‘ನನ್ನ ಹೃದಯ ಅಲ್ಲೆ ಇದೆ’; ಆರ್​ಸಿಬಿ ಸೇರುವ ಇಂಗಿತ ವ್ಯಕ್ತಪಡಿಸಿದ ಎಬಿ ಡಿವಿಲಿಯರ್ಸ್

|

Updated on: Dec 03, 2023 | 4:35 PM

AB de Villiers: ಐಪಿಎಲ್ ತಂಡದ ಕೋಚ್ ಆಗುವ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಎಬಿ ಡಿವಿಲಿಯರ್ಸ್, ‘ಮುಂದೆ ಏನಾಗಲಿದೆ ಎಂದು ಯಾರಿಗೂ ತಿಳಿದಿಲ್ಲ. ಆದರೆ ಆರ್​ಸಿಬಿಯೊಂದಿಗಿನ ಒಡನಾಟ ಅವಿಸ್ಮರಣೀಯವಾಗಿದೆ. ಇದರಿಂದ ಆರ್ಸಿಬಿ ಕೋಚ್ ಆಗುವ ಅವಕಾಶ ಸಿಕ್ಕರೆ ನಿರಾಕರಿಸುವುದಿಲ್ಲ ಎಂದು ಎಬಿ ಡಿವಿಲಿಯರ್ಸ್ ಸ್ಪಷ್ಟಪಡಿಸಿದ್ದಾರೆ.

1 / 7
ಎಲ್ಲಾ ತಂಡಗಳು 2024 ರ ಐಪಿಎಲ್​ಗೆ ತಮ್ಮ ತಯಾರಿಯನ್ನು ಪ್ರಾರಂಭಿಸಿವೆ. ಒಮ್ಮೆಯೂ ಪ್ರಶಸ್ತಿ ಗೆದ್ದಿರದ ಆರ್​ಸಿಬಿ ಕೂಡ ಪ್ರಶಸ್ತಿ ಗೆಲ್ಲುವ ಇರಾದೆಯೊಂದಿಗೆ ಮಿನಿ ಹರಾಜಿಗೂ ಮುನ್ನ ಬಲಿಷ್ಠ ತಂಡವನ್ನು ತನ್ನಲ್ಲೇ ಉಳಿಸಿಕೊಂಡಿದೆ.

2 / 7
ಇದಲ್ಲದೆ ಮಿನಿ ಹರಾಜಿನಲ್ಲಿ ತಂಡಕ್ಕೆ ಅವಶ್ಯಕವಿರುವ ಆಟಗಾರರ ಖರೀದಿಗೆ ತಯಾರಿ ಮಾಡಿಕೊಂಡಿದೆ. ಈ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಬಗ್ಗೆ ಒಂದು ದೊಡ್ಡ ಸುದ್ದಿ ಹೊರಬಿದ್ದಿದ್ದು, ಆರ್‌ಸಿಬಿ ಕೋಚ್ ಆಗುವ ಬಗ್ಗೆ ಎಬಿಡಿ ಭರ್ಜರಿ ಸುಳಿವು ನೀಡಿದ್ದಾರೆ.

3 / 7
ಎಬಿ ಡಿವಿಲಿಯರ್ಸ್ ದಕ್ಷಿಣ ಆಫ್ರಿಕಾದಲ್ಲಿ ಮಾತ್ರವಲ್ಲದೆ ಭಾರತದಲ್ಲೂ ಅಭಿಮಾನಿಗಳನ್ನು ಹೊಂದಿದ್ದಾರೆ. ಎಷ್ಟೇ ದೊಡ್ಡ ಟಾರ್ಗೆಟ್ ಇದ್ದರೂ ಎಬಿಡಿ ಮೈದಾನಕ್ಕಿಳಿದರೆ ಆರ್​ಸಿಬಿ ಗೆಲುವು ಬಹುತೇಕ ಖಚಿತ ಎಂದೇ ಭಾವಿಸಲಾಗಿತ್ತು. ಆದರೆ ದುರಾದೃಷ್ಟವಶಾತ್ ಎಬಿಡಿ ತಂಡದಲ್ಲಿರುವಾಗ ಆರ್​ಸಿಬಿ ಒಮ್ಮೆಯೂ ಕಪ್ ಗೆಲ್ಲಲು ಸಾಧ್ಯವಾಗಲಿಲ್ಲ.

