IPL 2023: ಇಬ್ಬರನ್ನು ಬ್ಯಾನ್ ಮಾಡುವಂತೆ ಆಗ್ರಹಿಸಿದ ಸುನಿಲ್ ಗವಾಸ್ಕರ್

| Updated By: ಝಾಹಿರ್ ಯೂಸುಫ್

Updated on: May 06, 2023 | 11:13 PM

Virat Kohli vs Gautam Gambhir: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್​ಸಿಬಿ ಅಭಿಮಾನಿಗಳಿಗೆ ಬಾಯಿ ಮುಚ್ಚುವಂತೆ ಖಡಕ್ ಸೂಚನೆ ನೀಡಿದ್ದ ಗೌತಮ್ ಗಂಭೀರ್​ಗೆ ಲಕ್ನೋ ಮೈದಾನದಲ್ಲಿ ಭರ್ಜರಿ ಸಂಭ್ರಮದ ಮೂಲಕ ವಿರಾಟ್ ಕೊಹ್ಲಿ ತಿರುಗೇಟು ನೀಡಿದ್ದಾರೆ.

1 / 7
IPL 2023: ಐಪಿಎಲ್​ ಪಂದ್ಯದ ವೇಳೆ ನಡೆದ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ನಡುವಣ ಜಗಳದ ಚರ್ಚೆ ಮುಂದುವರೆದಿದೆ. ಲಕ್ನೋದ ಏಕಾನ ಸ್ಟೇಡಿಯಂನಲ್ಲಿ ಮೇ 1 ರಂದು ನಡೆದ ಆರ್​ಸಿಬಿ-ಎಲ್​ಎಸ್​ಜಿ ನಡುವಣ ಪಂದ್ಯದ ಬಳಿಕ ಕಿಂಗ್ ಕೊಹ್ಲಿ ಹಾಗೂ ಗಂಭೀರ್ ಕಿತ್ತಾಡಿಕೊಂಡಿದ್ದರು.

2 / 7
ಈ ಬಗ್ಗೆ ಮಾತನಾಡಿರುವ ಟೀಮ್ ಇಂಡಿಯಾದ ಮಾಜಿ ಆಟಗಾರ ಸುನಿಲ್ ಗವಾಸ್ಕರ್, ಇಂತಹ ಜಗಳಗಳು ನಡೆಯದಂತೆ ನೋಡಿಕೊಳ್ಳಲು ಕಠಿಣ ಶಿಕ್ಷೆಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

3 / 7
ನನ್ನ ಪ್ರಕಾರ, ಈ ಜಗಳದಲ್ಲಿ ತೊಡಗಿಸಿಕೊಂಡ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ಅವರನ್ನು ಒಂದೆರಡು ಪಂದ್ಯಗಳಿಗೆ ಅಮಾನತು ಮಾಡಬೇಕು. ಇಂತಹ ಕಠಿಣ ಶಿಕ್ಷೆಗಳ ಮೂಲಕ ಈ ರೀತಿಯ ಆಕ್ರಮಣಕಾರಿ ನಡೆಗಳನ್ನು ತಡೆಯಬಹುದು ಎಂದು ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

4 / 7
ಆದರೆ ಇಲ್ಲಿ ಇಬ್ಬರಿಗೂ ಪಂದ್ಯ ಶುಲ್ಕದ ಶೇ.100 ರಷ್ಟು ದಂಡ ವಿಧಿಸಲಾಗಿದೆ. ಇಲ್ಲಿ ಪಂದ್ಯದ ಶುಲ್ಕ ಎಷ್ಟು?. ಇದು ತುಂಬಾ ಕಠಿಣವಾದ ದಂಡ. ಇದಾಗ್ಯೂ ಇದು ಪುನರಾವರ್ತನೆಯಾಗದಂತೆ ಅವರು ಖಚಿತಪಡಿಸಿಕೊಳ್ಳಬೇಕು.

5 / 7
ಇದಕ್ಕಾಗಿ ಇಂತಹ ಅತಿರೇಕದ ವರ್ತನೆ ತೋರುವ ಆಟಗಾರರನ್ನು ಕೆಲ ಪಂದ್ಯಗಳಿಗೆ ನಿಷೇಧಿಸಬೇಕು ಎಂದು ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ. ಇತ್ತ ಗವಾಸ್ಕರ್ ಹೇಳಿಕೆಗೆ ಕಿಂಗ್ ಕೊಹ್ಲಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

6 / 7
ಏಕೆಂದರೆ ಇಲ್ಲಿ ವಿರಾಟ್ ಕೊಹ್ಲಿ ಆಟಗಾರ. ಅದೇ ಗೌತಮ್ ಗಂಭೀರ್ ಮೆಂಟರ್. ಇಲ್ಲಿ ನಿಷೇಧ ಹೇರಿದರೆ ವಿರಾಟ್ ಕೊಹ್ಲಿಯನ್ನು ಒಂದೆರಡು ಪಂದ್ಯಗಳಿಂದ ಹೊರಗಿಡಬಹುದು. ಇದರಿಂದ ಆರ್​ಸಿಬಿಗೆ ನಷ್ಟ. ಅದೇ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಆಗಿರುವ ಗೌತಮ್ ಗಂಭೀರ್ ಅವರನ್ನು ನಿಷೇಧಿಸಿದರೆ ತಂಡದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬ ವಾದವನ್ನು ಮುಂದಿಟ್ಟಿದ್ದಾರೆ.

7 / 7
ಒಟ್ಟಿನಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್​ಸಿಬಿ ಅಭಿಮಾನಿಗಳಿಗೆ ಬಾಯಿ ಮುಚ್ಚುವಂತೆ ಖಡಕ್ ಸೂಚನೆ ನೀಡಿದ್ದ ಗೌತಮ್ ಗಂಭೀರ್​ಗೆ ಲಕ್ನೋ ಮೈದಾನದಲ್ಲಿ ಭರ್ಜರಿ ಸಂಭ್ರಮದ ಮೂಲಕ ವಿರಾಟ್ ಕೊಹ್ಲಿ ತಿರುಗೇಟು ನೀಡಿದ್ದಾರೆ. ಇದೇ ಖುಷಿಯಲ್ಲಿ ಆರ್​ಸಿಬಿ ಅಭಿಮಾನಿಗಳು ಕಿಂಗ್ ಕೊಹ್ಲಿಯ ನಡೆಗೆ ಫುಲ್ ಸಪೋರ್ಟ್ ವ್ಯಕ್ತಪಡಿಸುತ್ತಿದ್ದಾರೆ.

Published On - 11:09 pm, Sat, 6 May 23