Updated on: May 12, 2023 | 3:16 PM
ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 13 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ ಸಿಡಿಸಿದ ರಾಜಸ್ಥಾನ್ ರಾಯಲ್ಸ್ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಈ ಹಿಂದೆ ಐಪಿಎಲ್ನಲ್ಲಿ ದಾಖಲಾಗಿದ್ದ ಅತಿ ವೇಗದ ಅರ್ಧಶತಕದ ದಾಖಲೆಯನ್ನು ಉಡೀಸ್ ಮಾಡಿದ್ದಾರೆ.
ಈ ಹಿಂದೆ ಲಕ್ನೋ ನಾಯಕ ಕೆಎಲ್ ರಾಹುಲ್ ಹಾಗೂ ಮಾಜಿ ಕೆಕೆಆರ್ ಆಟಗಾರ ಪ್ಯಾಟ್ ಕಮ್ಮಿನ್ಸ್ 14 ಎಸೆತಗಳಲ್ಲಿ ವೇಗದ ಅರ್ಧಶತಕ ಸಿಡಿಸಿದ ದಾಖಲೆ ಬರೆದಿದ್ದರು. ಇದೀಗ ಆ ದಾಖಲೆ ಜೈಸ್ವಾಲ್ ಪಾಲಾಗಿದೆ.
ಕೆಕೆಆರ್ ವಿರುದ್ಧ ಕೇವಲ 47 ಎಸೆತಗಳನ್ನು ಎದುರಿಸಿದ ಜೈಸ್ವಾಲ್ 12 ಬೌಂಡರಿ ಹಾಗೂ 5 ಭರ್ಜರಿ ಸಿಕ್ಸರ್ಗಳ ನೆರವಿನಿಂದ ಅಜೇಯ 98 ರನ್ ಬಾರಿಸಿದರು. ಜೈಸ್ವಾಲ್ ಅವರ ಅಬ್ಬರದ ಆಟದ ನೆರವಿನಿಂದ ರಾಜಸ್ಥಾನ್ ಕೂಡ ಕೇವಲ 14ನೇ ಓವರ್ನಲ್ಲಿ ಗೆಲುವು ದಡ ಸೇರಿತು.
ಇದೀಗ ಈ ಯುವ ಬ್ಯಾಟರ್ ಆಟಕ್ಕೆ ಮನಸೋತಿರುವ ಬಿಸಿಸಿಐ ಕಾರ್ಯದರ್ಶಿ ಜೈ ಶಾ, ಯಶಸ್ವಿ ಜೈಸ್ವಾಲ್ ಅವರ ಆಟವನ್ನು ಆಡಿ ಹೊಗಳಿದ್ದಾರೆ. ಈ ಬಗ್ಗೆ ಟ್ವಿಟರ್ನಲ್ಲಿ ಬರೆದುಕೊಂಡಿರುವ ಜೈ ಶಾ, ಯಶಸ್ವಿ ಜೈಸ್ವಾಲ್ ಅವರ ಈ ಇನ್ನಿಂಗ್ಸ್ ವಿಶೇಷವಾಗಿದೆ. ಆಟದ ಬಗ್ಗೆ ಅವರ ಧೈರ್ಯ ಮತ್ತು ಉತ್ಸಾಹವು ಸ್ಪಷ್ಟವಾಗಿತ್ತು. ಐಪಿಎಲ್ನಲ್ಲಿ ಇತಿಹಾಸ ನಿರ್ಮಿಸಿದ್ದಕ್ಕೆ ಅಭಿನಂದನೆಗಳು. ಮುಂದೆಯೂ ನಿಮ್ಮ ಫಾರ್ಮ್ ಹೀಗೆಯೇ ಮುಂದುವರೆಯಲಿ'' ಎಂದು ಬರೆದುಕೊಂಡಿದ್ದಾರೆ.
ಯಶಸ್ವಿ ಜೈಸ್ವಾಲ್ ತಂಡ ಭಾರತ ಪರ ಆಡುವ ಸಮಯ ಬಂದಿದೆ ಎಂದು ರವಿಶಾಸ್ತ್ರಿ ಹೇಳಿಕೊಂಡಿದ್ದರೆ, ಇನ್ನು 3 ತಿಂಗಳಲ್ಲಿ ಟೀಂ ಇಂಡಿಯಾದಲ್ಲಿ ಜೈಸ್ವಾಲ್ ಸ್ಥಾನ ಪಡೆಯುತ್ತೇನೆ ಎಂದು ಆಕಾಶ್ ಚೋಪ್ರಾ ಬರೆದುಕೊಂಡಿದ್ದಾರೆ.
ಇಷ್ಟೆ ಅಲ್ಲದೆ ಯಶಸ್ವಿ ಜೈಸ್ವಾಲ್ ಆಟವನ್ನು ಐಪಿಎಲ್ನ ಎಲ್ಲಾ ತಂಡಗಳು ಹಾಡಿ ಹೊಗಳುವುದರೊಂದಿಗೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶುಭ ಹಾರೈಸಿದ್ದಾರೆ.