
ಈ ಬಾರಿಯ ಐಪಿಎಲ್ನಲ್ಲಿ ಪ್ರಶಸ್ತಿ ಗೆಲ್ಲುವ ಬಲಿಷ್ಠ ತಂಡಗಳಲ್ಲಿ ಒಂದಾಗಿ ಗುರುತಿಸಿಕೊಂಡಿದ್ದ ರಾಜಸ್ಥಾನ್ ರಾಯಲ್ಸ್ ತನ್ನ ಹೋರಾಟವನ್ನು ಲೀಗ್ನಲ್ಲಿಯೇ ಕೊನೆಗೊಳಿಸಿತು. ತಂಡದಲ್ಲಿ ಸಾಕಷ್ಟು ಪ್ರತಿಭಾವಂತ ಕ್ರಿಕೆಟಿಗರಿದ್ದರೂ ಈ ಬಾರಿ ಕಪ್ ಗೆಲ್ಲಲು ರಾಜಸ್ಥಾನ್ಗೆ ಸಾಧ್ಯವಾಗಲಿಲ್ಲ.

ಕಳೆದ ಬಾರಿ ಫೈನಲ್ಗೇರಿದ್ದ ರಾಜಸ್ಥಾನ್ ಈ ಬಾರಿ ಪ್ಲೇ ಆಫ್ಗೂ ಎಂಟ್ರಿಕೊಡಲಿಲ್ಲ. ಇದಕ್ಕೆ ಪ್ರಮುಖ ಕಾರಣ ವಿದೇಶಿ ಆಟಗಾರರ ವೈಫಲ್ಯ. ಕಳೆದ ಬಾರಿ ಅಬ್ಬರಿಸಿದ್ದ ಬಟ್ಲರ್ ಈ ಬಾರಿ 5 ಪಂದ್ಯಗಳಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಇನ್ನು ಹೆಟ್ಮಾಯಿರ್ ಕೂಡ ಸದ್ದು ಮಾಡಲಿಲ್ಲ.

ಇದು ಬ್ಯಾಟಿಂಗ್ ವಿಭಾಗದ ಕತೆಯಾದರೆ, ಬೌಲಿಂಗ್ನಲ್ಲಿ ಬೌಲ್ಟ್ ಉತ್ತಮ ಪ್ರದರ್ಶನ ನೀಡಿದರು. ಆದರೆ ಇಂಜುರಿ ಸಮಸ್ಯೆಗೆ ರಾಜಸ್ಥಾನ್ಗೆ ದುಬಾರಿಯಾಯಿತು. ಝಂಪಾ ಕೂಡ ಸದ್ದು ಮಾಡಲಿಲ್ಲ. ಈ ನಾಲ್ವರನ್ನು ಹೊರತುಪಡಿಸಿ ರಾಜಸ್ಥಾನ್ ತಂಡದಲ್ಲಿ ಪ್ರಮುಖ ವಿದೇಶಿ ಆಟಗಾರರಿದ್ದರೂ ಅವರಿಗೆ ಹೆಚ್ಚಿನ ಅವಕಾಶ ಸಿಗದೆ, ಅವರು ಬೆಂಚ್ ಕಾದಿದ್ದೆ ಬಂತು. ಅವರಲ್ಲಿ ಪ್ರಮುಖರು ಇಂಗ್ಲೆಂಡ್ ಮಾಜಿ ನಾಯಕ ಜೋ ರೂಟ್.

ಐಪಿಎಲ್ 2023 ರಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡಿದ್ದ ಇಂಗ್ಲೆಂಡ್‌ನ ದಿಗ್ಗಜ ಆಟಗಾರ ಜೋ ರೂಟ್ ಅವರನ್ನು ಫ್ರಾಂಚೈಸಿ 1 ಕೋಟಿ ರೂ.ಗೆ ಖರೀದಿಸಿತ್ತು. ಆಸಕ್ತಿ, ಅನುಭವ ಮತ್ತು ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡು ರೂಟ್ ಅವರಿಗೆ ರಾಜಸ್ಥಾನ ತಂಡ ಹೆಚ್ಚಿನ ಅವಕಾಶ ನೀಡುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಆಗಲಿಲ್ಲ.

ಮೊದಲಾರ್ಧದ ಐಪಿಎಲ್ನಲ್ಲಿ ಆಡುವ ಅವಕಾಶ ಪಡೆಯದ ರೂಟ್ ಐಪಿಎಲ್‌ನ ಎರಡನೇ ಹಂತದಲ್ಲಿ 3 ಪಂದ್ಯಗಳಿಗೆ ಆಡುವ ಅವಕಾಶ ಪಡೆದುಕೊಂಡರು. ಈ ಮೂರು ಪಂದ್ಯಗಳಲ್ಲಿ ಅವರಿಗೆ ಒಮ್ಮೆ ಮಾತ್ರ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿತ್ತು. ಅದರಲ್ಲಿ ಅವರು ಕೇವಲ 10 ರನ್ ಮಾತ್ರ ಬಾರಿಸಿದ್ದರು.

ಇನ್ನು ಜೋ ರೂಟ್ ಅವರ ಟಿ20 ವೃತ್ತಿಜೀವನದ ಬಗ್ಗೆ ಮಾತನಾಡುವುದಾದರೆ, ಅವರು 32 ಟಿ20 ಪಂದ್ಯಗಳಲ್ಲಿ 35.72 ರ ಸರಾಸರಿಯಲ್ಲಿ 126.31 ರ ಸ್ಟ್ರೈಕ್ ರೇಟ್‌ನೊಂದಿಗೆ 893 ರನ್ ಬಾರಿಸಿದ್ದಾರೆ. ಇದರಲ್ಲಿ 5 ಅರ್ಧಶತಕಗಳು ಸೇರಿವೆ. ಬೌಲಿಂಗ್ನಲ್ಲಿ ರೂಟ್ 6 ವಿಕೆಟ್ ಕೂಡ ಪಡೆದಿದ್ದಾರೆ.