IPL 2023 Final: ಐಪಿಎಲ್ ಫೈನಲ್ನಲ್ಲಿ CSK ಗೆದ್ದಿದ್ದಕ್ಕಿಂತ ಸೋತಿದ್ದೇ ಹೆಚ್ಚು..!
IPL 2023 Final CSK vs GT: 2 ವರ್ಷಗಳ ಬ್ಯಾನ್ ಬಳಿಕ 2018 ರಲ್ಲಿ ಮತ್ತೆ ಕಂಬ್ಯಾಕ್ ಮಾಡಿದ ಸಿಎಸ್ಕೆ ತಂಡವು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಗೆದ್ದು ಮತ್ತೆ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.
Updated on: May 27, 2023 | 9:22 PM

IPL 2023 CSK vs GT: ಐಪಿಎಲ್ನ 16ನೇ ಆವೃತ್ತಿಗೆ ಭಾನುವಾರ ತೆರೆ ಬೀಳಲಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದೆ.

ವಿಶೇಷ ಎಂದರೆ ಈ ಪಂದ್ಯದಲ್ಲಿ ಸಿಎಸ್ಕೆ ತಂಡ ಗೆದ್ದರೆ ಐದನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಲಿದೆ. ಸಿಎಸ್ಕೆ ಸೋತರೆ ಗುಜರಾತ್ ಟೈಟಾನ್ಸ್ 2ನೇ ಬಾರಿ ಕಿರೀಟ ಮುಡಿಗೇರಿಸಿಕೊಳ್ಳಲಿದೆ. ಇಲ್ಲಿ ಗುಜರಾತ್ ಟೈಟಾನ್ಸ್ ಕೇವಲ 2 ಸೀಸನ್ಗಳ ಮೂಲಕ 2 ಬಾರಿ ಫೈನಲ್ಗೇರಿದರೆ, ಸಿಎಸ್ಕೆ ತಂಡವು 14 ಸೀಸನ್ಗಳ ಮೂಲಕ 10ನೇ ಬಾರಿ ಫೈನಲ್ ಪ್ರವೇಶಿಸಿದೆ.

ಆದರೆ 9 ಬಾರಿ ಫೈನಲ್ ಆಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಅಂತಿಮ ಪಂದ್ಯದಲ್ಲಿ ಗೆದ್ದಿದ್ದಕ್ಕಿಂತ ಸೋತಿದ್ದೇ ಹೆಚ್ಚು. ಅಂದರೆ ಹತ್ತು ಫೈನಲ್ಗಳಲ್ಲಿ ಧೋನಿ ಪಡೆ 5 ಬಾರಿ ಸೋಲನುಭವಿಸಿದೆ.

2008 ರಲ್ಲಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ್ದ ಸಿಎಸ್ಕೆ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋತು ರನ್ನರ್ ಅಪ್ ಪಟ್ಟಕ್ಕೆ ತೃಪ್ತಿಪಟ್ಟುಕೊಂಡಿತ್ತು. ಇದಾದ ಬಳಿಕ 2010 ರಲ್ಲಿ ಮುಂಬೈ ಇಂಡಿಯನ್ಸ್ ಅನ್ನು ಸೋಲಿಸಿ ಮೊದಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿತು.

ಇನ್ನು 2011 ರಲ್ಲಿ ಆರ್ಸಿಬಿಗೆ ಸೋಲುಣಿಸಿ ಚಾಂಪಿಯನ್ ಆದರೆ, 2012 ರ ಫೈನಲ್ನಲ್ಲಿ ಕೆಕೆಆರ್ ವಿರುದ್ಧ ಸೋಲನುಭವಿಸಿತು. ಹಾಗೆಯೇ 2013 ರಲ್ಲಿ ಸಿಎಸ್ಕೆಗೆ ಸೋಲುಣಿಸಿ ಮುಂಬೈ ಇಂಡಿಯನ್ಸ್ ತಂಡವು ಮೊದಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿತು. 2015 ರಲ್ಲಿ ಮತ್ತೆ ಫೈನಲ್ ಪ್ರವೇಶಿಸಿದ ಸಿಎಸ್ಕೆ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ ಮುಗ್ಗರಿಸಿತು.

2 ವರ್ಷಗಳ ಬ್ಯಾನ್ ಬಳಿಕ 2018 ರಲ್ಲಿ ಮತ್ತೆ ಕಂಬ್ಯಾಕ್ ಮಾಡಿದ ಸಿಎಸ್ಕೆ ತಂಡವು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಗೆದ್ದು ಮತ್ತೆ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಆದರೆ 2019 ರ ಫೈನಲ್ನಲ್ಲಿ ಸಿಎಸ್ಕೆ ತಂಡಕ್ಕೆ ಮುಂಬೈ ಇಂಡಿಯನ್ಸ್ ಸೋಲುಣಿಸಿತು.

ಇದಾದ ಬಳಿಕ 2021 ರಲ್ಲಿ ಮತ್ತೆ ಫೈನಲ್ಗೆ ಪ್ರವೇಶಿಸಿದ ಸಿಎಸ್ಕೆ ತಂಡವು ಕೆಕೆಆರ್ ವಿರುದ್ಧ ಜಯ ಸಾಧಿಸಿತು. ಇದೀಗ 10ನೇ ಬಾರಿಗೆ ಫೈನಲ್ಗೆ ಲಗ್ಗೆಯಿಟ್ಟಿದೆ.

ಅಂದರೆ 2008, 2012, 2013, 2015, 2019 ರ ಐಪಿಎಲ್ ಫೈನಲ್ನಲ್ಲಿ ಸೋತಿರುವ ಸಿಎಸ್ಕೆ ತಂಡವು ಈ ಬಾರಿ ಗೆದ್ದರೆ 5 ಚಾಂಪಿಯನ್ ಪಟ್ಟ ಅಲಂಕರಿಸಿದ 2ನೇ ತಂಡ ಎನಿಸಿಕೊಳ್ಳಲಿದೆ. ಈ ಪಟ್ಟಿಯಲ್ಲಿ 6 ಬಾರಿ ಫೈನಲ್ ಆಡಿ 5 ಸಲ ಪ್ರಶಸ್ತಿ ಮುಡಿಗೇರಿಸಿಕೊಂಡ ಮುಂಬೈ ಇಂಡಿಯನ್ಸ್ ಅಗ್ರಸ್ಥಾನದಲ್ಲಿದೆ.

TV9 Kannada
Read More



