IPL 2023: ಕೊಹ್ಲಿಯನ್ನು ಕೆಣಕಿದ್ದಕ್ಕೆ ರಿವೇಂಜ್? ನವೀನ್​ಗೆ ತಿರುಗೇಟು ಕೊಟ್ಟ ಮುಂಬೈ ಆಟಗಾರರು ..!

|

Updated on: May 25, 2023 | 3:48 PM

IPL 2023: ಇಡೀ ಟೂರ್ನಿಯಲ್ಲಿ ಲಕ್ನೋ ತಂಡ ತನ್ನ ಆಟದಿಂದ ಹೆಸರುವಾಸಿಯಾಗಿದಕ್ಕಿಂತ ಹೆಚ್ಚಾಗಿ ತಂಡದ ವೇಗಿ ನವೀನ್ ಉಲ್ ಹಕ್ ಮಾಡಿಕೊಂಡ ರಾದ್ಧಾಂತಗಳಿಂದಲೇ ಹೆಚ್ಚು ಚರ್ಚೆಯಲ್ಲಿತ್ತು.

1 / 7
ಮುಂಬೈ ಇಂಡಿಯನ್ಸ್ ಕ್ವಾಲಿಫೈಯರ್ 2 ಪ್ರವೇಶಿಸಿದೆ. ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ತಂಡ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು 81 ರನ್‌ಗಳಿಂದ ಸೋಲಿಸಿತು. ಇದರೊಂದಿಗೆ ಎಲಿಮಿನೇಟರ್​ನಲ್ಲಿಯೇ ಲಕ್ನೋ ಪಯಣ ಅಂತ್ಯಗೊಂಡಿದೆ.

2 / 7
ಇಡೀ ಟೂರ್ನಿಯಲ್ಲಿ ಲಕ್ನೋ ತಂಡ ತನ್ನ ಆಟದಿಂದ ಹೆಸರುವಾಸಿಯಾಗಿದಕ್ಕಿಂತ ಹೆಚ್ಚಾಗಿ ತಂಡದ ವೇಗಿ ನವೀನ್ ಉಲ್ ಹಕ್ ಮಾಡಿಕೊಂಡ ರಾದ್ಧಾಂತಗಳಿಂದಲೇ ಹೆಚ್ಚು ಚರ್ಚೆಯಲ್ಲಿತ್ತು. ಇದೀಗ ಐಪಿಎಲ್ ಪಯಣ ಮುಗಿಸಿರುವ ನವೀನ್​ಗೆ ಕೊನೆಯ ಪಂದ್ಯದಲ್ಲೂ ಮುಜುಗರ ಎದುರಾಗಿದೆ.

3 / 7
ಲಕ್ನೋ ತಂಡವನ್ನು 81 ರನ್​ಗಳಿಂದ ಮಣಿಸಿದ ಮುಂಬೈ ಪಾಳಯದಲ್ಲಿ ಸಂಭ್ರಮ ಮುಗಿಲು ಮುಟ್ಟಿತು. ಅದರಲ್ಲೂ ತಂಡದ ಯುವ ಆಟಗಾರರು ಮಾವಿನ ಹಣ್ಣುಗಳ ಮುಂದೆ ಕುಳಿತು ತೆಗೆದುಕೊಂಡಿರುವ ಫೋಟೋ ಇದೀಗ ಸಖತ್ ವೈರಲ್ ಆಗುತ್ತಿದೆ. ಲಕ್ನೋ ವೇಗಿ ನವೀನ್​ಗೆ ಟಕ್ಕರ್ ಕೊಡಲೆಂದೆ ಮುಂಬೈ ಆಟಗಾರರು ಈ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ ಎಂಬ ಕೂಗು ಕೇಳಿಬರುತ್ತಿದೆ.

