Updated on: May 27, 2023 | 11:29 PM
IPL 2023 Final, CSK vs GT: ಐಪಿಎಲ್ ಸೀಸನ್ 16 ರ ಫೈನಲ್ ಫೈಟ್ಗೆ ಕೌಂಟ್ ಡೌನ್ ಶುರುವಾಗಿದೆ. ಭಾನುವಾರ ಅಹಮದಾಬಾದ್ ಸ್ಟೇಡಿಯಂನಲ್ಲಿ ನಡೆಯಲಿರುವ ಅಂತಿಮ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದೆ.
ಉಭಯ ತಂಡಗಳು ಈಗಾಗಲೇ 4 ಪಂದ್ಯಗಳಲ್ಲಿ ಪರಸ್ಪರ ಮುಖಾಮುಖಿಯಾಗಿದೆ. ಈ ವೇಳೆ ಮೂರು ಪಂದ್ಯಗಳಲ್ಲಿ ಗುಜರಾತ್ ಟೈಟಾನ್ಸ್ ತಂಡ ಜಯ ಸಾಧಿಸಿತ್ತು. ಇದಾಗ್ಯೂ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗೆಲ್ಲುವ ಮೂಲಕ ಸಿಎಸ್ಕೆ ಕೂಡ ಗೆಲುವಿನ ಖಾತೆ ತೆರೆದಿದೆ. ಹೀಗಾಗಿ ಅಂತಿಮ ಹಣಾಹಣಿಯಲ್ಲಿ ರೋಚಕ ಹೋರಾಟ ನಿರೀಕ್ಷಿಸಬಹುದು.
ಇನ್ನು ಗುಜರಾತ್ ಟೈಟಾನ್ಸ್ ವಿರುದ್ಧ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಜಯ ಸಾಧಿಸಿರುವ ಸಿಎಸ್ಕೆ ತಂಡವು ಫೈನಲ್ನಲ್ಲೂ ಅದೇ ಬಳಗವನ್ನು ಕಣಕ್ಕಿಳಿಸಬಹುದು.
ಹಾಗೆಯೇ ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ಫೈನಲ್ಗೆ ಪ್ರವೇಶಿಸಿರುವ ಗುಜರಾತ್ ಟೈಟಾನ್ಸ್ ತಂಡದ ಆಡುವ ಬಳಗದಲ್ಲಿ ಬದಲಾವಣೆ ಕಂಡು ಬರುವ ಸಾಧ್ಯತೆಯಿಲ್ಲ. ಅದರಂತೆ ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್ ಹೀಗಿರಲಿದೆ.
ಸಿಎಸ್ಕೆ ಪ್ಲೇಯಿಂಗ್ ಇಲೆವೆನ್: ರುತುರಾಜ್ ಗಾಯಕ್ವಾಡ್ , ಡೆವೊನ್ ಕಾನ್ವೇ , ಅಜಿಂಕ್ಯ ರಹಾನೆ , ಅಂಬಟಿ ರಾಯುಡು , ಶಿವಂ ದುಬೆ , ಮೊಯೀನ್ ಅಲಿ , ರವೀಂದ್ರ ಜಡೇಜಾ , ಎಂಎಸ್ ಧೋನಿ (ನಾಯಕ) , ದೀಪಕ್ ಚಾಹರ್ , ತುಷಾರ್ ದೇಶಪಾಂಡೆ , ಮಹೇಶ್ ತೀಕ್ಷಣ.
ಗುಜರಾತ್ ಟೈಟಾನ್ಸ್ ಪ್ಲೇಯಿಂಗ್ ಇಲೆವೆನ್: ವೃದ್ಧಿಮಾನ್ ಸಾಹ, ಶುಭಮನ್ ಗಿಲ್ , ಸಾಯಿ ಸುದರ್ಶನ್ , ವಿಜಯ್ ಶಂಕರ್ , ಹಾರ್ದಿಕ್ ಪಾಂಡ್ಯ (ನಾಯಕ) , ಡೇವಿಡ್ ಮಿಲ್ಲರ್ , ರಾಹುಲ್ ತೆವಾಟಿಯಾ , ರಶೀದ್ ಖಾನ್ , ಮೋಹಿತ್ ಶರ್ಮಾ , ನೂರ್ ಅಹ್ಮದ್ , ಮೊಹಮ್ಮದ್ ಶಮಿ.