Virat Kohli: ವಿರಾಟ್ ಕೊಹ್ಲಿಯ ಹೆಸರಿನಲ್ಲಿದೆ 10 ದಾಖಲೆಗಳು: ಇದನ್ನು ಮುರಿಯುವವರು ಯಾರು?

| Updated By: ಝಾಹಿರ್ ಯೂಸುಫ್

Updated on: Mar 28, 2023 | 9:23 PM

IPL 2023 Kannada: ಕಳೆದ 16 ಸೀಸನ್​ ಐಪಿಎಲ್​ನಲ್ಲಿ ಕಿಂಗ್ ಕೊಹ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಈ ದಾಖಲೆಗಳು 16ನೇ ಆವೃತ್ತಿಯಲ್ಲೂ ಮುಂದುವರೆಯಲಿದೆ. ಆದರೆ ಈ ಬಾರಿ ಈ ದಾಖಲೆಯನ್ನು ಮುರಿಯುವವರು ಯಾರು ಎಂಬುದೇ ಪ್ರಶ್ನೆ.

1 / 13
ಐಪಿಎಲ್ ಸೀಸನ್ 16 ಶುಕ್ರವಾರದಿಂದ ಶುರುವಾಗಲಿದೆ. ಅಹಮದಾಬಾದ್​ನಲ್ಲಿ ನಡೆಯಲಿರುವ ಹೊಸ ಆವೃತ್ತಿಯ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಏಪ್ರಿಲ್ 2 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಕಣಕ್ಕಿಳಿಯುವ ಮೂಲಕ ಆರ್​ಸಿಬಿ ತನ್ನ ಐಪಿಎಲ್ ಅಭಿಯಾನ ಆರಂಭಿಸಲಿದೆ.

2 / 13
ವಿಶೇಷ ಎಂದರೆ ಈ ಪಂದ್ಯದ ಮೂಲಕ ದಾಖಲೆಗಳ ಸರದಾರ ವಿರಾಟ್ ಕೊಹ್ಲಿ (Virat Kohli) ಕೂಡ 17ನೇ ಸೀಸನ್​ನಲ್ಲಿ ಆರ್​ಸಿಬಿ ಪರ ಕಣಕ್ಕಿಳಿಯಲಿದ್ದಾರೆ. ಅಂದರೆ ಐಪಿಎಲ್​ ಇತಿಹಾಸದಲ್ಲೇ ಯಾವುದೇ ಆಟಗಾರ ಒಂದೇ ತಂಡದ ಪರ 17 ಸೀಸನ್ ಆಡಿಲ್ಲ. ಇದೀಗ ಈ ಹೊಸ ದಾಖಲೆಯೊಂದಿಗೆ ಕಿಂಗ್ ಕೊಹ್ಲಿ ಐಪಿಎಲ್ ಅಭಿಯಾನ ಆರಂಭಿಸಲಿರುವುದು ವಿಶೇಷ.

3 / 13
ಇನ್ನು ಕಳೆದ 16 ಸೀಸನ್​ ಐಪಿಎಲ್​ನಲ್ಲಿ ಕಿಂಗ್ ಕೊಹ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಈ ದಾಖಲೆಗಳು 17ನೇ ಆವೃತ್ತಿಯಲ್ಲೂ ಮುಂದುವರೆಯಲಿದೆ. ಆದರೆ ಈ ಬಾರಿ ಈ ದಾಖಲೆಯನ್ನು ಮುರಿಯುವವರು ಯಾರು ಎಂಬುದೇ ಪ್ರಶ್ನೆ. ಹಾಗಿದ್ರೆ ಐಪಿಎಲ್​ನಲ್ಲಿ ವಿರಾಟ್ ಕೊಹ್ಲಿಯ ಹೆಸರಿನಲ್ಲಿರುವ ಟಾಪ್-10 ದಾಖಲೆಗಳು ಯಾವುವು ಎಂದು ನೋಡೋಣ...

