IPL 2024: ಈ ಐವರು ವಿದೇಶಿ ಆಟಗಾರರಿಗೆ ಇದು ಚೊಚ್ಚಲ ಐಪಿಎಲ್
IPL 2024: 2024 ರ ಐಪಿಎಲ್‌ಗೆ ವೇದಿಕೆ ಸಿದ್ಧವಾಗಿದೆ. ಮಾರ್ಚ್ 22 ರಿಂದ ಮಿಲಿಯನ್ ಡಾಲರ್ ಟೂರ್ನಿ ಆರಂಭವಾಗಲಿದೆ. ಇದು ಈ ಲೀಗ್ನ 17ನೇ ಆವೃತ್ತಿಯಾಗಿದ್ದು, ಈ ಆವೃತ್ತಿಯಲ್ಲಿ ಇದೇ ಮೊದಲ ಬಾರಿಗೆ ಐಪಿಎಲ್ ಅಖಾಡಕ್ಕಿಳಿಯಲು ಪ್ರಮುಖವಾಗಿ ಈ ಐವರು ವಿದೇಶಿ ಆಟಗಾರರು ಎದುರು ನೋಡುತ್ತಿದ್ದಾರೆ. ಅವರ ವಿವರ ಇಂತಿದೆ.
1 / 6
2024 ರ ಐಪಿಎಲ್‌ಗೆ ವೇದಿಕೆ ಸಿದ್ಧವಾಗಿದೆ. ಮಾರ್ಚ್ 22 ರಿಂದ ಮಿಲಿಯನ್ ಡಾಲರ್ ಟೂರ್ನಿ ಆರಂಭವಾಗಲಿದೆ. ಇದು ಈ ಲೀಗ್ನ 17ನೇ ಆವೃತ್ತಿಯಾಗಿದ್ದು, ಈ ಆವೃತ್ತಿಯಲ್ಲಿ ಇದೇ ಮೊದಲ ಬಾರಿಗೆ ಐಪಿಎಲ್ ಅಖಾಡಕ್ಕಿಳಿಯಲು ಪ್ರಮುಖ ಈ ಐವರು ವಿದೇಶಿ ಆಟಗಾರರು ಎದುರು ನೋಡುತ್ತಿದ್ದಾರೆ. ಅವರ ವಿವರ ಇಂತಿದೆ.
2 / 6
ಜೆರಾಲ್ಡ್ ಕೊಯೆಟ್ಜಿ: ಕಳೆದ ನವೆಂಬರ್ನಲ್ಲಿ ನಡೆದ ಏಕದಿನ ವಿಶ್ವಕಪ್ನಲ್ಲಿ ತನ್ನ ವೇಗದ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ ಈ ದಕ್ಷಿಣ ಆಫ್ರಿಕಾದ ವೇಗಿ ಜೆರಾಲ್ಡ್ ಕೊಯೆಟ್ಜಿ, ಭಾರತದ ಆಫ್ರಿಕಾ ಪ್ರವಾಸದಲ್ಲೂ ಟೀಂ ಇಂಡಿಯಾ ಆಟಗಾರರಿಗೆ ಸಿಂಹ ಸ್ವಪ್ನರಾಗಿದ್ದರು. ಯುವ ಬೌಲರ್ನ ಪ್ರತಿಭೆ ನೋಡಿದ್ದ ಮುಂಬೈ ಫ್ರಾಂಚೈಸಿ ಈತನನ್ನು 5 ಕೋಟಿ ರೂಗೆ ಖರೀದಿಸಿದ್ದು, ತಂಡದ ಪ್ಲೇಯಿಂಗ್ ಇಲೆವೆನ್ನಲ್ಲಿ ಈ ವೇಗಿಗೆ ಅವಕಾಶ ಸಿಗುವುದು ಖಚಿತವಾಗಿದೆ.
