುಜರಾತ್ ಟೈಟಾನ್ಸ್ ಗೆದ್ದರೆ, ಕೊನೆಯ ಮುಖಾಮುಖಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಜಯ ಸಾಧಿಸಿದೆ.

ಆದರೆ ಇಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆದ್ದಿರುವುದು ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಎಂಬುದು ಉಲ್ಲೇಖಾರ್ಹ. ಏಕೆಂದರೆ ಈ ಪಂದ್ಯವು ನಡೆದಿದ್ದು ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ. ಅದೇ ಗುಜರಾತ್ ಟೈಟಾನ್ಸ್ ಸಿಎಸ್ಕೆ ವಿರುದ್ಧ ಗೆದ್ದಿದ್ದು ಅಹಮದಾಬಾದ್ನಲ್ಲಿ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಎಂಬುದು ವಿಶೇಷ.

ಇದೀಗ ನರೇಂದ್ರ ಮೋದಿ ಸ್ಟೇಡಿಯಂನಲ್ಲೇ ಐಪಿಎಲ್ ಫೈನಲ್ ನಡೆಯುತ್ತಿದೆ. ಇದೇ ಮೈದಾನದಲ್ಲಿ ನಡೆದ ಐಪಿಎಲ್ 2023 ರ ಮೊದಲ ಪಂದ್ಯದಲ್ಲಿ ಸಿಎಸ್ಕೆ ವಿರುದ್ಧ ಗುಜರಾತ್ ಟೈಟಾನ್ಸ್ ತಂಡವು 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತ್ತು.

ಇದಲ್ಲದೆ ಸಿಎಸ್ಕೆ ತಂಡವು ಗುಜರಾತ್ ವಿರುದ್ಧ ಏಕೈಕ ಬಾರಿ ಮಾತ್ರ ಜಯ ಸಾಧಿಸಿದೆ. ಅಂದರೆ ಇದುವರೆಗೆ ಆಡಲಾದ 4 ಪಂದ್ಯಗಳಲ್ಲಿ 3 ಪಂದ್ಯಗಳಲ್ಲೂ ಗುಜರಾತ್ ಟೈಟಾನ್ಸ್ ಗೆಲುವು ದಾಖಲಿಸಿದೆ.

ಅತ್ತ ಗುಜರಾತ್ ಟೈಟಾನ್ಸ್ ತಂಡವು ತವರಿನಲ್ಲಿ ಆಡಿದ 9 ಪಂದ್ಯಗಳಲ್ಲಿ 6 ರಲ್ಲಿ ಜಯ ಸಾಧಿಸಿದ ದಾಖಲೆ ಹೊಂದಿದೆ. ಅಂದರೆ ಇಲ್ಲಿ ಮೇಲ್ನೋಟಕ್ಕೆ ಉಭಯ ತಂಡಗಳು ಸಮಬಲ ಹೊಂದಿದ್ದರೂ ಗುಜರಾತ್ ಟೈಟಾನ್ಸ್ ತಂಡ ತವರಿನಲ್ಲಿ ಆಡುತ್ತಿರುವುದು ಪ್ಲಸ್ ಪಾಯಿಂಟ್.

ಹಾಗೆಯೇ ಸಿಎಸ್ಕೆ ತಂಡವು ಅತ್ಯುತ್ತಮ ಪ್ರದರ್ಶನ ನೀಡಿ ಅಂತಿಮ ಹಂತದಲ್ಲಿ ಮುಗ್ಗರಿಸಿದ ಇತಿಹಾಸವನ್ನೂ ಕೂಡ ಹೊಂದಿದೆ. ಅಂದರೆ ಐಪಿಎಲ್ನಲ್ಲಿ ಇದುವರೆಗೆ 9 ಫೈನಲ್ ಆಡಿರುವ ಧೋನಿ ಪಡೆ ಗೆದ್ದಿರುವುದು ಕೇವಲ 4 ಪಂದ್ಯಗಳಲ್ಲಿ ಮಾತ್ರ. ಇತ್ತ ಹಾರ್ದಿಕ್ ಪಾಂಡ್ಯ ಮೊದಲ ಫೈನಲ್ನಲ್ಲೇ ಗೆದ್ದು, ಇದೀಗ 2ನೇ ಬಾರಿಗೆ ಫೈನಲ್ ಪ್ರವೇಶಿಸಿದೆ.

ಅಲ್ಲದೆ ಗುಜರಾತ್ ಟೈಟಾನ್ಸ್ ತಂಡವು ತವರಿನಲ್ಲಿ ಸಿಎಸ್ಕೆಯನ್ನು ಮಣಿಸಿದ ಆತ್ಮ ವಿಶ್ವಾಸದಲ್ಲಿ ಪುಟಿದೇಳುತ್ತಿದೆ. ಇದಾಗ್ಯೂ ಕೊನೆಯ ಮುಖಾಮುಖಿಯಲ್ಲಿ ಹಾರ್ದಿಕ್ ಪಾಂಡ್ಯ ಪಡೆಗೆ 15 ರನ್ಗಳಿಂದ ಸೋಲುಣಿಸಿರುವ ಸಿಎಸ್ಕೆ ಭರ್ಜರಿ ಪೈಪೋಟಿ ನೀಡುವುದಂತು ನಿಶ್ಚಿತ. ಹೀಗಾಗಿ ಫೈನಲ್ ಫೈಟ್ನಲ್ಲಿ ರಣರೋಚಕ ಹೋರಾಟವನ್ನು ನಿರೀಕ್ಷಿಸಬಹುದು.