4 / 13
50+ ಸ್ಕೋರ್ ದಾಖಲೆ: ಐಪಿಎಲ್‌ನ ಒಂದು ಆವೃತ್ತಿಯಲ್ಲಿ ಅತಿ ಹೆಚ್ಚು 50 ಪ್ಲಸ್ ಸ್ಕೋರ್‌ ಬಾರಿಸಿದ ವಿಶೇಷ ದಾಖಲೆ ಕಿಂಗ್ ಕೊಹ್ಲಿಯ ಹೆಸರಿನಲ್ಲಿದೆ. 2016ರ ಆವೃತ್ತಿಯಲ್ಲಿ ಕಿಂಗ್ ಕೊಹ್ಲಿ 11 ಬಾರಿ 50 ಪ್ಲಸ್ ಸ್ಕೋರ್​ಗಳಿಸಿದ್ದರು. ಇದರಲ್ಲಿ 7 ಅರ್ಧಶತಕ ಹಾಗೂ 4 ಶತಕಗಳು ಸೇರಿವೆ.

5 / 13
ರನ್ ಸರದಾರ: ಐಪಿಎಲ್​ನಲ್ಲಿ ಅತೀ ಹೆಚ್ಚು ರನ್​ ಕಲೆಹಾಕಿದ ನಾಯಕ ಎಂಬ ದಾಖಲೆ ಕೂಡ ವಿರಾಟ್ ಕೊಹ್ಲಿಯ ಹೆಸರಿನಲ್ಲಿದೆ. ಕಿಂಗ್ ಕೊಹ್ಲಿ ನಾಯಕನಾಗಿ ಐಪಿಎಲ್​ನಲ್ಲಿ 4994 ರನ್​ಗಳಿಸಿದರೆ, ಧೋನಿ ನಾಯಕನಾಗಿ 4660 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ.

6 / 13
ಜೊತೆಯಾಟದ ದಾಖಲೆ: ಐಪಿಎಲ್ ಸೀಸನ್​ವೊಂದರಲ್ಲಿ ಅತ್ಯಧಿಕ ರನ್​ ಕಲೆಹಾಕಿದ ಜೋಡಿಯ ದಾಖಲೆಯಲ್ಲೂ ವಿರಾಟ್ ಕೊಹ್ಲಿಯ ಹೆಸರಿನಲ್ಲಿದೆ. 2016 ರಲ್ಲಿ ಕಿಂಗ್ ಕೊಹ್ಲಿ ಹಾಗೂ ಎಬಿಡಿ ಜೊತೆಗೂಡಿ ಒಟ್ಟು 939 ರನ್ ಬಾರಿಸಿ ಹೊಸ ಇತಿಹಾಸ ನಿರ್ಮಿಸಿದ್ದರು.

7 / 13
ಪಂದ್ಯ ಶ್ರೇಷ್ಠ ಆಟಗಾರ: ಐಪಿಎಲ್ ಸೀಸನ್​ವೊಂದರಲ್ಲಿ ಅತೀ ಹೆಚ್ಚು ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರನಾಗಿ ಕೂಡ ವಿರಾಟ್ ಕೊಹ್ಲಿ ಹೊರಹೊಮ್ಮಿದ್ದರು. 2016ರಲ್ಲಿ ವಿರಾಟ್ ಕೊಹ್ಲಿ 5 ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಇದು ಕೂಡ ಒಂದು ದಾಖಲೆಯಾಗಿದೆ.

8 / 13
ಕ್ರಮಾಂಕದ ರನ್​ ಸರದಾರ: ಐಪಿಎಲ್​ನಲ್ಲಿ 2 ಕ್ರಮಾಂಕದಲ್ಲಿ ಕಣಕ್ಕಿಳಿದು ತಲಾ 2 ಸಾವಿರಕ್ಕೂ ಅಧಿಕ ರನ್ ಕಲೆಹಾಕಿದ ವಿಶೇಷ ದಾಖಲೆ ಕೂಡ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಕಿಂಗ್ ಕೊಹ್ಲಿ ಆರಂಭಿಕ ಹಾಗೂ 3ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುವ ಮೂಲಕ ಈ ಸಾಧನೆ ಮಾಡಿದ್ದಾರೆ.

