IPL 2023: ಹೊಸ ಆಟಗಾರನ ಹುಡುಕಾಟದಲ್ಲಿ CSK

| Updated By: ಝಾಹಿರ್ ಯೂಸುಫ್

Updated on: Feb 22, 2023 | 7:24 PM

IPL 2023 Kannada: ವಿದೇಶಿ ವೇಗಿಯನ್ನೇ ಆಯ್ಕೆ ಮಾಡಬೇಕಿರುವುದರಿಂದ ಚೆನ್ನೈ ಸೂಪರ್ ಕಿಂಗ್ಸ್​ ಅತ್ಯುತ್ತಮ ಆಯ್ಕೆಗಳ ಮೊರೆ ಹೋಗಿದೆ. ಈ ಪಟ್ಟಿಯಲ್ಲಿ ಮೂವರು ವಿದೇಶಿ ಬೌಲರ್​ಗಳ ಹೆಸರು ಮುಂಚೂಣಿಯಲ್ಲಿದೆ. ಅವರೆಂದರೆ....

1 / 7
ಐಪಿಎಲ್ ಸೀಸನ್ 16 ಮಾರ್ಚ್ 31 ರಿಂದ ಶುರುವಾಗಲಿದೆ. ಅಹಮದಾಬಾದ್​ನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕಣಕ್ಕಿಳಿಯಲಿದೆ. ಆದರೆ ಅದಕ್ಕೂ ಮುನ್ನ ತಂಡಕ್ಕೆ ಹೊಸ ವೇಗಿಯನ್ನು ಆಯ್ಕೆ ಮಾಡಬೇಕಾದ ಅನಿವಾರ್ಯತೆ ಸಿಎಸ್​ಕೆ ತಂಡದ ಮುಂದಿದೆ.

2 / 7
ಹೌದು, ಈ ಬಾರಿಯ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಫ್ರಾಂಚೈಸಿ ಖರೀದಿಸಿದ ನ್ಯೂಜಿಲೆಂಡ್ ವೇಗಿ ಕೈಲ್ ಜೇಮಿಸನ್ ಗಾಯದ ಕಾರಣ ಐಪಿಎಲ್​ನಿಂದ ಹೊರಗುಳಿದಿದ್ದಾರೆ. ಹೀಗಾಗಿ ಬದಲಿ ಆಟಗಾರನ ಆಯ್ಕೆಗೆ ಸಿಎಸ್​ಕೆ ತಂಡದ ಮುಂದಾಗಿದೆ.

3 / 7
ಇಲ್ಲಿ ವಿದೇಶಿ ವೇಗಿಯನ್ನೇ ಆಯ್ಕೆ ಮಾಡಬೇಕಿರುವುದರಿಂದ ಚೆನ್ನೈ ಸೂಪರ್ ಕಿಂಗ್ಸ್​ ಅತ್ಯುತ್ತಮ ಆಯ್ಕೆಗಳ ಮೊರೆ ಹೋಗಿದೆ. ಈ ಪಟ್ಟಿಯಲ್ಲಿ ಮೂವರು ವಿದೇಶಿ ಬೌಲರ್​ಗಳ ಹೆಸರು ಮುಂಚೂಣಿಯಲ್ಲಿದೆ. ಅವರೆಂದರೆ....

4 / 7
ಆ್ಯಂಡ್ರ್ಯೂ ಟೈ: ಆಸ್ಟ್ರೇಲಿಯಾ ವೇಗಿ ಆ್ಯಂಡ್ರ್ಯೂ ಟೈ ಡೆತ್ ಓವರ್ ಸ್ಪೆಷಲಿಸ್ಟ್ ಬೌಲರ್. ಈ ಹಿಂದೆ ಐಪಿಎಲ್​ನಲ್ಲಿ ಕಾಣಿಸಿಕೊಂಡಿದ್ದರೂ ಈ ಬಾರಿ ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ. ಆದರೆ ಇತ್ತೀಚೆಗೆ ಮುಕ್ತಾಯಗೊಂಡ ಬಿಗ್ ಬ್ಯಾಷ್​ ಲೀಗ್​ನಲ್ಲಿ 16 ಪಂದ್ಯಗಳಿಂದ 26 ವಿಕೆಟ್ ಕಬಳಿಸಿ ಮಿಂಚಿದ್ದರು. ಹಾಗೆಯೇ ಐಪಿಎಲ್​ನ 30 ಪಂದ್ಯಗಳಲ್ಲಿ 42 ವಿಕೆಟ್‌ಗಳನ್ನು ಪಡೆದಿದ್ದಾರೆ. ಹೀಗಾಗಿ ಸಿಎಸ್​ಕೆ ಫ್ರಾಂಚೈಸಿ ಜೇಮಿಸನ್ ಬದಲಿಗೆ ಟೈ ಅವರನ್ನು ಆಯ್ಕೆ ಮಾಡಿದರೂ ಅಚ್ಚರಿಪಡಬೇಕಿಲ್ಲ.

