IPL 2023: ರಾಜಸ್ಥಾನ್ ರಾಯಲ್ಸ್​ ಕ್ಯಾಂಪ್​ನಲ್ಲಿ ಕಾಣಿಸಿಕೊಂಡ ಹೊಸ ಆಟಗಾರ

| Updated By: ಝಾಹಿರ್ ಯೂಸುಫ್

Updated on: Mar 23, 2023 | 12:03 AM

IPL 2023 Kannada: ಆರ್​ಸಿಬಿ ಫ್ರಾಂಚೈಸಿಯು ವಿಲ್ ಜಾಕ್ಸ್​ ಬದಲಿಗೆ ಮೈಕೆಲ್ ಬ್ರೇಸ್​ವೆಲ್ ರನ್ನು ಆಯ್ಕೆ ಮಾಡಿದೆ. ಹಾಗೆಯೇ ಸಿಎಸ್​ಕೆ ತಂಡವು ಕೈಲ್ ಜೇಮಿಸನ್ ಬದಲಿಗೆ ಸಿಸಾಂಡ ಮಗಲಾ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.

1 / 6
ಐಪಿಎಲ್ ಆರಂಭಕ್ಕೆ ಇನ್ನು ದಿನಗಳು ಮಾತ್ರ ಬಾಕಿಯಿದೆ. ಇತ್ತ ಕೆಲ ಫ್ರಾಂಚೈಸಿಗಳು ಗಾಯಗೊಂಡು ಹೊರಗುಳಿದಿರುವ ಆಟಗಾರರ ಬದಲಿ ಆಯ್ಕೆಗೆ ಮುಂದಾಗಿದೆ. ಈಗಾಗಲೇ ಆರ್​ಸಿಬಿ ಫ್ರಾಂಚೈಸಿಯು ವಿಲ್ ಜಾಕ್ಸ್​ ಬದಲಿಗೆ ಮೈಕೆಲ್ ಬ್ರೇಸ್​ವೆಲ್ ರನ್ನು ಆಯ್ಕೆ ಮಾಡಿದೆ. ಹಾಗೆಯೇ ಸಿಎಸ್​ಕೆ ತಂಡವು ಕೈಲ್ ಜೇಮಿಸನ್ ಬದಲಿಗೆ ಸಿಸಾಂಡ ಮಗಲಾ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.

2 / 6
ಇದಾಗ್ಯೂ ರಾಜಸ್ಥಾನ್ ರಾಯಲ್ಸ್ ತಂಡದಿಂದ ಗಾಯದ ಕಾರಣ ಹೊರಗುಳಿದಿರುವ ಕನ್ನಡಿಗ ಪ್ರಸಿದ್ಧ್ ಕೃಷ್ಣ ಬದಲಿಗೆ ಯಾರು ಆಯ್ಕೆಯಾಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿರಲಿಲ್ಲ. ಇದೀಗ ಆರ್​ಆರ್​ ತಂಡದ ಅಭ್ಯಾಸ ಕ್ಯಾಂಪ್​ನಲ್ಲಿ ಸಂದೀಪ್ ಶರ್ಮಾ ಕಾಣಿಸಿಕೊಂಡಿದ್ದಾರೆ.

3 / 6
ಕಳೆದ ಸೀಸನ್​ನಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಿದ್ದ ಸಂದೀಪ್ ಶರ್ಮಾ ಅವರನ್ನು ಈ ಬಾರಿ ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ. ಇದೀಗ ಐಪಿಎಲ್​ ಆರಂಭಕ್ಕೆ ದಿನಗಳು ಮಾತ್ರ ಉಳಿದಿರುವಾಗ ಸಂದೀಪ್ ಶರ್ಮಾ ರಾಜಸ್ಥಾನ್ ರಾಯಲ್ಸ್ ತಂಡದ ಜೊತೆ ಕಾಣಿಸಿಕೊಂಡಿದ್ದಾರೆ.

4 / 6
ಇದರೊಂದಿಗೆ ಪ್ರಸಿದ್ಧ್ ಕೃಷ್ಣ ಅವರ ಬದಲಿಗೆ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸಂದೀಪ್ ಶರ್ಮಾ ಆಯ್ಕೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆರ್​ಆರ್ ಫ್ರಾಂಚೈಸಿಯು ಇದನ್ನು ಅಧಿಕೃತವಾಗಿ ತಿಳಿಸದಿದ್ದರೂ, ಸಂದೀಪ್ ಶರ್ಮಾ ರಾಜಸ್ಥಾನ್ ರಾಯಲ್ಸ್ ತಂಡದ ಜೊತೆ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ.

5 / 6
ಐಪಿಎಲ್​ನಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಸನ್​ರೈಸರ್ಸ್ ಹೈದರಾಬಾದ್ ಪರ 104 ಪಂದ್ಯಗಳನ್ನಾಡಿರುವ ಸಂದೀಪ್ ಶರ್ಮಾ  26.33 ರ ಸರಾಸರಿಯಲ್ಲಿ ಒಟ್ಟು 114 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದಾಗ್ಯೂ ಈ ಬಾರಿ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ. ಇದೀಗ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಕಾಣಿಸಕೊಂಡಿರುವ ಸಂದೀಪ್ ಶರ್ಮಾ ಈ ಬಾರಿ ಕೂಡ ಐಪಿಎಲ್ ಆಡುವ ವಿಶ್ವಾಸದಲ್ಲಿದ್ದಾರೆ.

6 / 6
ರಾಜಸ್ಥಾನ್ ರಾಯಲ್ಸ್ ತಂಡ ಹೀಗಿದೆ​: ಸಂಜು ಸ್ಯಾಮ್ಸನ್ (ನಾಯಕ), ಯಶಸ್ವಿ ಜೈಸ್ವಾಲ್, ಶಿಮ್ರಾನ್ ಹೆಟ್ಮೆಯರ್, ದೇವದತ್ ಪಡಿಕ್ಕಲ್, ಜೋಸ್ ಬಟ್ಲರ್, ಧ್ರುವ ಜುರೆಲ್, ರಿಯಾನ್ ಪರಾಗ್, ಟ್ರೆಂಟ್ ಬೌಲ್ಟ್, ಒಬೆಡ್ ಮೆಕಾಯ್, ನವದೀಪ್ ಸೈನಿ, ಕುಲದೀಪ್ ಸೇನ್, ಕುಲದೀಪ್ ಯಾದವ್, ಆರ್ ಅಶ್ವಿನ್, ಯುಜ್ವೇಂದ್ರ ಚಹಾಲ್, ಕೆಸಿ ಕಾರ್ಯಪ್ಪ, ಜೋ ರೂಟ್, ಅಬ್ದುಲ್ ಪಿಎ, ಆಕಾಶ್ ವಶಿಷ್ಟ್, ಮುರುಗನ್ ಅಶ್ವಿನ್, ಕೆಎಂ ಆಸಿಫ್, ಆ್ಯಡಂ ಝಂಪಾ, ಕುನಾಲ್ ರಾಥೋರ್, ಡೊನೊವನ್ ಫೆರೇರಾ, ಜೇಸನ್ ಹೋಲ್ಡರ್.