IPL 2023: ಸ್ಟಾರ್ ಆಟಗಾರರ ಅಲಭ್ಯತೆ; ಐಪಿಎಲ್ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ!
TV9 Web | Updated By: ಪೃಥ್ವಿಶಂಕರ
Updated on:
Dec 26, 2022 | 10:19 AM
IPL 2023: ವರದಿಯ ಪ್ರಕಾರ, ಬಿಸಿಸಿಐನ ಈ ನಿರ್ಧಾರಕ್ಕೆ ದೊಡ್ಡ ಕಾರಣ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್. ನಿಗದಿಯಂತೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಜೂನ್ ಆರಂಭದಲ್ಲಿ ಲಂಡನ್‌ನ ಓವಲ್ ಮೈದಾನದಲ್ಲಿ ನಡೆಯಲಿದೆ.
1 / 5
16ನೇ ಆವೃತ್ತಿಯ ಐಪಿಎಲ್ಗಾಗಿ ಮಿನಿ ಹರಾಜು ಮುಗಿದಿದ್ದು ಎಲ್ಲಾ 10 ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ಖರೀದಿಸುವುದರೊಂದಿಗೆ ತಮ್ಮ ತಮ್ಮ ತಂಡಗಳನ್ನು ಮತ್ತಷ್ಟು ಬಲಪಡಿಸಿಕೊಂಡಿವೆ. ಒಟ್ಟು 80 ಆಟಗಾರರಿಗೆ ಈ ಬಾರಿ ಅದೃಷ್ಟ ಒಲಿದಿದೆ. ಈಗ ಎಲ್ಲರೂ ಹೊಸ ಸೀಸನ್ ಪ್ರಾರಂಭವಾಗಲು ಕಾಯುತ್ತಿದ್ದಾರೆ. ಆದರೆ, ಇದಕ್ಕೂ ಮುನ್ನ ಐಪಿಎಲ್ ಪಾಳಯದಿಂದ ಒಂದು ಪ್ರಮುಖ ಸುದ್ದಿ ಹೊರಬಿದ್ದಿದೆ.
2 / 5
ವಾಸ್ತವವಾಗಿ ಈ ಬಾರಿಯ ಐಪಿಎಲ್ ಅನ್ನು ಕಳೆದ ಆವೃತ್ತಿಗಳಿಗಿಂತ ವಿಭಿನ್ನವಾಗಿ ಆಯೋಜಿಸಲು ಮುಂದಾಗಿದ್ದ ಐಪಿಎಲ್ ಮಂಡಳಿ ಈ ಆವೃತ್ತಿಯ ವೇಳಾಪಟ್ಟಿಯನ್ನು 60 ದಿನಗಳ ಬದಲು 74 ದಿನಗಳಿಗೆ ವಿಸ್ತರಿಸಿತ್ತು. ಆದರೆ ತನ್ನ ಈಗ ತನ್ನ ನಿಲುವನ್ನು ಬದಲಿಸಿರುವ ಮಂಡಳಿ ಹಳೆಯ ಆವೃತ್ತಿಗಳಂತೆ 60 ದಿನಗಳಲ್ಲಿ 16ನೇ ಆವೃತ್ತಿ ಮುಗಿಸಲು ಮುಂದಾಗಿದೆ.
3 / 5
ಕ್ರೀಡಾ ವೆಬ್‌ಸೈಟ್ ಇನ್‌ಸೈಡ್‌ಸ್ಪೋರ್ಟ್‌ನ ವರದಿಯ ಪ್ರಕಾರ, ಹೊಸ ಸೀಸನ್ ಏಪ್ರಿಲ್ 1 ರಿಂದ ಪ್ರಾರಂಭವಾಗಲಿದ್ದು, ಮೇ 31 ರವರೆಗೆ ನಡೆಯಲಿದೆ. ಇದಕ್ಕೂ ಮೊದಲು, ಬಿಸಿಸಿಐ ಇದನ್ನು 74 ದಿನಗಳವರೆಗೆ ಆಯೋಜಿಸಲು ಬಯಸಿತ್ತು. ಆದರೆ ಈಗ ಈ ಯೋಜನೆಯನ್ನು ಮುಂದಿನ ಸೀಸನ್ಗೆ ಮುಂದೂಡಲಾಗಿದೆ.
4 / 5
ವರದಿಯ ಪ್ರಕಾರ, ಬಿಸಿಸಿಐನ ಈ ನಿರ್ಧಾರಕ್ಕೆ ದೊಡ್ಡ ಕಾರಣ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್. ನಿಗದಿಯಂತೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಜೂನ್ ಆರಂಭದಲ್ಲಿ ಲಂಡನ್‌ನ ಓವಲ್ ಮೈದಾನದಲ್ಲಿ ನಡೆಯಲಿದೆ.
5 / 5
ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನ ರೇಸ್‌ನಲ್ಲಿ ಪ್ರಸ್ತುತ ಆಸ್ಟ್ರೇಲಿಯಾ ಮುಂಚೂಣಿಯಲ್ಲಿದ್ದು, ಭಾರತ ತಂಡ ಎರಡನೇ ಸ್ಥಾನದಲ್ಲಿದೆ. ಈ ಎರಡು ತಂಡಗಳು ಮಾತ್ರ ಅರ್ಹತೆ ಪಡೆದರೆ, ಆಟಗಾರರು ಮಧ್ಯದಲ್ಲಿಯೇ ಐಪಿಎಲ್ನಿಂದ ತೆರಳಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಲೀಗ್‌ನ 74 ದಿನಗಳು ಪೂರ್ಣಗೊಳ್ಳುವ ಮೊದಲೇ ಆಸ್ಟ್ರೇಲಿಯಾ ಮತ್ತು ಭಾರತದ ಅನೇಕ ಸ್ಟಾರ್ ಆಟಗಾರರು ಐಪಿಎಲ್ ತೊರೆಯಬೇಕಾಗುತ್ತದೆ. ಹೀಗಾಗಿ ಇದನ್ನು ತಪ್ಪಿಸಲು ಬಿಸಿಸಿಐ ಈ ಕ್ರಮವನ್ನು ತೆಗೆದುಕೊಳ್ಳಲು ಮುಂದಾಗಿದೆ ಎಂದು ತಿಳಿದು ಬಂದಿದೆ
Published On - 10:19 am, Mon, 26 December 22