3 / 6
ರಚಿನ್ ರವೀಂದ್ರ: ಕರ್ನಾಟಕ ಮೂಲಕ ನ್ಯೂಜಿಲೆಂಡ್‌ನ ಈ ಯುವ ಆಲ್‌ರೌಂಡರ್ ರಚಿನ್ ರವೀಂದ್ರ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ನಲ್ಲಿ ವಿಶ್ವ ಕ್ರಿಕೆಟ್ನ ಗಮನ ಸೆಳೆದಿದ್ದರು. ಅಲ್ಲದೆ ಟೂರ್ನಿಯಲ್ಲಿ ಅಧಿಕ ರನ್ ಗಳಿಸಿದ ಬ್ಯಾಟರ್ಗಳ ಪೈಕಿ ಒಬ್ಬರಾಗಿದ್ದರು. ಇದರ ನಂತರ, ಐಪಿಎಲ್ ಮಿನಿ ಹರಾಜಿನಲ್ಲಿ ಸಿಎಸ್ಕೆ ಫ್ರಾಂಚೈಸಿ ಈ ಆಟಗಾರರನ್ನು 1 ಕೋಟಿ 80 ಲಕ್ಷಕ್ಕೆ ಖರೀದಿಸಿತ್ತು. ಇದೀಗ ಆರ್ಸಿಬಿ ವಿರುದ್ಧದ ಮೊದಲ ಪಂದ್ಯದಲ್ಲಿ ರಚಿನ್ ಐಪಿಎಲ್‌ಗೆ ಪದಾರ್ಪಣೆ ಮಾಡುವ ಸಾಧ್ಯತೆಗಳಿವೆ.
4 / 6
ದಿಲ್ಶಾನ್ ಮಧುಶಂಕ: ಶ್ರೀಲಂಕಾದ ಯುವ ಎಡಗೈ ಬೌಲರ್ ದಿಲ್ಶನ್ ಮಧುಶಂಕ ಇದೇ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಅವರನ್ನು ಮುಂಬೈ ಇಂಡಿಯನ್ಸ್ 4 ಕೋಟಿ 60 ಲಕ್ಷ ರೂಪಾಯಿಗೆ ಖರೀದಿಸಿದೆ. ಮಧುಶಂಕ ಇದುವರೆಗೆ 14 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದು ಇದರಲ್ಲಿ ಅವರು 14 ವಿಕೆಟ್‌ಗಳನ್ನು ಪಡೆದಿದ್ದಾರೆ.
5 / 6
ಅಜ್ಮತುಲ್ಲಾ ಒಮರ್ಜಾಯ್: ಅಫ್ಘಾನಿಸ್ತಾನದ ಅಜ್ಮತುಲ್ಲಾ ಒಮರ್ಜಾಯ್ ಅವರನ್ನು 50 ಲಕ್ಷ ಮೂಲ ಬೆಲೆಗೆ ಗುಜರಾತ್ ಟೈಟಾನ್ಸ್ ಖರೀದಿಸಿದೆ. ಒಮರ್ಜಾಯ್ ಇದುವರೆಗೆ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡಲ್ಲೂ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಒಮರ್ಜಾಯ್ ಅವರ ಪ್ರದರ್ಶನವನ್ನು ನೋಡಿದರೆ, ನಾಯಕ ಶುಭ್ಮನ್ ಗಿಲ್ ಆರಂಭಿಕ ಪಂದ್ಯದಿಂದಲೇ ಈ ಆಲ್ ರೌಂಡರ್‌ಗೆ ಆಡಲು ಅವಕಾಶ ನೀಡಬಹುದು.
6 / 6
ಶಮರ್ ಜೋಸೆಫ್: ಗಬ್ಬಾ ಟೆಸ್ಟ್ ಗೆಲುವಿನ ಶಮರ್ ಜೋಸೆಫ್ ವಿಶ್ವ ಕ್ರಿಕೆಟ್ನಲ್ಲಿ ಸಾಕಷ್ಟು ಸಂಚಲನ ಮೂಡಿಸಿದ್ದಾರೆ. ಕಾಂಗರೂಗಳನ್ನು ಅವರ ನಾಡಲ್ಲೇ ಮಣಿಸಿದ ವೆಸ್ಟ್ ಇಂಡೀಸ್ ತಂಡದ ಪ್ರಮುಖ ಗೆಲುವಿನ ರೂವಾರಿ ಎನಿಸಿಕೊಂಡಿರುವ ಶಮರ್ ಜೋಸೆಫ್ ಅವರನ್ನು ಮತ್ತೊಬ್ಬ ವೇಗಿ ಮಾರ್ಕ್ ವುಡ್ ಬದಲಿಗೆ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಈ ಯುವ ಬೌಲರ್ ಮೊದಲ ಪಂದ್ಯದಲ್ಲೇ ಐಪಿಎಲ್ ಪಾದಾರ್ಪಣೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ.