IPL 2024: RCB ಎಷ್ಟು ಆಟಗಾರರನ್ನು ಖರೀದಿಸಬಹುದು?

| Updated By: ಝಾಹಿರ್ ಯೂಸುಫ್

Updated on: Dec 07, 2023 | 8:38 PM

IPL 2024 Auction: ​RCB ತಂಡವು ಈ ಬಾರಿ ಒಟ್ಟು 17 ಆಟಗಾರರನ್ನು ಉಳಿಸಿಕೊಂಡಿದೆ. ಅಲ್ಲದೆ ಇಬ್ಬರು ಆಟಗಾರರನ್ನು ಟ್ರೇಡ್ ಮಾಡಿಕೊಂಡಿದೆ. ಅದರಂತೆ ಒಟ್ಟು 19 ಆಟಗಾರರ ಲೆಕ್ಕದೊಂದಿಗೆ ಆರ್​ಸಿಬಿ ಹರಾಜಿನಲ್ಲಿ ಕಾಣಿಸಿಕೊಳ್ಳಲಿದೆ.

1 / 8
IPL 2024: ಐಪಿಎಲ್ ಸೀಸನ್ 17 ಮಿನಿ ಹರಾಜಿಗೆ ಡೇಟ್ ಫಿಕ್ಸ್ ಆಗಿದೆ. ಇದೇ ತಿಂಗಳ 19 ರಂದು ದುಬೈನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಈಗಾಗಲೇ 10 ತಂಡಗಳು ರಿಟೈನ್ ಹಾಗೂ ರಿಲೀಸ್ ಪ್ರಕ್ರಿಯೆಯನ್ನು ಮುಗಿಸಿದ್ದು, ಇದೀಗ ಹರಾಜಿಗಾಗಿ ಸಿದ್ಧತೆಯಲ್ಲಿದೆ.

2 / 8
ಇತ್ತ RCB ತಂಡವು ಈ ಬಾರಿ ಒಟ್ಟು 17 ಆಟಗಾರರನ್ನು ಉಳಿಸಿಕೊಂಡಿದೆ. ಅಲ್ಲದೆ ಇಬ್ಬರು ಆಟಗಾರರನ್ನು ಟ್ರೇಡ್ ಮಾಡಿಕೊಂಡಿದೆ. ಅದರಂತೆ ಒಟ್ಟು 19 ಆಟಗಾರರ ಲೆಕ್ಕದೊಂದಿಗೆ ಆರ್​ಸಿಬಿ ಹರಾಜಿನಲ್ಲಿ ಕಾಣಿಸಿಕೊಳ್ಳಲಿದೆ.

3 / 8
ಇಲ್ಲಿ ಆರ್​ಸಿಬಿ ಉಳಿಸಿಕೊಂಡಿರುವ 19 ಆಟಗಾರರಲ್ಲಿ ಐವರು ವಿದೇಶಿ ಆಟಗಾರರಿದ್ದಾರೆ. ಹೀಗಾಗಿ ಆರ್​ಸಿಬಿಗೆ ಈ ಬಾರಿ 6 ಆಟಗಾರರನ್ನು ಮಾತ್ರ ಖರೀದಿಸಬಹುದು. ಅಂದರೆ ಐಪಿಎಲ್ ನಿಯಮದ ಪ್ರಕಾರ ಒಂದು ತಂಡವು ಗರಿಷ್ಠ 25 ಆಟಗಾರರನ್ನು ಹೊಂದಬಹುದು. ಅದರಂತೆ 19 ಆಟಗಾರರನ್ನು ಹೊಂದಿರುವ ಆರ್​ಸಿಬಿಯಲ್ಲಿ 6 ಸ್ಥಾನಗಳು ಖಾಲಿಯಿವೆ.

