IPL 2023: ಗೆಲುವಿನ ಖುಷಿಯಲ್ಲಿದ್ದ ಆರ್‌ಸಿಬಿಗೆ ಬಿಗ್ ಶಾಕ್! ಕೆಕೆಆರ್ ವಿರುದ್ಧ ಸ್ಟಾರ್ ವೇಗಿ ಅಲಭ್ಯ
IPL 2023: ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಇಂಜುರಿಗೆ ಒಳಗಾಗಿದ್ದ ವೇಗದ ಬೌಲರ್ ರೀಸ್ ಟೋಪ್ಲಿ ಕೆಕೆಆರ್ ವಿರುದ್ಧ ಆಡುವುದಿಲ್ಲ ಎಂದು ಇನ್ಸೈಡ್ ಸ್ಫೋರ್ಟ್ ವರದಿ ಮಾಡಿದೆ.
1 / 7
ಆಡಿದ ಮೊದಲ ಪಂದ್ಯದಲ್ಲೇ 5ಬಾರಿಯ ಚಾಂಪಿಯನ್ಗಳಿಗೆ ಮಣ್ಣು ಮುಕ್ಕಿಸಿದ ಆರ್ಸಿಬಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ವಿರಾಟ್ ಕೊಹ್ಲಿ ಮತ್ತು ಫಾಫ್ ಡುಪ್ಲೆಸಿಸ್ ಅರ್ಧಶತಕದ ನೆರವಿನಿಂದ ಪಂದ್ಯವನ್ನು 8 ವಿಕೆಟ್‌ಗಳಿಂದ ಗೆದ್ದುಕೊಂಡಿತು. ಆದರೆ, ಈ ಗೆಲುವಿನ ಸಂಭ್ರಮದಲ್ಲಿದ್ದ ಆರ್‌ಸಿಬಿಗೆ ಬಿಗ್ ಶಾಕ್ ಎದುರಾಗಿದ್ದು, ತಂಡದ ಸ್ಟಾರ್ ವೇಗಿ ಇಂಜುರಿಯಿಂದಾಗಿ ಕೆಕೆಆರ್ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ ಎಂದು ವರದಿಯಾಗಿದೆ.
2 / 7
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಇಂಜುರಿಗೆ ಒಳಗಾಗಿದ್ದ ವೇಗದ ಬೌಲರ್ ರೀಸ್ ಟೋಪ್ಲಿ ಕೆಕೆಆರ್ ವಿರುದ್ಧ ಆಡುವುದಿಲ್ಲ ಎಂದು ಇನ್ಸೈಡ್ ಸ್ಫೋರ್ಟ್ ವರದಿ ಮಾಡಿದೆ.
3 / 7
ಮುಂಬೈ ಇನ್ನಿಂಗ್ಸ್ನ 8 ನೇ ಓವರ್‌ನಲ್ಲಿ ಶಾರ್ಟ್ ಫೈನ್ ಲೆಗ್‌ನಲ್ಲಿ ಫೀಲ್ಡಿಂಗ್ ಮಾಡುವಾಗ ಗಾಯಗೊಂಡ ಟೋಪ್ಲಿ ಮೈದಾನದಿಂದ ಹೊರಹೋಗಿದ್ದರು. ಹೀಗಾಗಿ ಟೋಪ್ಲಿ ಟೂರ್ನಿಯಿಂದಲೇ ಹೊರಬೀಳುವ ಆತಂಕ ಎದುರಾಗಿತ್ತು. ಆದರೆ ಈ ಬಗ್ಗೆ ಅಪ್‌ಡೇಟ್ ನೀಡಿರುವ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್, ಟೋಪ್ಲಿ ಅವರನ್ನು ಸ್ಕ್ಯಾನಿಂಗ್ಗೆ ಕರೆದೊಯ್ಯಲಾಗಿದೆ. ಅದೃಷ್ಟವಶಾತ್ ಅಂದುಕೊಂಡಷ್ಟು ನೋವಿಲ್ಲ. ಸಧ್ಯಕ್ಕೆ ಟೋಪ್ಲಿ ಫಿಟ್‌ನೆಸ್ ಬಗ್ಗೆ ಯಾವುದೇ ಅಪ್‌ಡೇಟ್ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.
4 / 7
ಟೋಪ್ಲಿ ಇಂಜುರಿಯೊಂದಿಗೆ ಆರ್ಸಿಬಿ ಪಾಳಯದಲ್ಲಿ ಗಾಯಗೊಂಡವರ ಸಂಖ್ಯೆ 4ಕ್ಕೇರಿದೆ. ಹಾಗಿದ್ದರೆ ಇಂಜುರಿಗಳೊಗಾಗಿರುವ ಆರ್ಸಿಬಿಯ ಆಟಗಾರರು ಯಾರು ಎಂಬುದರ ವಿವರ ಇಲ್ಲಿದೆ.
5 / 7
ಟೋಪ್ಲಿಗೂ ಮೊದಲು ಇಂಜುರಿಗೊಳಗಾಗಿದ್ದ ಆಸೀಸ್ ವೇಗಿ ಜೋಶ್ ಹ್ಯಾಜಲ್‌ವುಡ್, ಸೀಸನ್ನ ಮೊದಲಾರ್ಧಕ್ಕೆ ಅಲಭ್ಯರಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
6 / 7
ಇವರೊಂದಿಗೆ ಮಧ್ಯಮ ಕ್ರಮಾಂಕದ ಬ್ಯಾಟರ್ ರಜತ ಪಾಟಿದರ್ ಕೂಡ ಇಂಜುರಿಗೆ ಒಳಗಾಗಿದ್ದು ಆರಂಭಿಕ ಕೆಲವು ಪಂದ್ಯಗಳಿಂದ ಹೊರಗುಳಿದಿದ್ದಾರೆ.
7 / 7
ಇನ್ನು ಮೊದಲ ಬಾರಿಗೆ ಆರ್ಸಿಬಿ ಸೇರಿಕೊಂಡಿದ್ದ ವಿಲ್ ಜಾಕ್ಸ್ ಕೂಡ ಇಂಜುರಿಯಿಂದಾಗಿ ಇಡೀ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಇದೀಗ ವೇಗಿ ಟೋಪ್ಲಿ ಇಂಜುರಿಗೊಂಡಿರುವುದು ಆರ್ಸಿಬಿ ಪಾಳಯಕ್ಕೆ ಆತಂಕ ತಂದ್ದೊಡ್ಡಿದೆ.
Published On - 3:23 pm, Mon, 3 April 23