IPL 2023: ರಜತ್ ಪಾಟಿದಾರ್ ಬದಲಿ ಆಟಗಾರ ಯಾರು? RCB ಮುಂದಿದೆ 3 ಆಯ್ಕೆ
TV9 Web | Updated By: ಝಾಹಿರ್ ಯೂಸುಫ್
Updated on:
Apr 06, 2023 | 6:23 PM
IPL 2023 Kannada: ಆರ್ಸಿಬಿ ತಂಡದಿಂದ ಹೊರಬಿದ್ದಾಗ ಅವರ ಬದಲಿಗೆ ರಜತ್ ಪಾಟಿದಾರ್ ಅವರನ್ನು ಆಯ್ಕೆ ಮಾಡಲಾಗಿತ್ತು. ಇದೀಗ ರಜತ್ ಪಾಟಿದಾರ್ ಬದಲಿಗೆ ಆರ್ಸಿಬಿ ಮುಂದೆ 3 ಆಯ್ಕೆಗಳಿವೆ. ಅವರೆಂದರೆ...
1 / 6
IPL 2023 RCB: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 16 ರಿಂದ ಆರ್ಸಿಬಿ ಆಟಗಾರ ರಜತ್ ಪಾಟಿದಾರ್ ಹೊರಬಿದ್ದಿದ್ದಾರೆ. ಪಾದದ ನೋವಿನ ಸಮಸ್ಯೆಯ ಕಾರಣ ಪಾಟಿದಾರ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಇದಾಗ್ಯೂ ಆರ್ಸಿಬಿ ಫ್ರಾಂಚೈಸಿ ಬದಲಿ ಆಟಗಾರನನ್ನು ಹೆಸರಿಸಿಲ್ಲ.
2 / 6
ಸಾಮಾನ್ಯವಾಗಿ ಆರ್ಸಿಬಿ ತಂಡದಿಂದ ಭಾರತೀಯ ಆಟಗಾರರು ಹೊರಬಿದ್ದರೆ, ಅವರ ಬದಲಿಯಾಗಿ ಮಾಜಿ ಆರ್ಸಿಬಿ ಆಟಗಾರರನ್ನು ಆಯ್ಕೆ ಮಾಡುವ ವಾಡಿಕೆಯಿದೆ. ಇದಕ್ಕೆ ಉದಾಹರಣೆ ಕಳೆದ ಸೀಸನ್ನಲ್ಲಿ ತಂಡದಲ್ಲಿದ್ದ ಲವ್ನೀತ್ ಸಿಸೋಡಿಯಾ ಆರ್ಸಿಬಿ ತಂಡದಿಂದ ಹೊರಬಿದ್ದಾಗ ಅವರ ಬದಲಿಗೆ ರಜತ್ ಪಾಟಿದಾರ್ ಅವರನ್ನು ಆಯ್ಕೆ ಮಾಡಿರುವುದು. ಇದೀಗ ರಜತ್ ಪಾಟಿದಾರ್ ಬದಲಿಗೆ ಆರ್ಸಿಬಿ ಮುಂದೆ 3 ಆಯ್ಕೆಗಳಿವೆ. ಅವರೆಂದರೆ...
3 / 6
ಸಚಿನ್ ಬೇಬಿ: 2021 ರ ಐಪಿಎಲ್ ವೇಳೆ ತಂಡದಲ್ಲಿದ್ದ ಆರ್ಸಿಬಿ ಮಾಜಿ ಅಟಗಾರ ಸಚಿನ್ ಬೇಬಿ ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಏಕೆಂದರೆ 2022-23 ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಸಚಿನ್ 206 ರನ್ ಕಲೆಹಾಕಿದ್ದರು. ಹಾಗೆಯೇ ರಣಜಿ ಟ್ರೋಫಿಯಲ್ಲಿ ಮೂರು ಶತಕಗಳನ್ನು ಒಳಗೊಂಡಂತೆ 83 ರ ಸರಾಸರಿಯಲ್ಲಿ 830 ರನ್ಗಳಿಸಿದ್ದಾರೆ. ಹೀಗಾಗಿ ಉತ್ತಮ ಫಾರ್ಮ್ನಲ್ಲಿರುವ ಸಚಿನ್ ಬೇಬಿಗೆ ಆರ್ಸಿಬಿ ಮಣೆಹಾಕಬಹುದು.
4 / 6
ಲವ್ನೀತ್ ಸಿಸೋಡಿಯಾ: ಕಳೆದ ಸೀಸನ್ನ ಆರಂಭದಲ್ಲಿ ಗಾಯಗೊಂಡು ಆರ್ಸಿಬಿ ತಂಡದಿಂದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಲವ್ನೀತ್ ಸಿಸೋಡಿಯಾ ಹೊರಬಿದ್ದಿದ್ದರು. ಇವರ ಬದಲಿಗೆ ರಜತ್ ಪಾಟಿದಾರ್ ಆಯ್ಕೆಯಾಗಿದ್ದರು. ಇದೀಗ ಪಾಟಿದಾರ್ ಹೊರಬಿದ್ದಿರುವ ಕಾರಣ ಅವರ ಸ್ಥಾನದಲ್ಲಿ ಲವ್ನೀತ್ ಸಿಸೋಡಿಯಾಗೆ ಸ್ಥಾನ ನೀಡಲಿದ್ದಾರಾ ಕಾದು ನೋಡಬೇಕಿದೆ.
5 / 6
ಮೊಹಮ್ಮದ್ ಅಜರುದ್ದೀನ್: ಐಪಿಎಲ್ 2021 ರ ಆರ್ಸಿಬಿ ತಂಡದಲ್ಲಿ ಸ್ಥಾನ ಪಡೆದಿದ್ದ ಕೇರಳದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಮೊಹಮ್ಮದ್ ಅಜರುದ್ದೀನ್ ಅವರನ್ನು ಈ ಬಾರಿ ಯಾವುದೇ ತಂಡ ಖರೀದಿಸಿಲ್ಲ. ದೇಶೀಯ ಅಂಗಳದ ಡ್ಯಾಶಿಂಗ್ ಬ್ಯಾಟ್ಸ್ಮನ್ ಎನಿಸಿಕೊಂಡಿರುವ ಅಜರ್ಗೆ ಈ ಬಾರಿ ಬದಲಿ ಆಟಗಾರನಾಗಿ ಆರ್ಸಿಬಿ ತಂಡಕ್ಕೆ ಮರಳಿದರೂ ಅಚ್ಚರಿಪಡಬೇಕಿಲ್ಲ.
6 / 6
RCB ತಂಡ ಹೀಗಿದೆ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಮೈಕೆಲ್ ಬ್ರೇಸ್ವೆಲ್, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್ವುಡ್, ಮೊಹಮ್ಮದ್ ಸಿರಾಜ್, ಕರ್ಣ್ ಶರ್ಮಾ, ಸಿದ್ಧಾರ್ಥ್ ಕೌಲ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್, ಗ್ಲೆನ್ ಮ್ಯಾಕ್ಸ್ವೆಲ್, ವನಿಂದು ಹಸರಂಗ, ಮಹಿಪಾಲ್ ಲೋಮ್ರರ್, ಶಹಬಾಝ್ ಅಹ್ಮದ್, ಹರ್ಷಲ್ ಪಟೇಲ್, ಆಕಾಶ್ ದೀಪ್, ಡೇವಿಡ್ ವಿಲ್ಲಿ, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಸೋನು ಯಾದವ್.