IPL 2023: ಪರ್ಪಲ್​ ಕ್ಯಾಪ್​ಗಾಗಿ ಗುಜರಾತ್ ಟೈಟಾನ್ಸ್ ತಂಡದ​ 3 ಬೌಲರ್​ಗಳ ನಡುವೆ ಪೈಪೋಟಿ

| Updated By: ಝಾಹಿರ್ ಯೂಸುಫ್

Updated on: May 27, 2023 | 10:23 PM

IPL 2023 Kannada: ಪರ್ಪಲ್​ ಕ್ಯಾಪ್ ರೇಸ್​ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ಮೂವರು ಬೌಲರ್​ಗಳಿದ್ದಾರೆ. ಸಿಎಸ್​ಕೆ ವಿರುದ್ಧ ಯಾರು ಹೆಚ್ಚು ವಿಕೆಟ್ ಪಡೆಯುತ್ತಾರೋ ಅವರಿಗೆ ಪರ್ಪಲ್ ಕ್ಯಾಪಿ ಒಲಿಯುವುದು ಖಚಿತ.

1 / 7
IPL 2023 Final: ಐಪಿಎಲ್ ಸೀಸನ್​-16 ಫೈನಲ್​ ಪಂದ್ಯಕ್ಕೆ ಕೌಂಟ್ ಡೌನ್ ಶುರುವಾಗಿದೆ. ಅಂತಿಮ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದೆ.

2 / 7
ಫೈನಲ್ ಪಂದ್ಯದ ಮುಕ್ತಾಯದ ಬೆನ್ನಲ್ಲೇ ಪ್ರಶಸ್ತಿ ಸಮಾರಂಭ ನಡೆಯಲಿದ್ದು, ಈ ಬಾರಿಯ ಟೂರ್ನಿಯಲ್ಲಿ ಅತೀ ಹೆಚ್ಚು ರನ್​ ಕಲೆಹಾಕಿದ ಶುಭ್​ಮನ್ ಗಿಲ್​ಗೆ ಆರೆಂಜ್ ಕ್ಯಾಪ್ ಒಲಿಯುವುದು ಖಚಿತವಾಗಿದೆ. ಆದರೆ ಪರ್ಪಲ್ ಕ್ಯಾಪ್​ ಯಾರಿಗೆ ಸಿಗಲಿದೆ ಎಂಬುದು ಫೈನಲ್ ಪಂದ್ಯದಲ್ಲೇ ನಿರ್ಧಾರವಾಗಲಿದೆ.

3 / 7
ಏಕೆಂದರೆ ಪರ್ಪಲ್​ ಕ್ಯಾಪ್ ರೇಸ್​ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ಮೂವರು ಬೌಲರ್​ಗಳಿದ್ದಾರೆ. ಸಿಎಸ್​ಕೆ ವಿರುದ್ಧ ಯಾರು ಹೆಚ್ಚು ವಿಕೆಟ್ ಪಡೆಯುತ್ತಾರೋ ಅವರಿಗೆ ಪರ್ಪಲ್ ಕ್ಯಾಪಿ ಒಲಿಯುವುದು ಖಚಿತ. ಹಾಗಿದ್ರೆ ಈ ಮೂವರು ಬೌಲರ್​ಗಳ ವಿಕೆಟ್​ಗಳ ಸಂಖ್ಯೆಗಳೆಷ್ಟೆಂದು ನೋಡೋಣ...

4 / 7
1- ಮೊಹಮ್ಮದ್ ಶಮಿ: ಸದ್ಯ ಪರ್ಪಲ್​ ಕ್ಯಾಪ್ ರೇಸ್​ನಲ್ಲಿ ಅಗ್ರಸ್ಥಾನದಲ್ಲಿರುವುದು ಮೊಹಮ್ಮದ್ ಶಮಿ. 16 ಇನಿಂಗ್ಸ್​ಗಳಲ್ಲಿ ಬೌಲಿಂಗ್ ಮಾಡಿರುವ ಶಮಿ ಒಟ್ಟು 28 ವಿಕೆಟ್​ಗಳನ್ನು ಕಬಳಿಸಿ ಪರ್ಪಲ್ ಕ್ಯಾಪ್ ರೇಸ್​ನಲ್ಲಿ ಮುಂಚೂಣಿಯಲ್ಲಿದ್ದಾರೆ.

5 / 7
2- ರಶೀದ್ ಖಾನ್: ಸ್ಪಿನ್ ಮಾಂತ್ರಿಕ ರಶೀದ್ ಖಾನ್ ಕೂಡ ಪರ್ಪಲ್​ ಕ್ಯಾಪ್ ರೇಸ್​ನಲ್ಲಿದ್ದು, 16 ಇನಿಂಗ್ಸ್​ಗಳಲ್ಲಿ 27 ವಿಕೆಟ್ ಕಬಳಿಸಿ 2ನೇ ಸ್ಥಾನದಲ್ಲಿದ್ದಾರೆ. ಅಂದರೆ ಶಮಿ ಹಾಗೂ ರಶೀದ್ ಖಾನ್ ನಡುವೆ ಕೇವಲ 1 ವಿಕೆಟ್​ನ ಅಂತರವಿದೆ.

6 / 7
3- ಮೋಹಿತ್ ಶರ್ಮಾ: ಮುಂಬೈ ಇಂಡಿಯನ್ಸ್ ವಿರುದ್ಧ 5 ವಿಕೆಟ್ ಕಬಳಿಸುವ ಮೂಲಕ ಮೋಹಿತ್ ಶರ್ಮಾ ಕೂಡ ಪರ್ಪಲ್​ ಕ್ಯಾಪ್ ರೇಸ್​ಗೆ ಎಂಟ್ರಿ ಕೊಟ್ಟಿದ್ದಾರೆ. 13 ಇನಿಂಗ್ಸ್​ ಮೂಲಕ 24 ವಿಕೆಟ್ ಕಬಳಿಸಿರುವ ಮೋಹಿತ್ ಶರ್ಮಾಗೂ ಪರ್ಪಲ್​ ಕ್ಯಾಪ್ ಗೆಲ್ಲುವ ಉತ್ತಮ ಅವಕಾಶವಿದೆ.

7 / 7
ಹೀಗಾಗಿ ಪರ್ಪಲ್ ಕ್ಯಾಪ್ ಪ್ರಶಸ್ತಿ ಪಡೆಯುವವರು ಯಾರು ಎಂದು ತಿಳಿಯಲು ಫೈನಲ್ ಪಂದ್ಯದ ಮುಕ್ತಾಯದವರೆಗೆ ಕಾಯಲೇಬೇಕು.