IPL 2023: ಐಪಿಎಲ್ಗಾಗಿ ಹೊಸ ಜೆರ್ಸಿ ಅನಾವರಣಗೊಳಿಸಿದ SRH
TV9 Web | Updated By: ಝಾಹಿರ್ ಯೂಸುಫ್
Updated on:
Mar 16, 2023 | 5:54 PM
IPL 2023 Kannada: ಐಪಿಎಲ್ ಸೀಸನ್ 16 ಮಾರ್ಚ್ 31 ರಿಂದ ಶುರುವಾಗಲಿದ್ದು, ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಮುಖಾಮುಖಿಯಾಗಲಿದೆ.
1 / 5
IPL 2023: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 16 ಗಾಗಿ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಹೊಸ ಜೆರ್ಸಿಯನ್ನು ಅನಾವರಣಗೊಳಿಸಿದೆ. ಕಳೆದ ಬಾರಿಗಿಂತ ಈ ಬಾರಿಯ ಜೆರ್ಸಿಯಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಇದಾಗ್ಯೂ ತಂಡದ ಟ್ರೇಡ್ ಮಾರ್ಕ್ ಆಗಿರುವ ಆರೆಂಜ್ ಜೆರ್ಸಿಯಲ್ಲೇ ಎಸ್ಆರ್ಹೆಚ್ ಕಣಕ್ಕಿಳಿಯಲಿದೆ.
2 / 5
ಕಳೆದ ಸೀಸನ್ನಲ್ಲಿ ಸಂಪೂರ್ಣ ಆರೆಂಜ್ ಬಣ್ಣದ ಜೆರ್ಸಿಯಲ್ಲಿ ಕಣಕ್ಕಿಳಿದಿದ್ದ ಎಸ್ಆರ್ಹೆಚ್ ತಂಡವು ಈ ಸಲ, ಆರೆಂಜ್ ಹಾಗೂ ಬ್ಲ್ಯಾಕ್ ಬಣ್ಣಗಳಲ್ಲಿ ಕಿಟ್ ಅನ್ನು ರೂಪಿಸಿದೆ. ಇಲ್ಲಿ ತಂಡದ ಜೆರ್ಸಿಯು ಆರೆಂಜ್ ಬಣ್ಣದಲ್ಲಿದ್ದರೆ, ಪ್ಯಾಂಟ್ಗೆ ಕಪ್ಪು ಬಣ್ಣ ನೀಡಲಾಗಿದೆ. ಹಾಗೆಯೇ ಭುಜದ ಮೇಲೆ ಕಪ್ಪು ಪಟ್ಟಿಗಳನ್ನು ನೀಡಲಾಗಿರುವುದು ವಿಶೇಷ.
3 / 5
ಇನ್ನು ಎಸ್ಆರ್ಹೆಚ್ ತಂಡದ ನೂತನ ಜೆರ್ಸಿಯ ಫೋಟೋಶೂಟ್ನಲ್ಲಿ ಮಯಾಂಕ್ ಅಗರ್ವಾಲ್, ಉಮ್ರಾನ್ ಮಲಿಕ್ ಮತ್ತು ವಾಷಿಂಗ್ಟನ್ ಸುಂದರ್ ಕಾಣಿಸಿಕೊಂಡಿದ್ದಾರೆ.
4 / 5
ಈ ಬಾರಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಬಲಿಷ್ಠ ಬಳಗವನ್ನು ರೂಪಿಸಿದ್ದು, ಹೀಗಾಗಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ. ಅಲ್ಲದೆ ಈ ಸಲ ತಂಡವನ್ನು ಸೌತ್ ಆಫ್ರಿಕಾ ಆಟಗಾರ ಐಡೆನ್ ಮಾರ್ಕ್ರಾಮ್ ಮುನ್ನಡೆಸಲಿದ್ದಾರೆ.
5 / 5
ಸನ್‌ರೈಸರ್ಸ್ ಹೈದರಾಬಾದ್ ತಂಡ: ಐಡೆನ್ ಮಾರ್ಕ್ರಾಮ್ (ನಾಯಕ) ಮಯಾಂಕ್ ಅಗರ್ವಾಲ್, ಹ್ಯಾರಿ ಬ್ರೂಕ್, ಗ್ಲೆನ್ ಫಿಲಿಪ್ಸ್, ರಾಹುಲ್ ತ್ರಿಪಾಠಿ, ಅಭಿಷೇಕ್ ಶರ್ಮಾ, ಕಾರ್ತಿಕ್ ತ್ಯಾಗಿ, ಅಬ್ದುಲ್ ಸಮದ್, ವಾಷಿಂಗ್ಟನ್ ಸುಂದರ್, ಆದಿಲ್ ರಶೀದ್, ಮಯಾಂಕ್ ಮಾರ್ಕಂಡೆ, ಹೆನ್ರಿಚ್ ಕ್ಲಾಸೆನ್, ವಿವ್ರಾಂತ್ ಶರ್ಮಾ, ಉಮ್ರಾನ್ ಮಲಿಕ್, ಟಿ ನಟರಾಜನ್, ಭುವನೇಶ್ವರ್ ಕುಮಾರ್, ಮಾರ್ಕೊ ಯಾನ್ಸೆನ್, ಫಜಲ್ಹಾಕ್ ಫಾರೂಕಿ, ಸಮರ್ಥ ವ್ಯಾಸ್, ಸನ್ವಿರ್ ಸಿಂಗ್, ಉಪೇಂದ್ರ ಸಿಂಗ್ ಯಾದವ್, ಮಯಾಂಕ್ ದಾಗರ್, ನಿತೀಶ್ ಕುಮಾರ್ ರೆಡ್ಡಿ, ಅಕೇಲ್ ಹೊಸೈನ್, ಅನ್ಮೋಲ್‌ಪ್ರೀತ್ ಸಿಂಗ್.