
IPL 2023 Opening Ceremony: ಇಂಡಿಯನ್ ಪ್ರೀಮಿಯರ್ ಲೀಗ್ನ 16ನೇ ಆವೃತ್ತಿಗೆ ಅಧಿಕೃತ ಚಾಲನೆ ದೊರೆತಿದೆ.

ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ವರ್ಣರಂಜಿತ ಉದ್ಘಾಟನಾ ಸಮಾರಂಭದಲ್ಲಿ ಖ್ಯಾತ ಗಾಯಕ ಅರಿಜಿತ್ ಸಿಂಗ್ ಅವರ ಗಾನ ಬಜಾನದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಆ ಬಳಿಕ ಬಹುಭಾಷಾ ನಟಿ ತಮನ್ನಾ ಭಾಟಿಯಾ ಕೆಲ ಚಿತ್ರ ಗೀತೆಗಳಿಗೆ ನರ್ತಿಸುವ ಮೂಲಕ ಗಮನ ಸೆಳೆದರು.

ಆ ಬಳಿಕ ವೇದಿಕೆಗೆ ಆಗಮಿಸಿದ ರಶ್ಮಿಕಾ ಮಂದಣ್ಣ ಗುಜರಾತಿ ಹಾಗೂ ತಮಿಳಿನಲ್ಲಿ ಮಾತನಾಡುವ ಮೂಲಕ ಪ್ರೇಕ್ಷಕರನ್ನು ಹುರಿದುಂಬಿಸಿದರು.

ಜನಪ್ರಿಯ ತಮಿಳು ಗೀತೆ ಟಂ ಟಂ ಹಾಡಿಗೆ ನೃತ್ಯ ಮಾಡುವ ಮೂಲಕ ತಮನ್ನಾ ಭಾಟಿಯಾ ಪ್ರೇಕ್ಷಕರನ್ನು ರಂಜಿಸಿದರು.

ರಶ್ಮಿಕಾ ಮಂದಣ್ಣ "ಪುಷ್ಪಾ" ಚಿತ್ರದ "ಸಾಮಿ" ಹಾಡಿನ ಮೂಲಕ ಎಂಟ್ರಿ ಕೊಟ್ಟ ಕೊಡಗಿನ ಬೆಡಗಿ, ನಂತರ "ಶ್ರೀವಲ್ಲಿ" ಮತ್ತು ಪ್ರಸಿದ್ಧ "RRR" ನಿಂದ "ನಾಟು ನಾಟು" ಹಾಡುಗಳಿಗೆ ನರ್ತಿಸಿದರು.

ಹಿಟ್ ಗೀತೆಗಳಿಗೆ ಡ್ಯಾನ್ಸ್ ಮಾಡುತ್ತಿರುವ ತಮನ್ನಾ ಭಾಟಿಯಾ

ರಶ್ಮಿಕಾ ಬಳಕುವ ಬಳ್ಳಿಯಂತೆ ಮೈ ಬಳುಕಿಸುತ್ತಿದ್ದರೆ, ಅತ್ತ ಸ್ಟೇಡಿಯಂನಲ್ಲಿ ಪ್ರೇಕ್ಷಕರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಅಲ್ಲದೆ ನಿರೀಕ್ಷೆಗೂ ಮೀರಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ರಶ್ಮಿಕಾ ಮಂದಣ್ಣ ಎಲ್ಲರನ್ನು ನಿಬ್ಬೆರಗಾಗಿಸಿದರು.

ಹಲವು ಜನಪ್ರಿಯ ಗೀತೆಗಳಿಗೆ ಭರ್ಜರಿ ಸ್ಟೆಪ್ಸ್ ಹಾಕಿದ ಮಿಲ್ಕಿ ಬ್ಯೂಟಿ

ವೇದಿಕೆಗೆ ವಿಶೇಷ ವಾಹನದಲ್ಲಿ ಆಗಮಿಸಿದ ಗುಜರಾತ್ ಟೈಟಾನ್ಸ್ ನಾಯಕ ಹಾರ್ದಿಕ್ ಪಾಂಡ್ಯ

ವಿಶೇಷ ವಾಹನದಲ್ಲಿ ವೇದಿಕೆಗೆ ಆಗಮಿಸಿದ ಸಿಎಸ್ಕೆ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ
Published On - 11:14 pm, Fri, 31 March 23