AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023: ಐಪಿಎಲ್ ಫೈನಲ್​ಗೂ ಮುನ್ನ ಎಂಎಸ್​ ಧೋನಿಗೆ ಬ್ಯಾನ್ ಭೀತಿ..?

IPL 2023 Kannada: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸಿಎಸ್​ಕೆ ತಂಡವು 172 ರನ್​ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಗುಜರಾತ್ ಟೈಟಾನ್ಸ್ 157 ರನ್​ಗಳಿಗೆ ಆಲೌಟ್ ಆಗುವ ಮೂಲಕ 15 ರನ್​ಗಳಿಂದ ಸೋಲೊಪ್ಪಿಕೊಂಡಿತು.

TV9 Web
| Updated By: ಝಾಹಿರ್ ಯೂಸುಫ್

Updated on:May 25, 2023 | 8:34 PM

IPL 2023: ಐಪಿಎಲ್​ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ತೋರಿಸಿದ ಅತೀ ಬುದ್ಧಿವಂತಿಕೆ ಇದೀಗ ತಿರುಗುಬಾಣವಾಗುವ ಸಾಧ್ಯತೆಯಿದೆ. ಏಕೆಂದರೆ ಗುಜರಾತ್ ಟೈಟಾನ್ಸ್​ ವಿರುದ್ಧದ ಪಂದ್ಯದ ವೇಳೆ ಅಂಪೈರ್ ಜೊತೆ ವಾಗ್ವಾದ ನಡೆಸಿರುವುದನ್ನು ಇದೀಗ ಮ್ಯಾಚ್ ರೆಫರಿ ಗಂಭೀರವಾಗಿ ಪರಿಗಣಿಸಿದೆ.

1 / 9
ಗುಜರಾತ್ ಟೈಟಾನ್ಸ್ ಇನಿಂಗ್ಸ್​​ನ 16ನೇ ಓವರ್​ ಅನ್ನು ಧೋನಿ ಯುವ ವೇಗಿ ಮಥೀಶ ಪತಿರಾಣಗೆ ನೀಡಿದ್ದರು. ಆದರ ಅದಾಗಲೇ ಮೈದಾನದಿಂದ 9 ನಿಮಿಷಗಳ ಕಾಲ ಹೊರಗಿದ್ದ ಪತಿರಾಣ ಅವರನ್ನು ಅಂಪೈರ್ ತಡೆದರು.

2 / 9
ನಿಯಮಗಳ ಪ್ರಕಾರ ಆಟಗಾರರೊಬ್ಬರು ಮೈದಾನದಿಂದ ಹೊರಗುಳಿದ ಸಮಯದಷ್ಟೇ ಸಮಯ ಮೈದಾನದಲ್ಲಿರಬೇಕಾಗುತ್ತದೆ. ಅಂದರೆ ಮಾತ್ರ ಅವರು ಬೌಲಿಂಗ್​ಗೆ ಅರ್ಹರಾಗಿರುತ್ತಾರೆ. ಆದರೆ ಪತಿರಾಣ ಬೌಲಿಂಗ್ ಮಾಡಲು ಬಂದಾಗ ಕೇವಲ 4 ನಿಮಿಷಗಳಾಗಿತ್ತು. ಈ ನಿಯಮವನ್ನು ಅಂಪೈರ್ ಧೋನಿಗೆ ವಿವರಿಸಿದ್ದರು.

3 / 9
ಆದರೆ ಅತೀ ಬುದ್ಧಿವಂತಿಕೆ ಪ್ರದರ್ಶಿಸಿದ ಮಹೇಂದ್ರ ಸಿಂಗ್ ಧೋನಿ ಲೆಗ್ ಅಂಪೈರ್ ಹಾಗೂ ಸ್ಟ್ರೈಟ್ ಅಂಪೈರ್​ಗಳ ಜೊತೆ ನಿಯಮಗಳ ಬಗ್ಗೆ ಚರ್ಚಿಸಿದರು. ಈ ಚರ್ಚೆಯ ಮೂಲಕ 4 ನಿಮಿಷಗಳ ಆಟವನ್ನು ವ್ಯರ್ಥ ಮಾಡಿದ್ದರು. ಇದರೊಂದಿಗೆ ಮಥೀಶ ಪತಿರಾಣ ಅವರು ಫೀಲ್ಡ್​ನಲ್ಲಿರಬೇಕಾದ ಸಮಯ ಕೂಡ ಪೂರ್ಣಗೊಂಡಿತು.

4 / 9
ಅಲ್ಲದೆ ಅಂಪೈರ್ ಹೇಳಿದ ನಿಯಮದ ಪ್ರಕಾರವೇ ಪತಿರಾಣ ಅವರಿಂದ ಧೋನಿ ಬೌಲಿಂಗ್ ಮಾಡಿಸಿದ್ದರು. ಆದರೆ ಧೋನಿಯ ಈ ನಡೆಯ ಬಗ್ಗೆ ಕಾಮೆಂಟೇಟರ್​ಗಳಾ ಸೈಮನ್ ಡೌಲ್, ಸುನಿಲ್ ಗಾವಸ್ಕರ್, ಹರ್ಷ ಬೋಗ್ಲೆ ​ಆಕ್ರೋಶ ವ್ಯಕ್ತಪಡಿಸಿದ್ದರು. ಇದರೊಂದಿಗೆ ಇದು ಈಗ ಚರ್ಚಾ ವಿಷಯವಾಗಿದೆ.

