IPL 2024: 25 ಎಸೆತ, 7 ಸಿಕ್ಸರ್, 64 ರನ್..! ರಸೆಲ್ ರೌದ್ರಾವತಾರ
IPL 2024: ತಂಡದ ಇನ್ನಿಂಗ್ಸ್ ಜವಬ್ದಾರಿ ಹೊತ್ತ ರಸೆಲ್ ಹಾಗೂ ರಿಂಕು ಸಿಂಗ್ ಹೈದರಾಬಾದ್ ಬೌಲರ್ಗಳ ಚೆಂಡಾಡಿದರು. ಈ ವೇಳೆ ರಿಂಕು ಸಿಂಗ್ 15 ಎಸೆತಗಳಲ್ಲಿ 3 ಬೌಂಡರಿ ಸಹಿತ 23 ರನ್ ಬಾರಿಸಿದರೆ, ರಸೆಲ್ ಮಾತ್ರ ಸ್ಫೋಟಕ ಅರ್ಧಶತಕದ ಇನ್ನಿಂಗ್ಸ್ ಆಡಿದರು.
1 / 7
ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಮೈದಾನದಲ್ಲಿ ನಡೆಯುತ್ತಿರುವ ಐಪಿಎಲ್ 3ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು ಬರೋಬ್ಬರಿ 208 ರನ್ ಕಲೆಹಾಕಿದೆ.
2 / 7
ತಂಡದ ಪರ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ಆಲ್ರೌಂಡರ್ ಆಂಡ್ರೆ ರಸೆಲ್ ಕೆಳಕ್ರಮಾಂಕದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡುವ ಮೂಲಕ ತಂಡವನ್ನು ದ್ವಿಶತಕದ ಗಡಿ ದಾಟಿಸಿದರು. ಒಂದು ಹಂತದಲ್ಲಿ ಕೆಕೆಆರ್ ತಂಡ 119 ರನ್ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
3 / 7
ಅಲ್ಲಿಂದ ತಂಡದ ಇನ್ನಿಂಗ್ಸ್ ಜವಬ್ದಾರಿ ಹೊತ್ತ ರಸೆಲ್ ಹಾಗೂ ರಿಂಕು ಸಿಂಗ್ ಹೈದರಾಬಾದ್ ಬೌಲರ್ಗಳ ಚೆಂಡಾಡಿದರು. ಈ ವೇಳೆ ರಿಂಕು ಸಿಂಗ್ 15 ಎಸೆತಗಳಲ್ಲಿ 3 ಬೌಂಡರಿ ಸಹಿತ 23 ರನ್ ಬಾರಿಸಿದರೆ, ರಸೆಲ್ ಮಾತ್ರ ಸ್ಫೋಟಕ ಅರ್ಧಶತಕದ ಇನ್ನಿಂಗ್ಸ್ ಆಡಿದರು.
4 / 7
ತಮ್ಮ ಇನ್ನಿಂಗ್ಸ್ನಲ್ಲಿ ಕೇವಲ 25 ಎಸೆತಗಳನ್ನು ಎದುರಿಸಿದ ರಸೆಲ್, 7 ಭರ್ಜರಿ ಸಿಕ್ಸರ್ ಹಾಗೂ 3 ಬೌಂಡರಿಗಳ ಸಹಿತ ಅಜೇಯ 64 ರನ್ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು.
5 / 7
ಅದರಲ್ಲೂ ಕೊನೆಯ 5 ಓವರ್ಗಳಲ್ಲಿ ತಂಡಕ್ಕೆ ಬರೋಬ್ಬರಿ 78 ರನ್ಗಳು ಹರಿದುಬಂದವು. ರಸೆಲ್ ಅವರ ಅಬ್ಬರ ಹೇಗಿತ್ತು ಎಂಬುದಕ್ಕೆ ಈ ಅಂಕಿಅಂಶಗಳೇ ಸಾಕ್ಷಿ. ಕೊನೆಯ ಐದು ಓವರ್ಗಳಲ್ಲಿ ರಸೆಲ್- ರಿಂಕು ಜೋಡಿ ಬೌಂಡರಿ ಸಿಕ್ಸರ್ಗಳ ಮಳೆಗರೆಯಿತು.
6 / 7
ಮಯಾಂಕ್ ಮಾರ್ಕಂಡೆ ಬೌಲ್ ಮಾಡಿದ 16ನೇ ಓವರ್ನಲ್ಲಿ 3 ಸಿಕ್ಸರ್ ಸಿಡಿಸಿದ ರಸೆಲ್, ಆ ನಂತರ ಭುವನೇಶ್ವರ್ ಕುಮಾರ್ ಎಸೆದ 17ನೇ ಓವರ್ನಲ್ಲಿ 1 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿದರು. ಇದೇ ಓವರ್ನಲ್ಲಿ ರಿಂಕು ಕೂಡ ಸಿಕ್ಸರ್ ಸಿಡಿಸಿದರು.
7 / 7
18 ಮತ್ತು 19ನೇ ಓವರ್ನಲ್ಲಿ ತಲಾ 2 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿದವು. ಆದರೆ 20ನೇ ಓವರ್ ಬೌಲ್ ಮಾಡಿದ ಟಿ ನಟರಾಜನ್ ರಸೆಲ್ ಅಬ್ಬರಕ್ಕೆ ಕಡಿವಾಣ ಹಾಕಿ ಕೊನೆಯ ಓವರ್ನಲ್ಲಿ ಕೇವಲ 8 ರನ್ ಬಿಟ್ಟುಕೊಟ್ಟರು.