4 / 7
ಪ್ರಸ್ತುತ ಅಂತರಾಷ್ಟ್ರೀಯ ಕ್ರಿಕೆಟ್ ಅಲ್ಲದೆ ಐಪಿಎಲ್​ನಿಂದಲೂ ಎಬಿಡಿ ನಿವೃತ್ತಿಯಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅಭಿಮಾನಿಗಳು ಎಬಿಡಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ಆರ್​ಸಿಬಿ ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದು ಹೊರಬಿದ್ದಿದ್ದು, ಆರ್​ಸಿಬಿ ತಂಡವನ್ನು ಮತ್ತೊಮ್ಮೆ ಸೇರಿಕೊಳ್ಳುವ ಇಂಗಿತವನ್ನು ಎಬಿಡಿ ಹೊರಹಾಕಿದ್ದಾರೆ.

5 / 7
ಐಪಿಎಲ್ ತಂಡದ ಕೋಚ್ ಆಗುವ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಎಬಿ ಡಿವಿಲಿಯರ್ಸ್, ‘ಮುಂದೆ ಏನಾಗಲಿದೆ ಎಂದು ಯಾರಿಗೂ ತಿಳಿದಿಲ್ಲ. ಆದರೆ ಆರ್​ಸಿಬಿಯೊಂದಿಗಿನ ಒಡನಾಟ ಅವಿಸ್ಮರಣೀಯವಾಗಿದೆ. ಇದರಿಂದ ಆರ್ಸಿಬಿ ಕೋಚ್ ಆಗುವ ಅವಕಾಶ ಸಿಕ್ಕರೆ ನಿರಾಕರಿಸುವುದಿಲ್ಲ ಎಂದು ಎಬಿ ಡಿವಿಲಿಯರ್ಸ್ ಸ್ಪಷ್ಟಪಡಿಸಿದ್ದಾರೆ.

6 / 7
ನನ್ನ ಹೃದಯ ಆರ್​ಸಿಬಿ ಜೊತೆಗಿದೆ, ಹಲವು ವರ್ಷಗಳಿಂದ ನಾನು ಅಲ್ಲಿ ಆಡಿದ್ದೇನೆ. ಬೆಂಗಳೂರಿನ ಅಭಿಮಾನಿಗಳೊಂದಿಗೆ ನನಗೆ ಉತ್ತಮ ಭಾಂದವ್ಯವಿದೆ. ನಾನು ಯಾವುದನ್ನೂ ಖಚಿತಪಡಿಸಲಾರೆ. ಆದರೆ ಭವಿಷ್ಯದಲ್ಲಿ ನನ್ನನ್ನು ಆರ್​ಸಿಬಿ ತಂಡದಲ್ಲಿ ನೋಡಲು ನಾನು ಸಂಪೂರ್ಣವಾಗಿ ಇಷ್ಟಪಡುತ್ತೇನೆ ಎಂದಿದ್ದಾರೆ.

7 / 7
ಆರ್​ಸಿಬಿ ಪರ 11 ಐಪಿಎಲ್ ಆವೃತ್ತಿಗಳನ್ನು ಆಡಿದ ಎಬಿ ಡಿವಿಲಿಯರ್ಸ್ ತಂಡದ ಪರವಾಗಿ 184 ಪಂದ್ಯಗಳನ್ನು ಆಡಿದ್ದರು. ಇದರಲ್ಲಿ 151 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ ಹಾಗೂ 40 ಕ್ಕಿಂತ ಅಧಿಕ ಸರಾಸರಿಯಲ್ಲಿ 5000 ರನ್ ಕಲೆಹಾಕಿದ್ದರು.