5 / 9
ಅತ್ತ ಮ್ಯಾಚ್ ರೆಫರಿ ಕೂಡ ಅಂಪೈರ್ ಜೊತೆಗಿನ ಧೋನಿಯ ವಾಗ್ವಾದವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಈ ಬಗ್ಗೆ ವಿಚಾರಣೆ ನಡೆಸಿ ಧೋನಿಯ ಮೇಲೆ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

6 / 9
ಇತ್ತ 4 ನಿಮಿಷಗಳ ಆಟವನ್ನು ವ್ಯರ್ಥ ಮಾಡಿದ ಆರೋಪದ ಜೊತೆಗೆ ಧೋನಿ ಸ್ಲೋ ಓವರ್ ರೇಟ್​ ಶಿಕ್ಷೆಗೂ ಗುರಿಯಾಗಿದ್ದಾರೆ. ಅಂದರೆ ಸಿಎಸ್​ಕೆ ತಂಡವು ನಿಗದಿತ ಸಮಯದೊಳಗೆ 20 ಓವರ್​ಗಳನ್ನು ಪೂರ್ಣಗೊಳಿಸಿರಲಿಲ್ಲ. ಹೀಗಾಗಿ ಇದಕ್ಕೂ ಕೂಡ ಶಿಕ್ಷೆ ವಿಧಿಸುವ ಸಾಧ್ಯತೆಯಿದೆ.

7 / 9
ಅತ್ತ ಲೀಗ್ ಹಂತದಲ್ಲಿ ಸ್ಲೋ ಓವರ್​ಗೆ ದಂಡಕ್ಕೆ ಗುರಿಯಾಗಿದ್ದ ಧೋನಿ ಇದೀಗ ಮತ್ತೆ ಅದೇ ತಪ್ಪನ್ನು ಪುನರಾವರ್ತಿಸಿದ್ದಾರೆ. ಇದರ ಜೊತೆಗೆ ಪಂದ್ಯಕ್ಕೆ ಅಡಚಣೆಯನ್ನುಂಟು ಮಾಡಿ ಸಮಯ ವ್ಯರ್ಥ ಮಾಡಿದ ಆರೋಪಕ್ಕೂ ಕೂಡ ಗುರಿಯಾಗಿದ್ದಾರೆ.

8 / 9
ಹೀಗಾಗಿ ಮಹೇಂದ್ರ ಸಿಂಗ್ ಧೋನಿಗೆ ದಂಡ ವಿಧಿಸಲಾಗುತ್ತದೆಯೇ ಅಥವಾ ನಿಷೇಧ ಹೇರಲಾಗುತ್ತದೆಯೇ ಎಂಬುದು ಈಗ ಕುತೂಹಲಕಾರಿ ವಿಷಯ. ಒಂದು ವೇಳೆ 1 ಪಂದ್ಯಕ್ಕೆ ನಿಷೇಧ ಹೇರಿದರೆ ಧೋನಿ ಫೈನಲ್ ಪಂದ್ಯದಲ್ಲಿ ಕಣಕ್ಕಿಳಿಯಲಾಗುವುದಿಲ್ಲ. ಹಾಗಾಗಿ ಮ್ಯಾಚ್ ರೆಫರಿ ತೀರ್ಮಾನ ಏನಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.

9 / 9

Published On - 7:22 pm, Wed, 24 May 23

Follow us
‘ನಿದ್ರಾದೇವಿ ನೆಕ್ಸ್ಟ್​ ಡೋರ್’ ಚಿತ್ರದಲ್ಲಿ ಗೆಟಪ್ ಬದಲಿಸಿದ ಶೈನ್ ಶೆಟ್ಟಿ

ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿಗೆ ಚಿತ್ರರಂಗದಲ್ಲಿ ಸ್ಫೂರ್ತಿ ಯಾರು

ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್

ಪಿಎಸ್​​ಐ ನಾಗರಾಜ್​​ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​

ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ

ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್

ಪತ್ನಿಯಿಂದ ಪತಿಗೆ ಟಾರ್ಚರ್ ಪ್ರಕರಣಗಳು ಇತ್ತೀಚಿಗೆ ಜಾಸ್ತಿಯಾಗುತ್ತಿವೆ

ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಲು ಎಲ್ಲ ದೇಶಗಳಿಗೂ ಮೋದಿ ಆಹ್ವಾನ

ಲೂಟ್ ಕೆ ಲಾವ್ ಬಾಟ್ ಕೆ ಖಾವ್ ಸರ್ಕಾರದ ದ್ಯೇಯವಾಗಿದೆ: ಪ್ರಲ್ಹಾದ್ ಜೋಶಿ

ಕಾವೇರಿ ಆರತಿಯಿಂದ ಕೆಆರ್​ಎಸ್ ಜಲಾಶಯಕ್ಕೆ ಅಪಾಯವಿಲ್ಲ: ಗಣಿಗ