IPL 2024: ಆಡಿರುವ 9 ಪಂದ್ಯಗಳಲ್ಲಿ ಮಿಂಚಿದ ಭಾರತದ ಅನ್‌ಕ್ಯಾಪ್ಡ್ ಆಟಗಾರರು
IPL 2024: ಒಂಬತ್ತು ಪಂದ್ಯಗಳಲ್ಲಿ ಭಾರತದ ಅನೇಕ ಯುವ ಬ್ಯಾಟ್ಸ್‌ಮನ್‌ಗಳು ಇದುವರೆಗೆ ತಮ್ಮ ಪ್ರದರ್ಶನದ ಮೂಲಕ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರಲ್ಲಿ ಅನುಜ್ ರಾವತ್, ಅಭಿಷೇಕ್ ಪೊರೆಲ್, ರಮಣದೀಪ್ ಸಿಂಗ್, ರಿಯಾನ್ ಪರಾಗ್, ಸಮೀರ್ ರಿಜ್ವಿ, ಹರ್ಷಿತ್ ರಾಣಾ ಮತ್ತು ಅಭಿಷೇಕ್ ಶರ್ಮಾ ಸೇರಿದ್ದಾರೆ. ಇವರೆಲ್ಲರೂ ಅನ್‌ಕ್ಯಾಪ್ಡ್ ಆಟಗಾರರು ಎಂಬುದು ಇಲ್ಲಿ ವಿಶೇಷ.
1 / 9
ಐಪಿಎಲ್ 2024 ರಲ್ಲಿ ಇದುವರೆಗೆ 9 ಪಂದ್ಯಗಳನ್ನು ಆಡಲಾಗಿದೆ. ಇಂದು 10ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. ಟೂರ್ನಿಯಲ್ಲಿ ಇದುವರೆಗೆ ತವರು ನೆಲದಲ್ಲಿ ಆಡಿದ ತಂಡಗಳು ಮೇಲುಗೈ ಸಾಧಿಸಿವೆ. ಎಲ್ಲಾ 9 ಪಂದ್ಯಗಳನ್ನು ಆತಿಥೇಯ ತಂಡ ಗೆದ್ದಿದೆ.
2 / 9
ಈ ಒಂಬತ್ತು ಪಂದ್ಯಗಳಲ್ಲಿ ಭಾರತದ ಅನೇಕ ಯುವ ಬ್ಯಾಟ್ಸ್‌ಮನ್‌ಗಳು ಇದುವರೆಗೆ ತಮ್ಮ ಪ್ರದರ್ಶನದ ಮೂಲಕ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರಲ್ಲಿ ಅನುಜ್ ರಾವತ್, ಅಭಿಷೇಕ್ ಪೊರೆಲ್, ರಮಣದೀಪ್ ಸಿಂಗ್, ರಿಯಾನ್ ಪರಾಗ್, ಸಮೀರ್ ರಿಜ್ವಿ, ಹರ್ಷಿತ್ ರಾಣಾ ಮತ್ತು ಅಭಿಷೇಕ್ ಶರ್ಮಾ ಸೇರಿದ್ದಾರೆ. ಇವರೆಲ್ಲರೂ ಅನ್‌ಕ್ಯಾಪ್ಡ್ ಆಟಗಾರರು ಎಂಬುದು ಇಲ್ಲಿ ವಿಶೇಷ.
3 / 9
ಅನುಜ್ ರಾವತ್ (ಆರ್‌ಸಿಬಿ): ಐಪಿಎಲ್ 2024 ರ ಮೊದಲ ಪಂದ್ಯದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಅನುಜ್ ರಾವತ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 25 ಎಸೆತಗಳಲ್ಲಿ 48 ರನ್‌ಗಳ ಬಿರುಗಾಳಿಯ ಇನ್ನಿಂಗ್ಸ್ ಆಡಿದರು. ಈ ವೇಳೆ ಯುವ ಬ್ಯಾಟ್ಸ್‌ಮನ್ 4 ಬೌಂಡರಿ ಹಾಗೂ 3 ಸಿಕ್ಸರ್ ಸಿಡಿಸಿದ್ದರು. ಆದಾಗ್ಯೂ, ಈ ಪಂದ್ಯದಲ್ಲಿ ಆರ್‌ಸಿಬಿ ಸೋಲನ್ನು ಎದುರಿಸಬೇಕಾಯಿತು.
