- Kannada News Photo gallery Cricket photos Kannada News | IPL 2023 Final CSK vs GT Narendra Modi stadium Pitch in Ahmedabad has favoured the batters
CSK vs GT Pitch Report: ಮೊದಲು ಬ್ಯಾಟ್ ಮಾಡಿದ ತಂಡಕ್ಕೇ ಹೆಚ್ಚು ಗೆಲುವು: ನರೇಂದ್ರ ಮೋದಿ ಸ್ಟೇಡಿಯಂ ಪಿಚ್ ಹೇಗಿದೆ ನೋಡಿ
Narendra Modi Stadium Pitch Report: ಇಂದು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ಐಪಿಎಲ್ 2023 ಫೈನಲ್ನಲ್ಲಿ ಮುಖಾಮುಖಿ ಆಗಲಿದೆ. ಹಾಲಿ ಚಾಂಪಿಯನ್ ಮತ್ತು ಮಾಜಿ ಚಾಂಪಿಯನ್ನರ್ ಕಾದಾಟಕ್ಕೆ ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂ ಸಾಕ್ಷಿಯಾಗಲಿದೆ.
Updated on: May 28, 2023 | 8:04 AM

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಕೊನೆಯ ದಿನಕ್ಕೆ ಬಂದು ನಿಂತಿದೆ. ಸುಮಾರು ಎರಡು ತಿಂಗಳುಗಳಿಂದ ನಡೆಯುತ್ತಿರುವ ಐಪಿಎಲ್ ಹಬ್ಬಕ್ಕೆ ಇಂದು ತೆರೆ ಬೀಳಲಿದೆ. ಇನ್ನು ಉಳಿದಿರುವುದು ಕೇವಲ ಒಂದು ಪಂದ್ಯ ಮಾತ್ರ.

ಇಂದು ಮೇ 28 ಭಾನುವಾರ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಹಾರ್ದಿಕ್ ಪಾಂಡ್ಯ ಅವರ ಗುಜರಾತ್ ಟೈಟಾನ್ಸ್ ಐಪಿಎಲ್ 2023 ಫೈನಲ್ನಲ್ಲಿ ಮುಖಾಮುಖಿ ಆಗಲಿದೆ. ಹಾಲಿ ಚಾಂಪಿಯನ್ ಮತ್ತು ಮಾಜಿ ಚಾಂಪಿಯನ್ನರ್ ಕಾದಾಟಕ್ಕೆ ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂ ಸಾಕ್ಷಿಯಾಗಲಿದೆ.

ಅತಿ ದೊಡ್ಡ ಕ್ರೀಡಾಂಗಣ ಎಂಬ ಹೆಸರು ಪಡೆದುಕೊಂಡಿರುವ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದೆ. ಪಂದ್ಯದ ಆರಂಭದಲ್ಲಿ ಬ್ಯಾಟಿಂಗ್‌ಗೆ ಯೋಗ್ಯವಾಗಿದ್ದರೆ, ಪಂದ್ಯ ಸಾಗುತ್ತಿದ್ದಂತೆ ಇಲ್ಲಿನ ವಿಕೆಟ್ ಸ್ಪಿನ್ನರ್‌ಗಳು ಪರಿಣಾಮಕಾರಿಯಾಗಲಿದ್ದಾರೆ.

ಈ ಮೈದಾನದಲ್ಲಿ 180 ಅಥವಾ ಅದಕ್ಕಿಂತಲೂ ಹೆಚ್ಚು ರನ್ ಉತ್ತಮ ಸ್ಕೋರ್ ಆಗಲಿದ್ದು, ಟಾಸ್ ಗೆದ್ದ ನಾಯಕ ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು. ಸುಮಾರು 114,000 ಜನರ ಆಸನ ಸಾಮರ್ಥ್ಯವನ್ನು ಈ ಕ್ರೀಡಾಂಗಣ ಹೊಂದಿದೆ.

ದ್ವಿತೀಯ ಇನಿಂಗ್ಸ್ ವೇಳೆ ಬೌಲಿಂಗ್ ಮಾಡುವಾಗ ಹುಲ್ಲು ಹಾಸಿನ ಮೇಲೆ ಕಾಣಿಸಿಕೊಳ್ಳುವ ಇಬ್ಬನಿ ಪ್ರಮುಖ ಪಾತ್ರ ವಹಿಸಲಿದೆ. ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಈ ಮೈದಾನ 8 ಪಂದ್ಯಗಳಿಗೆ ಅತಿಥ್ಯ ವಹಿಸಿದ್ದು, 5 ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿದ್ದ ತಂಡ ಜಯಿಸಿದ್ದರೆ, 3 ಪಂದ್ಯಗಳಲ್ಲಿ ಚೇಸ್ ಮಾಡಿದ ತಂಡ ಗೆಲುವನ್ನು ಕಸಿದಿದೆ.

ಗುಜರಾತ್ ಟೈಟನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಎರಡು ತಂಡಗಳಲ್ಲಿಯೂ ಗುಣಮಟ್ಟದ ಬ್ಯಾಟ್ಸ್‌ಮನ್‌ಗಳಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ರನ್ ಹೊಳೆ ಹರಿಯುವ ಸಾಧ್ಯತೆ ಇದೆ.

ಚೆನ್ನೈ-ಗುಜರಾತ್ ರೋಚಕ ಕಾದಾಟ ಆರಂಭಕ್ಕೂ ಮುನ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಬಿಸಿಸಿಐ ಐಪಿಎಲ್ 2023 ಸಮಾರೋಪ ಸಮಾರಂಭ ಏರ್ಪಡಿಸಲು ಮುಂದಾಗಿದೆ. ಇದರಲ್ಲಿ ಖ್ಯಾತ ರ್ಯಾಪರ್ಗಳು ಪ್ರದರ್ಶನ ನೀಡಲಿದ್ದಾರೆ. ಸಮಾರೋಪ ಸಮಾರಂಭ ಸಂಜೆ 6 ಗಂಟೆ ಸುಮಾರಿಗೆ ಆರಂಭವಾಗಲಿದೆ.
