IPL 2024 Auction: ಕೋಟಿ ಮೊತ್ತಕ್ಕೆ ಹರ್ಷಲ್ ಪಟೇಲ್​ನ ಖರೀದಿಸಿದ ಪಂಜಾಬ್ ಕಿಂಗ್ಸ್​

| Updated By: ಝಾಹಿರ್ ಯೂಸುಫ್

Updated on: Dec 19, 2023 | 2:42 PM

IPL 2024 Auction: ಕಳೆದ ಮೂರು ಸೀಸನ್​ಗಳಲ್ಲಿ ಆರ್​ಸಿಬಿ ಪರ ಬೌಲಿಂಗ್ ಮಾಡಿದ್ದ ಹರ್ಷಲ್ ಪಟೇಲ್ ಒಟ್ಟು 65 ವಿಕೆಟ್ ಕಬಳಿಸಿದ್ದರು. ಆದರೆ ಐಪಿಎಲ್ 2023 ರಲ್ಲಿ 13 ಪಂದ್ಯಗಳಿಂದ ಕೇವಲ 14 ವಿಕೆಟ್ ಪಡೆಯಲಷ್ಟೇ ಶಕ್ತರಾಗಿದ್ದರು.

1 / 5
ಇಂಡಿಯನ್ ಪ್ರೀಮಿಯರ್ ಸೀಸನ್ 17 ರಲ್ಲಿ ಆರ್​ಸಿಬಿ ತಂಡದ ಮಾಜಿ ವೇಗಿ ಹರ್ಷಲ್ ಪಟೇಲ್ ಪಂಜಾಬ್ ಕಿಂಗ್ಸ್ ಪರ ಕಣಕ್ಕಿಳಿಯಲಿದ್ದಾರೆ. ಈ ಬಾರಿಯ ಹರಾಜಿನಲ್ಲಿ 2 ಕೋಟಿ ರೂ. ಮೂಲ ಬೆಲೆ ಘೋಷಿಸಿದ್ದ ಹರ್ಷಲ್ ಇದೀಗ ಮತ್ತೊಮ್ಮೆ ಎರಡಂಕಿ ಮೊತ್ತಕ್ಕೆ ಹರಾಜಾಗಿದ್ದಾರೆ.

2 / 5
ದುಬೈನಲ್ಲಿ ನಡೆಯುತ್ತಿರುವ ಈ ಹರಾಜು ಪ್ರಕ್ರಿಯೆಯಲ್ಲಿ ಹರ್ಷಲ್ ಪಟೇಲ್ ಖರೀದಿಗೆ ಭರ್ಜರಿ ಪೈಪೋಟಿ ಕಂಡು ಬಂತು. ಹರ್ಷಲ್ ಖರೀದಿಗೆ ಒಂದೆಡೆ ಎಸ್​ಆರ್​ಹೆಚ್​ ಆಸಕ್ತಿ ತೋರಿದರೆ, ಮತ್ತೊಂದೆಡೆ ಪಂಜಾಬ್ ಕಿಂಗ್ಸ್​ ಬಿಟ್ಟು ಕೊಡಲು ಸಿದ್ಧರಿರಲಿಲ್ಲ.

3 / 5
ಅದರಂತೆ ಅಂತಿಮವಾಗಿ ಹರ್ಷಲ್ ಪಟೇಲ್ ಅವರನ್ನು ಬರೋಬ್ಬರಿ 11.75 ಕೋಟಿ ರೂ. ನೀಡಿದ ಪಂಜಾಬ್ ಕಿಂಗ್ಸ್ ಖರೀದಿಸಿದೆ. ಈ ಹಿಂದೆ ಆರ್​ಸಿಬಿ ಹರ್ಷಲ್ ಅವರನ್ನು 10.75 ಕೋಟಿ ರೂ.ಗೆ ಖರೀದಿಸಿತ್ತು. ಇದೀಗ ಹರಾಜಿನ ಮೂಲಕ 11.75 ಕೋಟಿಗೆ ಹರ್ಷಲ್ ಬಿಕರಿಯಾಗಿರುವುದು ವಿಶೇಷ.

4 / 5
ಕಳೆದ ಮೂರು ಸೀಸನ್​ಗಳಲ್ಲಿ ಆರ್​ಸಿಬಿ ಪರ ಬೌಲಿಂಗ್ ಮಾಡಿದ್ದ ಹರ್ಷಲ್ ಪಟೇಲ್ ಒಟ್ಟು 65 ವಿಕೆಟ್ ಕಬಳಿಸಿದ್ದರು. ಆದರೆ ಐಪಿಎಲ್ 2023 ರಲ್ಲಿ 13 ಪಂದ್ಯಗಳಿಂದ ಕೇವಲ 14 ವಿಕೆಟ್ ಪಡೆಯಲಷ್ಟೇ ಶಕ್ತರಾಗಿದ್ದರು. ಇದಾಗ್ಯೂ ಈ ಬಾರಿಯ ಹರಾಜಿನ ಮೂಲಕ ಹರ್ಷಲ್ ಪಟೇಲ್ 11.75 ಕೋಟಿಗೆ ಹರಾಜಾಗಿದ್ದಾರೆ.

5 / 5
ಪಂಜಾಬ್ ಕಿಂಗ್ಸ್ ತಂಡ: ಶಿಖರ್ ಧವನ್, ಜಾನಿ ಬೈರ್‌ಸ್ಟೋವ್, ಪ್ರಭ್​ಸಿಮ್ರಾನ್ ಸಿಂಗ್, ಹರ್‌ಪ್ರೀತ್ ಭಾಟಿಯಾ, ಜಿತೇಶ್ ಶರ್ಮಾ, ಶಿವಂ ಸಿಂಗ್, ಅಥರ್ವ ಟೈಡೆ, ಸಿಕಂದರ್ ರಾಝ, ರಿಷಿ ಧವನ್, ಹರ್‌ಪ್ರೀತ್ ಬ್ರಾರ್, ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಕರನ್, ಕಗಿಸೊ ರಬಾಡ, ರಾಹುಲ್ ಚಾಹರ್, ನಾಥನ್ ಎಲ್ಲಿಸ್, ವಿದ್ವತ್ ಕಾವೇರಪ್ಪ, ಹರ್ಷಲ್ ಪಟೇಲ್.

Published On - 2:38 pm, Tue, 19 December 23