4 / 9
ಅಭಿಷೇಕ್ ಪೊರೆಲ್ (ಡೆಲ್ಲಿ ಕ್ಯಾಪಿಟಲ್ಸ್): ಐಪಿಎಲ್ 2024 ರ ಎರಡನೇ ಪಂದ್ಯದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್‌ನ ಯುವ ಬ್ಯಾಟ್ಸ್‌ಮನ್ ಅಭಿಷೇಕ್ ಪೊರೆಲ್ 10 ಎಸೆತಗಳಲ್ಲಿ 320 ಸ್ಟ್ರೈಕ್ ರೇಟ್‌ನಲ್ಲಿ ಅಜೇಯ 32 ರನ್ ಗಳಿಸಿದರು. ಈ ಅವಧಿಯಲ್ಲಿ ಅವರ ಬ್ಯಾಟ್‌ನಿಂದ 4 ಬೌಂಡರಿ ಹಾಗೂ 2 ಸಿಕ್ಸರ್‌ಗಳು ಸಿಡಿದಿದ್ದವು.
5 / 9
ರಮಣದೀಪ್ ಸಿಂಗ್ (ಕೆಕೆಆರ್): ಲೀಗ್‌ನ ಮೂರನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ರಮಣದೀಪ್ ಸಿಂಗ್ 17 ಎಸೆತಗಳಲ್ಲಿ 35 ರನ್ ಗಳಿಸಿದ್ದರು. ಈ ವೇಳೆ 1 ಬೌಂಡರಿ ಹೊರತುಪಡಿಸಿ 4 ಸಿಕ್ಸರ್ ಕೂಡ ಬಾರಿಸಿದ್ದರು.
6 / 9
ರಿಯಾನ್ ಪರಾಗ್ (ರಾಜಸ್ಥಾನ್ ರಾಯಲ್ಸ್) :ರಾಜಸ್ಥಾನ ರಾಯಲ್ಸ್‌ನ ಯುವ ಬ್ಯಾಟ್ಸ್‌ಮನ್ ರಿಯಾನ್ ಪರಾಗ್ ಈ ಸೀಸನ್ನಲ್ಲಿ ಬ್ಯಾಟಿಂಗ್‌ನಲ್ಲಿ 4 ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರಿಯಾನ್ 29 ಎಸೆತಗಳಲ್ಲಿ 43 ರನ್ ಬಾರಿಸಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಕಳೆದ ಪಂದ್ಯದಲ್ಲಿ 45 ಎಸೆತಗಳಲ್ಲಿ 84 ರನ್ ಗಳಿಸಿ ಅಜೇಯ ಇನ್ನಿಂಗ್ಸ್ ಆಡಿದ್ದರು.
7 / 9
ಅಭಿಷೇಕ್ ಶರ್ಮಾ (ಹೈದರಾಬಾದ್): ಸನ್ ರೈಸರ್ಸ್ ಹೈದರಾಬಾದ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ರನ್ ಮಹಾಪೂರವೇ ಹರಿದುಬಂದಿತ್ತು. ಈ ಪಂದ್ಯದಲ್ಲಿ ಎಸ್‌ಆರ್‌ಎಚ್ ತಂಡ 20 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 277 ರನ್ ಗಳಿಸಿ ಇತಿಹಾಸ ನಿರ್ಮಿಸಿತು. ಇದರಲ್ಲಿ ಅಭಿಷೇಕ್ ಶರ್ಮಾ 23 ಎಸೆತಗಳಲ್ಲಿ 63 ರನ್ ಗಳಿಸಿ ಅದ್ಭುತ ಇನ್ನಿಂಗ್ಸ್ ಆಡಿದರು. ಈ ವೇಳೆ ಅವರು 3 ಬೌಂಡರಿಗಳ ಜೊತೆಗೆ 7 ಸಿಕ್ಸರ್‌ಗಳನ್ನು ಬಾರಿಸಿದ್ದರು.
8 / 9
ಸಮೀರ್ ರಿಜ್ವಿ (ಸಿಎಸ್ಕೆ): ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನ ಸಮೀರ್ ರಿಜ್ವಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದು 6 ಎಸೆತಗಳಲ್ಲಿ 14 ರನ್ ಬಾರಿಸಿದ್ದರು. ಅದರಲ್ಲೂ ರಶೀದ್ ಖಾನ್ ಎಸೆತದಲ್ಲಿ ಸಮೀರ್ 2 ಸಿಕ್ಸರ್ ಬಾರಿಸಿದ್ದರು.
9 / 9
ಹರ್ಷಿತ್ ರಾಣಾ (ಕೆಕೆಆರ್): ಬೌಲಿಂಗ್ ಜೊತೆಗೆ ಕೆಳ ಕ್ರಮಾಂಕದಲ್ಲಿಯೂ ವೇಗವಾಗಿ ರನ್ ಗಳಿಸುವ ಸಾಮರ್ಥ್ಯ ಹರ್ಷಿತ್ ರಾಣಾಗಿದೆ. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 8.2ರ ಎಕಾನಮಿಯಲ್ಲಿ 4 ಓವರ್ ಬೌಲ್ ಮಾಡಿದ ರಾಣಾ 33 ರನ್ ನೀಡಿ 3 ವಿಕೆಟ್ ಪಡೆದಿದ್ದರು.