4 / 8
ಈ 6 ಸ್ಥಾನಗಳಲ್ಲಿ ಕೇವಲ ಮೂವರು ವಿದೇಶಿ ಆಟಗಾರರನ್ನು ಮಾತ್ರ ಖರೀದಿಸಬಹುದು. ಏಕೆಂದರೆ ಒಂದು ತಂಡದಲ್ಲಿ ಒಟ್ಟು 8 ವಿದೇಶಿ ಆಟಗಾರರಿಗೆ ಮಾತ್ರ ಅವಕಾಶ. ಇತ್ತ ಆರ್​ಸಿಬಿ ಉಳಿಸಿಕೊಂಡಿರುವ 19 ಆಟಗಾರರಲ್ಲಿ ಐವರು ವಿದೇಶಿ ಆಟಗಾರರಿದ್ದಾರೆ.

5 / 8
ಫಾಫ್ ಡುಪ್ಲೆಸಿಸ್, ಗ್ಲೆನ್ ಮ್ಯಾಕ್ಸ್​ವೆಲ್, ರೀಸ್ ಟೋಪ್ಲಿ, ವಿಲ್ ಜಾಕ್ಸ್ ಹಾಗೂ ಕ್ಯಾಮರೋನ್ ಗ್ರೀನ್ ಆರ್​ಸಿಬಿ ಬಳಗದಲ್ಲಿದ್ದಾರೆ. ಅದರಂತೆ ಆರ್​ಸಿಬಿ ಮೂವರು ವಿದೇಶಿ ಆಟಗಾರರನ್ನು ಈ ಬಾರಿಯ ಐಪಿಎಲ್​ ಹರಾಜಿನ ಮೂಲಕ ಖರೀದಿಸಬಹುದು.

6 / 8
ಇನ್ನುಳಿದ ಮೂರು ಸ್ಥಾನಗಳಿಗೆ ಭಾರತೀಯ ಆಟಗಾರರಿಗೆ ಮಣೆ ಹಾಕಬಹುದು. ಈ ಮೂಲಕ ಒಟ್ಟು 6 ಆಟಗಾರರನ್ನು ಖರೀದಿಸುವ ಅವಕಾಶ ರಾಯಲ್ ಚಾಲೆಂಜರ್ಸ್​ ಬೆಂಗಳೂರು (RCB) ತಂಡದ ಮುಂದಿದೆ.

7 / 8
ಆರ್​ಸಿಬಿ ತಂಡದಿಂದ ಕೈ ಬಿಟ್ಟ ಆಟಗಾರರು: ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್‌ವುಡ್, ಫಿನ್ ಅಲೆನ್, ಮೈಕಲ್ ಬ್ರೇಸ್‌ವೆಲ್, ಡೇವಿಡ್ ವಿಲ್ಲಿ, ವೇಯ್ನ್ ಪಾರ್ನೆಲ್, ಸೋನು ಯಾದವ್, ಅವಿನಾಶ್ ಸಿಂಗ್, ಸಿದ್ಧಾರ್ಥ್ ಕೌಲ್, ಕೇದಾರ್ ಜಾಧವ್.

8 / 8
RCB ಉಳಿಸಿಕೊಂಡಿರುವ ಆಟಗಾರರ ಪಟ್ಟಿ: ಫಾಫ್ ಡು ಪ್ಲೆಸಿಸ್ (ನಾಯಕ), ಗ್ಲೆನ್ ಮ್ಯಾಕ್ಸ್‌ವೆಲ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಅನೂಜ್ ರಾವತ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಹಿಪಾಲ್ ಲೊಮ್ರರ್, ಕರ್ಣ್ ಶರ್ಮಾ, ಮನೋಜ್ ಭಾಂಡಗೆ, ವಿಜಯ್‌ಕುಮಾರ್ ವೈಶಾಕ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಾಜನ್ ಕುಮಾರ್, ಕ್ಯಾಮರೋನ್ ಗ್ರೀನ್ (ಟ್ರೇಡ್), ಮಯಾಂಕ್ ಡಗಾರ್ (ಟ್ರೇಡ್).