IPL 2024 Auction: RCB ತಂಡಕ್ಕೆ ವಿಂಡೀಸ್ ವೇಗಿ ಎಂಟ್ರಿ

| Updated By: ಝಾಹಿರ್ ಯೂಸುಫ್

Updated on: Dec 19, 2023 | 3:36 PM

IPL 2024 Auction: ಒಂದು ಕೋಟಿಯಿಂದ ಶುರುವಾದ ಹರಾಜಿನಲ್ಲಿ ಆರ್​ಸಿಬಿ ಮೊದಲ ಬಿಡ್ ಮಾಡಿತು. ಆದರೆ ಮತ್ತೊಂದೆಡೆ ಲಕ್ನೋ ಸೂಪರ್ ಜೈಂಟ್ಸ್​ ಅಲ್ಝಾರಿ ಜೋಸೆಫ್ ಖರೀದಿಗೆ ಪೈಪೋಟಿ ನಡೆಸಿದರು. ಇದರಿಂದ ವಿಂಡೀಸ್ ವೇಗಿಯ ಮೌಲ್ಯವು 10 ಕೋಟಿ ರೂ. ದಾಟಿತು.

1 / 5
ಐಪಿಎಲ್ ಹರಾಜಿನಲ್ಲಿ ಆರ್​ಸಿಬಿ ತಂಡವು ಮೊದಲ ಆಟಗಾರನನ್ನು ಆಯ್ಕೆ ಮಾಡಿಕೊಂಡಿದೆ. ದುಬೈನ ಕೋಕಾಕೋಲ ಅರೇನಾದಲ್ಲಿ ನಡೆಯುತ್ತಿರುವ ಹರಾಜಿನಲ್ಲಿ ಅಲ್ಝಾರಿ ಜೋಸೆಫ್ 1 ಕೋಟಿ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದರು.

2 / 5
ಅದರಂತೆ ಒಂದು ಕೋಟಿಯಿಂದ ಶುರುವಾದ ಹರಾಜಿನಲ್ಲಿ ಆರ್​ಸಿಬಿ ಮೊದಲ ಬಿಡ್ ಮಾಡಿತು. ಆದರೆ ಮತ್ತೊಂದೆಡೆ ಲಕ್ನೋ ಸೂಪರ್ ಜೈಂಟ್ಸ್​ ಅಲ್ಝಾರಿ ಜೋಸೆಫ್ ಖರೀದಿಗೆ ಪೈಪೋಟಿ ನಡೆಸಿತು. ಇದರಿಂದ ವಿಂಡೀಸ್ ವೇಗಿಯ ಮೌಲ್ಯವು 10 ಕೋಟಿ ರೂ. ದಾಟಿತು.

3 / 5
ಇದಾಗ್ಯೂ ಆರ್​ಸಿಬಿ ತಂಡವು ಅಲ್ಝಾರಿ ಜೋಸೆಫ್ ಬಿಡ್ಡಿಂಗ್​ನಿಂದ ಹಿಂದೆ ಸರಿದಿರಲಿಲ್ಲ. ಸತತ ಹರಾಜು ಕೂಗುವ ಮೂಲಕ ಅಂತಿಮವಾಗಿ ವೆಸ್ಟ್ ಇಂಡೀಸ್​ ವೇಗಿಯನ್ನು ಆರ್​ಸಿಬಿ 11.50 ಕೋಟಿ ರೂ.ಗೆ ಖರೀದಿಸಿದೆ.

4 / 5
ಅದರಂತೆ ಕಳೆದ ಸೀಸನ್​ನಲ್ಲಿ ಗುಜರಾತ್ ಟೈಟಾನ್ಸ್ ಪರ ಆಡಿದ್ದ ಅಲ್ಝಾರಿ ಜೋಸೆಫ್ ಈ ಬಾರಿ ರಾಯಲ್ ಚಾಲೆಂಜರ್ಸ್ ಪರ ಕಣಕ್ಕಿಳಿಯಲಿದ್ದಾರೆ.

5 / 5
ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ: ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಅನೂಜ್ ರಾವತ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಹಿಪಾಲ್ ಲೊಮ್ರೋರ್, ಕರ್ಣ್ ಶರ್ಮಾ, ಮನೋಜ್ ಭಾಂಡಗೆ, ಮಯಾಂಕ್ ದಾಗರ್, ವೈಶಾಕ್ ವಿಜಯ್‌ಕುಮಾರ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಜನ್ ಕುಮಾರ್, ಕ್ಯಾಮರೋನ್ ಗ್ರೀನ್, ಅಲ್ಝಾರಿ ಜೋಸೆಫ್, ಯಶ್ ದಯಾಳ್.

Published On - 3:32 pm, Tue, 19 December 23