4 / 7
ವಾಸ್ತವವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ವಿರಾಟ್ ಕೊಹ್ಲಿ ಜತೆ ನವೀನ್ ಉಲ್ ಹಕ್ ಜೊತೆ ಮಾತಿನ ಚಕಮಕಿ ನಡೆಸಿದ್ದರು. ಈ ಇಬ್ಬರ ನಡುವಿನ ಕಾದಾಟ ಐಪಿಎಲ್​ಗೆ ಮತ್ತಷ್ಟು ರಂಗುತಂದಿತ್ತು. ಇದು ಇಷ್ಟಕ್ಕೆ ನಿಲ್ಲದೆ ಕೊಹ್ಲಿ ವಿಕೆಟ್ ಬಿದ್ದ ಬಳಿಕ ನವೀನ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಾವಿನ ಹಣ್ಣಿನ ಫೋಟೋ ಹಾಕಿ ಕೊಹ್ಲಿಯನ್ನು ಟ್ರೋಲ್ ಮಾಡಲು ಯತ್ನಿಸಿದ್ದರು.

5 / 7
ಇದಾದ ಬಳಿಕ ನವೀನ್ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಇದೀಗ ಮುಂಬೈ ವಿರುದ್ಧ ಮತ್ತೆ ತಂಡಕ್ಕೆ ಎಂಟ್ರಿಕೊಟ್ಟಿದ್ದ ನವೀನ್ ಫಾರ್ಮ್‌ಗೆ ಮರಳಿ ಮುಂಬೈ ಇಂಡಿಯನ್ಸ್‌ನ 3 ಆಟಗಾರರನ್ನು ಬಲಿಪಶು ಮಾಡಿದ್ದರು. ನವೀನ್ 38 ರನ್ ನೀಡಿ 4 ವಿಕೆಟ್ ಪಡೆದರು. ಈ 4 ವಿಕೆಟ್ ಪಡೆದಾಗಲೂ ನವೀನ್ ತಮ್ಮ ಕಿವಿಗಳನ್ನು ಮುಚ್ಚಿ ಹಿಡಿದು ವಿಭಿನ್ನವಾಗಿ ಸಂಭ್ರಮಿಸಿದ್ದರು. ಇದು ಕೂಡ ಸಾಕಷ್ಟು ಚರ್ಚೆ ಹುಟ್ಟು ಹಾಕಿತ್ತು.

6 / 7
ಪಂದ್ಯ ಮುಗಿದ ಬಳಿಕ ಮುಂಬೈ ಆಟಗಾರರು ಕೂಡ ನವೀನ್​ಗೆ ಸರಿಯಾಗಿ ಟಾಂಗ್ ನೀಡಿದ್ದು, ಟೇಬಲ್‌ ಮೇಲೆ ಮೂರು ಮಾವಿನ ಹಣ್ಣುಗಳನ್ನು ಇಟ್ಟಿರುವ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದ ಸಂದೀಪ್‌ ವಾರಿಯರ್‌, ಈ ಫೋಟೋಗೆ ಮಾವಿನ ಸಿಹಿ ಸೀಸನ್ ಎಂದು ಶೀರ್ಷಿಕೆ ನೀಡಿದ್ದಾರೆ. ಈ ಫೋಟೋದಲ್ಲಿ ಸಂದೀಪ್ ವಾರಿಯರ್‌ ಕಣ್ಣು ಮುಚ್ಚಿದ್ದರೆ, ಕುಮಾರ ಕಾರ್ತಿಕೇಯ ಬಾಯಿ ಮುಚ್ಚಿಕೊಂಡಿದ್ದಾರೆ ಹಾಗೂ ವಿಷ್ಣು ವಿನೋದ್‌ ಕಿವಿಯನ್ನು ಮುಚ್ಚಿಕೊಂಡಿರುವುದನ್ನು ನೋಡಬಹುದು.

7 / 7
ಈ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಸಖತ್ ವೈರಲ್ ಆಗಿದೆ. ಇದನ್ನು ಗಮನಿಸಿದ ಸಂದೀಪ್ ಕೂಡಲೇ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ. ಆದರೆ ಅಷ್ಟರಲ್ಲಾಗಲೇ ಈ ಫೋಟೋ ಸಖತ್ ವೈರಲ್ ಆಗಿದೆ

Published On - 3:31 pm, Thu, 25 May 23