IPL 2023: RCB vs GT ಪಂದ್ಯಕ್ಕೆ ಮಳೆ ಭೀತಿ: ಮ್ಯಾಚ್ ರದ್ದಾದರೆ ಯಾರಿಗೆ ಲಾಭ?

| Updated By: ಝಾಹಿರ್ ಯೂಸುಫ್

Updated on: May 20, 2023 | 10:53 PM

IPL 2023 Kannada: ಆರ್​ಸಿಬಿ 16 ಅಂಕಗಳನ್ನು ಕಲೆಹಾಕಿದರೆ ಮಾತ್ರ ಪ್ಲೇಆಫ್ ಪ್ರವೇಶಿಸುವ ಅವಕಾಶ ದೊರೆಯಲಿದೆ. ಹೀಗಾಗಿ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯವು ಆರ್​ಸಿಬಿ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ.

1 / 6
IPL 2023 RCB vs GT: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾನುವಾರ ರಾತ್ರಿ ನಡೆಯಲಿರುವ ಆರ್​ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ನಡುವಣ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ. ಆರ್​ಸಿಬಿ ಪಾಲಿಗೆ ನಿರ್ಣಾಯಕವಾಗಿರುವ ಈ ಪಂದ್ಯದಲ್ಲಿ ಗೆದ್ದು 2 ಅಂಕಗಳನ್ನು ಗಳಿಸಲೇಬೇಕಿದೆ.

2 / 6
ಏಕೆಂದರೆ ಆರ್​ಸಿಬಿ 16 ಅಂಕಗಳನ್ನು ಕಲೆಹಾಕಿದರೆ ಮಾತ್ರ ಪ್ಲೇಆಫ್ ಪ್ರವೇಶಿಸುವ ಅವಕಾಶ ದೊರೆಯಲಿದೆ. ಹೀಗಾಗಿ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯವು ಆರ್​ಸಿಬಿ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ.

3 / 6
ಆದರೆ ಅಕ್ಯುವೆದರ್​ ಮಾಹಿತಿ ಪ್ರಕಾರ, ಈ ಪಂದ್ಯಕ್ಕೆ ವರುಣ ಅಡಚಣೆಯನ್ನುಂಟು ಮಾಡಲಿದೆ. ಸಂಜೆ 4 ಗಂಟೆಯಿಂದ ಮೋಡ ಕವಿದ ವಾತಾವರಣ ಇರಲಿದೆ ಎಂದು ತಿಳಿಸಿದೆ.

4 / 6
ಅಲ್ಲದೆ ಸಂಜೆಯಿಂದ ಮಧ್ಯರಾತ್ರಿಯವರೆಗೂ ಮೋಡ ಕವಿದ ವಾತವರಣ ಇರಲಿದ್ದು, ಸಂಜೆ 5 ಗಂಟೆ, 7 ಗಂಟೆ ಹಾಗೂ 9 ಗಂಟೆಯ ವೇಳೆ ಮಳೆಯಾಗಲಿದೆ ಎಂದು ತಿಳಿಸಲಾಗಿದೆ. ಹೀಗಾಗಿಯೇ ಆರ್​ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ನಡುವಣ ಪಂದ್ಯ ನಡೆಯಲಿದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

5 / 6
ಒಂದು ವೇಳೆ ಮಳೆಯಿಂದಾಗಿ ಪಂದ್ಯ ರದ್ದಾದರೆ ಉಭಯ ತಂಡಗಳಿಗೆ ಒಂದೊಂದು ಅಂಕಗಳನ್ನು ಹಂಚಲಾಗುತ್ತದೆ. ಇದರಿಂದ ಆರ್​ಸಿಬಿ ಪ್ಲೇಆಫ್​ ಪ್ರವೇಶಿಸುವುದು ಅನುಮಾನ. ಏಕೆಂದರೆ ಮುಂಬೈ ಇಂಡಿಯನ್ಸ್ ನಾಳೆ ಗೆದ್ದರೆ 16 ಅಂಕಗಳನ್ನು ಸಂಪಾದಿಸಲಿದೆ. ಒಂದು ವೇಳೆ ಆರ್​ಸಿಬಿ-ಗುಜರಾತ್ ಟೈಟಾನ್ಸ್ ಪಂದ್ಯ ರದ್ದಾದರೆ, ಆರ್​ಸಿಬಿ 15 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್​ನಲ್ಲಿ ಹಿಂದುಳಿಯಲಿದೆ. ಅತ್ತ ಮುಂಬೈ ಇಂಡಿಯನ್ಸ್ ಗೆದ್ದರೆ ಪ್ಲೇಆಫ್ ಪ್ರವೇಶಿಸಲಿದೆ. ಹೀಗಾಗಿ ಮ್ಯಾಚ್ ರದ್ದಾದರೆ ಆರ್​ಸಿಬಿ ತಂಡದ ಪ್ಲೇಆಫ್ ಕನಸು ಕೂಡ ಕಮರಲಿದೆ.

6 / 6
ಇನ್ನು ಸಾಧಾರಣ ಮಳೆಯಾದರೆ ಪಂದ್ಯ ನಡೆಯುವುದು ಖಚಿತ. ಏಕೆಂದರೆ ಚಿನ್ನಸ್ವಾಮಿ ಸ್ಟೇಡಿಯಂ ಮೈದಾನದಲ್ಲಿ ಸಬ್ ಏರ್​ ಸಿಸ್ಟಮ್ ಇದ್ದು, ಈ ಯಂತ್ರವು ಮೈದಾನದಲ್ಲಿ ನೀರನ್ನು ವೇಗವಾಗಿ ಹೀರಿಕೊಳ್ಳಲಿದೆ. ಅದರಂತೆ 15 ನಿಮಿಷದೊಳಗೆ ಮೈದಾನವನ್ನು ಸಂಪೂರ್ಣವಾಗಿ ಒಣಗಿಸಿ ಪಂದ್ಯಕ್ಕಾಗಿ ಸಜ್ಜುಗೊಳಿಸಬಹುದು. ಹೀಗಾಗಿ ಸಾಧಾರಣ ಮಳೆ ಬಂದರೆ ಪಂದ್ಯ ನಡೆಯುವುದು ಖಚಿತ ಎಂದೇ ಹೇಳಬಹುದು.