IPL 2023: ಗುಜರಾತ್ ವಿರುದ್ಧ ಕಿಂಗ್ ಕೊಹ್ಲಿ ದಾಖಲೆ ಮುರಿದ ರುತುರಾಜ್ ಗಾಯಕ್ವಾಡ್..!
IPL 2023: ತಂಡದ ಪರವಾಗಿ ರುತುರಾಜ್ ಗಾಯಕ್ವಾಡ್ 44 ಎಸೆತಗಳಲ್ಲಿ 60 ರನ್ ಗಳಿಸಿ ಅದ್ಭುತ ಇನ್ನಿಂಗ್ಸ್ ಆಡಿದರು. ಈ ಇನ್ನಿಂಗ್ಸ್ನೊಂದಿಗೆ ಗಾಯಕ್ವಾಡ್ ಆರ್ಸಿಬಿ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರ ವಿಶೇಷ ದಾಖಲೆಯನ್ನು ಮುರಿದರು.
1 / 6
ಮೇ 23 ರಂದು ನಡೆದ ಐಪಿಎಲ್ 2023 ರ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗುಜರಾತ್ ಟೈಟಾನ್ಸ್ ತಂಡವನ್ನು 15 ರನ್‌ಗಳಿಂದ ಮಣಿಸಿ ಫೈನಲ್ ತಲುಪಿದೆ. ಮೊದಲು ಬ್ಯಾಟ್ ಮಾಡಿದ ಚೆನ್ನೈ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿತು. ತಂಡದ ಪರವಾಗಿ ರುತುರಾಜ್ ಗಾಯಕ್ವಾಡ್ 44 ಎಸೆತಗಳಲ್ಲಿ 60 ರನ್ ಗಳಿಸಿ ಅದ್ಭುತ ಇನ್ನಿಂಗ್ಸ್ ಆಡಿದರು. ಈ ಇನ್ನಿಂಗ್ಸ್ನೊಂದಿಗೆ ಗಾಯಕ್ವಾಡ್ ಆರ್ಸಿಬಿ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರ ವಿಶೇಷ ದಾಖಲೆಯನ್ನು ಮುರಿದರು.
2 / 6
ಗಾಯಕ್ವಾಡ್ ಅವರ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್‌ಗಳಿದ್ದವು. ಗುಜರಾತ್ ಮತ್ತು ಚೆನ್ನೈ ನಡುವೆ ಇದುವರೆಗೆ 4 ಪಂದ್ಯಗಳು ನಡೆದಿದ್ದು, ರುತುರಾಜ್ ಗಾಯಕ್ವಾಡ್ ಎಲ್ಲಾ ಪಂದ್ಯಗಳಲ್ಲಿ ಅರ್ಧ ಶತಕ ಬಾರಿಸಿದ್ದಾರೆ.
3 / 6
ಗಾಯಕ್ವಾಡ್ ಗುಜರಾತ್ ವಿರುದ್ಧ 4 ಇನ್ನಿಂಗ್ಸ್‌ಗಳಲ್ಲಿ 69.5 ಸರಾಸರಿ ಮತ್ತು 145.5 ಸ್ಟ್ರೈಕ್ ರೇಟ್‌ನಲ್ಲಿ 278 ರನ್ ಗಳಿಸಿದ್ದಾರೆ. ಏತನ್ಮಧ್ಯೆ, ವಿರಾಟ್ ಕೊಹ್ಲಿ ಗುಜರಾತ್ ವಿರುದ್ಧ ಮೂರು ಇನ್ನಿಂಗ್ಸ್‌ಗಳಲ್ಲಿ 116 ಸರಾಸರಿ ಮತ್ತು 138.1 ಸ್ಟ್ರೈಕ್ ರೇಟ್‌ನಲ್ಲಿ 232 ರನ್ ಬಾರಿಸಿದ್ದಾರೆ. ಈ ವೇಳೆ ಕೊಹ್ಲಿ 1 ಶತಕ ಹಾಗೂ 2 ಅರ್ಧಶತಕ ಕೂಡ ಸಿಡಿಸಿದ್ದರು.
4 / 6
ಇದರೊಂದಿಗೆ ಗುಜರಾತ್ ವಿರುದ್ಧ ಅತಿ ಹೆಚ್ಚು ರನ್ ಬಾರಿಸಿದ ವಿಚಾರದಲ್ಲಿ ಗಾಯಕ್ವಾಡ್, ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ. ಐಪಿಎಲ್ 2023 ರ ಮೊದಲ ಲೀಗ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆದಿತ್ತು. ಈ ಪಂದ್ಯವನ್ನು ಗುಜರಾತ್ 5 ವಿಕೆಟ್‌ಗಳಿಂದ ಗೆದ್ದಿತ್ತು.
5 / 6
ಈ ಪಂದ್ಯದಲ್ಲೂ ಚೆನ್ನೈ ಆರಂಭಿಕ ಬ್ಯಾಟ್ಸ್ಮನ್ ಗಾಯಕ್ವಾಡ್ 92 ರನ್ಗಳ ಇನ್ನಿಂಗ್ಸ್ ಆಡಿ ಎಲ್ಲರ ಮನ ಗೆದ್ದಿದ್ದರು. ಗಾಯಕ್ವಾಡ್ ಗುಜರಾತ್ ವಿರುದ್ಧ ಇದುವರೆಗೆ ನಾಲ್ಕು ಪಂದ್ಯಗಳಲ್ಲಿ 73(48), 53(49), 92(50), 60(44) ರನ್ಗಳ ಇನ್ನಿಂಗ್ಸ್ ಆಡಿದ್ದಾರೆ.
6 / 6
ಚೆನ್ನೈ ವಿರುದ್ಧದ ಮೊದಲ ಕ್ವಾಲಿಫೈಯರ್‌ನಲ್ಲಿ ಸೋತ ಗುಜರಾತ್ ಫೈನಲ್‌ಗೆ ಪ್ರವೇಶಿಸಲು ಮತ್ತೊಂದು ಅವಕಾಶವಿದೆ. ತಂಡವು ತನ್ನ ಎರಡನೇ ಕ್ವಾಲಿಫೈಯರ್ ಪಂದ್ಯವನ್ನು ಶುಕ್ರವಾರ, ಮೇ 26 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಡಲಿದೆ. ಈ ಪಂದ್ಯದಲ್ಲಿ ಗುಜರಾತ್ ಯಾವ ತಂಡವನ್ನು ಎದುರಿಸಲಿದೆ ಎಂಬುದು ಇಂದು ತಿಳಿಯಲಿದೆ. ಲಕ್ನೋ ಮತ್ತು ಮುಂಬೈ ನಡುವೆ ಎಲಿಮಿನೇಟರ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ಗುಜರಾತ್ ವಿರುದ್ಧ ಎರಡನೇ ಕ್ವಾಲಿಫೈಯರ್ ಆಡಲಿದೆ.