9 / 13
ಇನಿಂಗ್ಸ್ ದಾಖಲೆ: ವಿರಾಟ್ ಕೊಹ್ಲಿ ಮೊದಲ ಇನಿಂಗ್ಸ್​ನಲ್ಲಿ ಅತೀ ಹೆಚ್ಚು ರನ್​ ಕಲೆಹಾಕಿದ ಹಾಗೂ 2ನೇ ಇನಿಂಗ್ಸ್​ನಲ್ಲಿ ಅತ್ಯಧಿಕ ರನ್ ಬಾರಿಸಿದ ಐಪಿಎಲ್ ದಾಖಲೆ ಹೊಂದಿದ್ದಾರೆ. ಅಂದರೆ ಮೊದಲು ಬ್ಯಾಟಿಂಗ್ ಮಾಡಿದ ಪಂದ್ಯದಲ್ಲಿ ಕಿಂಗ್ ಕೊಹ್ಲಿ  3905 ರನ್ ಗಳಿಸಿದ್ದರು. ಹಾಗೆಯೇ ಚೇಸಿಂಗ್ ಮಾಡುವಾಗ 3333 ರನ್‌ಗಳನ್ನು ಬಾರಿಸಿ ದಾಖಲೆ ಬರೆದಿದ್ದಾರೆ.

10 / 13
30 ಸ್ಕೋರ್​ಗಳ ದಾಖಲೆ: ಐಪಿಎಲ್​ನಲ್ಲಿ ಅತಿ ಹೆಚ್ಚು ಇನ್ನಿಂಗ್ಸ್‌ಗಳಲ್ಲಿ 30ಕ್ಕೂ ಹೆಚ್ಚು ರನ್ ಗಳಿಸಿದ ಬ್ಯಾಟರ್​ ದಾಖಲೆಯು ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಕಿಂಗ್ ಕೊಹ್ಲಿ ಒಟ್ಟು 105 ಬಾರಿ ಈ ಸಾಧನೆ ಮಾಡಿದ್ದಾರೆ.

11 / 13
ಅತ್ಯಧಿಕ ರನ್ ದಾಖಲೆ: ಐಪಿಎಲ್​ನ ಸೀಸನ್​ವೊಂದರಲ್ಲಿ ಅತ್ಯಧಿಕ ರನ್ ಕಲೆಹಾಕಿದ ದಾಖಲೆಯನ್ನೂ ಕೂಡ ವಿರಾಟ್ ಕೊಹ್ಲಿ ನಿರ್ಮಿಸಿದ್ದರು. 2016ರಲ್ಲಿ 16 ಪಂದ್ಯಗಳಲ್ಲಿ ಕಿಂಗ್ ಕೊಹ್ಲಿ ಒಟ್ಟು 973 ರನ್ ಗಳಿಸಿದ್ದರು.

12 / 13
ಅತೀ ಹೆಚ್ಚು ಶತಕ: ಐಪಿಎಲ್‌ನಲ್ಲಿ ಅತೀ ಹೆಚ್ಚು ಶತಕ ಸಿಡಿಸಿದ ಬ್ಯಾಟರ್​ ಎಂಬ ದಾಖಲೆ ಕೂಡ ವಿರಾಟ್ ಕೊಹ್ಲಿಯ ಹೆಸರಿನಲ್ಲಿದೆ. ಕಿಂಗ್ ಕೊಹ್ಲಿ ಒಟ್ಟು 7 ಶತಕ ಬಾರಿಸಿ ಈ ದಾಖಲೆ ನಿರ್ಮಿಸಿದ್ದಾರೆ.

13 / 13
ಈ ಎಲ್ಲಾ ದಾಖಲೆಗಳೊಂದಿಗೆ ವಿರಾಟ್ ಕೊಹ್ಲಿ 17ನೇ ಆವೃತ್ತಿಯ ಐಪಿಎಲ್​ನಲ್ಲಿ ಕಣಕ್ಕಿಳಿಯಲಿದ್ದಾರೆ. ಕಿಂಗ್ ಕೊಹ್ಲಿ ಹೆಸರಿನಲ್ಲಿರುವ ಈ ಟಾಪ್-10 ದಾಖಲೆಗಳಲ್ಲಿ ಯಾವ ದಾಖಲೆಯನ್ನು ಯಾರು ಮುರಿಯಲಿದ್ದಾರೆ ಎಂಬುದನ್ನು ಕಾದು ನೋಡೋಣ.