- Kannada News Photo gallery Cricket photos Kannada News - IPL 2023: Purple Cap Race Between GT Bowlers
IPL 2023: ಪರ್ಪಲ್ ಕ್ಯಾಪ್ಗಾಗಿ ಗುಜರಾತ್ ಟೈಟಾನ್ಸ್ ತಂಡದ 3 ಬೌಲರ್ಗಳ ನಡುವೆ ಪೈಪೋಟಿ
IPL 2023 Kannada: ಪರ್ಪಲ್ ಕ್ಯಾಪ್ ರೇಸ್ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ಮೂವರು ಬೌಲರ್ಗಳಿದ್ದಾರೆ. ಸಿಎಸ್ಕೆ ವಿರುದ್ಧ ಯಾರು ಹೆಚ್ಚು ವಿಕೆಟ್ ಪಡೆಯುತ್ತಾರೋ ಅವರಿಗೆ ಪರ್ಪಲ್ ಕ್ಯಾಪಿ ಒಲಿಯುವುದು ಖಚಿತ.
Updated on: May 27, 2023 | 10:23 PM

IPL 2023 Final: ಐಪಿಎಲ್ ಸೀಸನ್-16 ಫೈನಲ್ ಪಂದ್ಯಕ್ಕೆ ಕೌಂಟ್ ಡೌನ್ ಶುರುವಾಗಿದೆ. ಅಂತಿಮ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದೆ.

ಫೈನಲ್ ಪಂದ್ಯದ ಮುಕ್ತಾಯದ ಬೆನ್ನಲ್ಲೇ ಪ್ರಶಸ್ತಿ ಸಮಾರಂಭ ನಡೆಯಲಿದ್ದು, ಈ ಬಾರಿಯ ಟೂರ್ನಿಯಲ್ಲಿ ಅತೀ ಹೆಚ್ಚು ರನ್ ಕಲೆಹಾಕಿದ ಶುಭ್ಮನ್ ಗಿಲ್ಗೆ ಆರೆಂಜ್ ಕ್ಯಾಪ್ ಒಲಿಯುವುದು ಖಚಿತವಾಗಿದೆ. ಆದರೆ ಪರ್ಪಲ್ ಕ್ಯಾಪ್ ಯಾರಿಗೆ ಸಿಗಲಿದೆ ಎಂಬುದು ಫೈನಲ್ ಪಂದ್ಯದಲ್ಲೇ ನಿರ್ಧಾರವಾಗಲಿದೆ.

ಏಕೆಂದರೆ ಪರ್ಪಲ್ ಕ್ಯಾಪ್ ರೇಸ್ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ಮೂವರು ಬೌಲರ್ಗಳಿದ್ದಾರೆ. ಸಿಎಸ್ಕೆ ವಿರುದ್ಧ ಯಾರು ಹೆಚ್ಚು ವಿಕೆಟ್ ಪಡೆಯುತ್ತಾರೋ ಅವರಿಗೆ ಪರ್ಪಲ್ ಕ್ಯಾಪಿ ಒಲಿಯುವುದು ಖಚಿತ. ಹಾಗಿದ್ರೆ ಈ ಮೂವರು ಬೌಲರ್ಗಳ ವಿಕೆಟ್ಗಳ ಸಂಖ್ಯೆಗಳೆಷ್ಟೆಂದು ನೋಡೋಣ...

1- ಮೊಹಮ್ಮದ್ ಶಮಿ: ಸದ್ಯ ಪರ್ಪಲ್ ಕ್ಯಾಪ್ ರೇಸ್ನಲ್ಲಿ ಅಗ್ರಸ್ಥಾನದಲ್ಲಿರುವುದು ಮೊಹಮ್ಮದ್ ಶಮಿ. 16 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿರುವ ಶಮಿ ಒಟ್ಟು 28 ವಿಕೆಟ್ಗಳನ್ನು ಕಬಳಿಸಿ ಪರ್ಪಲ್ ಕ್ಯಾಪ್ ರೇಸ್ನಲ್ಲಿ ಮುಂಚೂಣಿಯಲ್ಲಿದ್ದಾರೆ.

2- ರಶೀದ್ ಖಾನ್: ಸ್ಪಿನ್ ಮಾಂತ್ರಿಕ ರಶೀದ್ ಖಾನ್ ಕೂಡ ಪರ್ಪಲ್ ಕ್ಯಾಪ್ ರೇಸ್ನಲ್ಲಿದ್ದು, 16 ಇನಿಂಗ್ಸ್ಗಳಲ್ಲಿ 27 ವಿಕೆಟ್ ಕಬಳಿಸಿ 2ನೇ ಸ್ಥಾನದಲ್ಲಿದ್ದಾರೆ. ಅಂದರೆ ಶಮಿ ಹಾಗೂ ರಶೀದ್ ಖಾನ್ ನಡುವೆ ಕೇವಲ 1 ವಿಕೆಟ್ನ ಅಂತರವಿದೆ.

3- ಮೋಹಿತ್ ಶರ್ಮಾ: ಮುಂಬೈ ಇಂಡಿಯನ್ಸ್ ವಿರುದ್ಧ 5 ವಿಕೆಟ್ ಕಬಳಿಸುವ ಮೂಲಕ ಮೋಹಿತ್ ಶರ್ಮಾ ಕೂಡ ಪರ್ಪಲ್ ಕ್ಯಾಪ್ ರೇಸ್ಗೆ ಎಂಟ್ರಿ ಕೊಟ್ಟಿದ್ದಾರೆ. 13 ಇನಿಂಗ್ಸ್ ಮೂಲಕ 24 ವಿಕೆಟ್ ಕಬಳಿಸಿರುವ ಮೋಹಿತ್ ಶರ್ಮಾಗೂ ಪರ್ಪಲ್ ಕ್ಯಾಪ್ ಗೆಲ್ಲುವ ಉತ್ತಮ ಅವಕಾಶವಿದೆ.

ಹೀಗಾಗಿ ಪರ್ಪಲ್ ಕ್ಯಾಪ್ ಪ್ರಶಸ್ತಿ ಪಡೆಯುವವರು ಯಾರು ಎಂದು ತಿಳಿಯಲು ಫೈನಲ್ ಪಂದ್ಯದ ಮುಕ್ತಾಯದವರೆಗೆ ಕಾಯಲೇಬೇಕು.



