5 / 7
ಜೆರಾಲ್ಡ್ ಕೊಟ್ಸಿ: ಸೌತ್ ಆಫ್ರಿಕಾದ 22ರ ಹರೆಯದ ಯುವ ವೇಗಿ ಜೆರಾಲ್ಡ್ ಕೊಟ್ಸಿ ಕೂಡ ಸಿಎಸ್​ಕೆ ತಂಡದ ಆಯ್ಕೆಯ ಲೀಸ್ಟ್​ನಲ್ಲಿದ್ದಾರೆ. ಏಕೆಂದರೆ ಸೌತ್ ಆಫ್ರಿಕಾ ಟಿ20 ಲೀಗ್​ನಲ್ಲಿ ಸಿಎಸ್​ಕೆ ಫ್ರಾಂಚೈಸಿಯ ಜೋಬರ್ಗ್​ ಸೂಪರ್ ಕಿಂಗ್ಸ್ ಪರ ಜೆರಾಲ್ಡ್ ಆಡಿದ್ದರು. ಈ ವೇಳೆ 9 ಪಂದ್ಯಗಳಿಂದ ಒಟ್ಟು 17 ವಿಕೆಟ್ ಕಬಳಿಸಿದ್ದರು. ಹೀಗಾಗಿ ಜೆರಾಲ್ಡ್ ಅವರನ್ನು ಜೇಮಿಸನ್ ಸ್ಥಾನದಲ್ಲಿ ಆಯ್ಕೆ ಮಾಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

6 / 7
ರಿಲೆ ಮೆರೆಡಿತ್: ಆಸ್ಟ್ರೇಲಿಯಾದ ಘಾತಕ ವೇಗಿ ರಿಲೆ ಮೆರೆಡಿತ್ ಹೆಸರು ಕೂಡ ಈ ಪಟ್ಟಿಯಲ್ಲಿ ಕೇಳಿ ಬರುತ್ತಿದೆ. 140 ಕಿ.ಮೀ ವೇಗದಲ್ಲಿ ಚೆಂಡೆಸೆಯುವ ಸಾಮರ್ಥ್ಯ ಹೊಂದಿರುವ ಮೆರೆಡಿತ್ ಐಪಿಎಲ್ 2022 ರಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದರು. ಇನ್ನು ಆಡಿದ 8 ಪಂದ್ಯಗಳಿಂದ 8 ವಿಕೆಟ್ ಕಬಳಿಸಲು ಮಾತ್ರ ಯಶಸ್ವಿಯಾಗಿದ್ದರು. ಇದಾಗ್ಯೂ ಅತ್ಯುತ್ತಮ ವೇಗದ ಬೌಲರ್​ನ ಆಯ್ಕೆಗೆ ಮುಂದಾದರೆ ಸಿಎಸ್​ಕೆ ರಿಲೆ ಮೆರೆಡಿತ್​ಗೆ ಮಣೆ ಹಾಕಬಹುದು.

7 / 7
ಚೆನ್ನೈ ಸೂಪರ್ ಕಿಂಗ್ಸ್ ತಂಡ​: ಎಂಎಸ್​ ಧೋನಿ (ನಾಯಕ), ಭಗತ್ ವರ್ಮಾ, ಅಜಯ್ ಮಂಡಲ್, ನಿಶಾಂತ್ ಸಿಂಧು, ಶೇಕ್ ರಶೀದ್, ಬೆನ್ ಸ್ಟೋಕ್ಸ್ , ಅಜಿಂಕ್ಯ ರಹಾನೆ, ಡೆವೊನ್ ಕಾನ್ವೆ, ರುತುರಾಜ್ ಗಾಯಕ್ವಾಡ್, ಅಂಬಟಿ ರಾಯುಡು, ಸುಭ್ರಾಂಶು ಸೇನಾಪತಿ, ಮೊಯಿನ್ ಅಲಿ, ಶಿವಂ ದುಬೆ, ರಾಜವರ್ಧನ್ ಹಂಗರ್ಗೇಕರ್, ಡ್ವೈನ್ ಪ್ರಿಟೋರಿಯಸ್, ಮಿಚೆಲ್ ಸ್ಯಾಂಟ್ನರ್, ರವೀಂದ್ರ ಜಡೇಜಾ, ತುಷಾರ್ ದೇಶಪಾಂಡೆ, ರವೀಂದ್ರ ಜಡೇಜಾ, ತುಷಾರ್ ದೇಶಪಾಂಡೆ, , ಸಿಮರ್ಜೀತ್ ಸಿಂಗ್, ದೀಪಕ್ ಚಾಹರ್, ಪ್ರಶಾಂತ್ ಸೋಲಂಕಿ, ಮಹೇಶ್ ತೀಕ್ಷಣ.