IPL 2024: ಡೆಲ್ಲಿ ಆಲ್​ರೌಂಡರ್ ಮಿಚೆಲ್ ಮಾರ್ಷ್​ಗೆ ಗಾಯ! ಐಪಿಎಲ್​ನಿಂದ ಔಟ್?

|

Updated on: Apr 08, 2024 | 5:56 PM

IPL 2024, Mitchell Marsh: ತಂಡದ ಸ್ಟಾರ್ ಆಲ್ ರೌಂಡರ್ ಮಿಚೆಲ್ ಮಾರ್ಷ್ ಮಂಡಿರಜ್ಜು ಗಾಯಕ್ಕೆ ತುತ್ತಾಗಿದ್ದಾರೆ. ನಿನ್ನೆ ನಡೆದ ಮುಂಬೈ ವಿರುದ್ಧದ ಪಂದ್ಯಕ್ಕೆ ಗೈರಾಗಿದ್ದ ಮಾರ್ಷ್​ ಆಟಕ್ಕೆ ಮರಳುವ ಬಗ್ಗೆ ಇನ್ನು ಖಚಿತ ಮಾಹಿತಿ ಸಿಕ್ಕಿಲ್ಲ.

1 / 6
ನಡೆಯುತ್ತಿರುವ ಐಪಿಎಲ್ 17ನೇ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕಳಪೆ ಪ್ರದರ್ಶನ ಮುಂದುವರೆಸಿದೆ. ಏಪ್ರಿಲ್ 7 ರಂದು ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ತಮ್ಮ ನಾಲ್ಕನೇ ಪಂದ್ಯದಲ್ಲಿ ಸೋತ ಡೆಲ್ಲಿ ಪಾಯಿಂಟ್​ ಪಟ್ಟಿಯಲ್ಲಿ ಭಾರಿ ಕುಸಿತ ಕಂಡಿದೆ.

2 / 6
ಈ ನಡುವೆ ತಂಡದಿಂದ ಆಘಾತಕ್ಕಾರಿ ಸುದ್ದಿಯೊಂದು ಹೊರಬಿದ್ದಿದ್ದು, ತಂಡದ ಸ್ಟಾರ್ ಆಲ್ ರೌಂಡರ್ ಮಿಚೆಲ್ ಮಾರ್ಷ್ ಮಂಡಿರಜ್ಜು ಗಾಯಕ್ಕೆ ತುತ್ತಾಗಿದ್ದಾರೆ. ನಿನ್ನೆ ನಡೆದ ಮುಂಬೈ ವಿರುದ್ಧದ ಪಂದ್ಯಕ್ಕೆ ಗೈರಾಗಿದ್ದ ಮಾರ್ಷ್​ ಆಟಕ್ಕೆ ಮರಳುವ ಬಗ್ಗೆ ಇನ್ನು ಖಚಿತ ಮಾಹಿತಿ ಸಿಕ್ಕಿಲ್ಲ.

3 / 6
ಮಂಡಿರಜ್ಜು ಗಾಯದಿಂದಾಗಿ ಮಿಚೆಲ್ ಮಾರ್ಷ್ ಮುಂಬೈ ವಿರುದ್ಧ ಕಣಕ್ಕಿಳಿದಿರಲಿಲ್ಲ. ಹೀಗಾಗಿ ವೇಗಿ ಜೇ ರಿಚರ್ಡ್‌ಸನ್‌ರನ್ನು ಆಡಿಸಲಾಯಿತು. ಇದರ ಪರಿಣಾಮವಾಗಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಒಬ್ಬ ಆಲ್​ರೌಂಡರ್ ಕೊರತೆ ಉಂಟಾಯಿತು. ಅಂತಿಮವಾಗಿ ತಂಡ ಇದರ ಭಾರವನ್ನು ಸೋಲಿನ ರೂಪದಲ್ಲಿ ಹೊರಬೇಕಾಯಿತು.

4 / 6
ಇನ್ನು ಮುಂಬೈ ವಿರುದ್ಧದ ಪಂದ್ಯ ಮುಗಿದ ಬಳಿಕ ಮಿಚೆಲ್ ಮಾರ್ಷ್​ ಗಾಯದ ಬಗ್ಗೆ ಮಾಹಿತಿ ನೀಡಿದ ಡೆಲ್ಲಿ ತಂಡದ ಸಹಾಯಕ ಕೋಚ್ ಪ್ರವೀಣ್ ಆಮ್ರೆ, ಮಿಚೆಲ್ ಮಾರ್ಷ್ ಕನಿಷ್ಠ ಒಂದು ವಾರ ತಂಡದಿಂದ ಹೊರಗುಳಿಯುವ ಸಾಧ್ಯತೆಗಳಿವೆ ಎಂದಿದ್ದಾರೆ.

5 / 6
ಮುಂದುವರೆದು ಮಾತನಾಡಿದ ಅವರು, ನಮ್ಮ ಕೆಲವು ಆಟಗಾರರು ಗಾಯಗೊಂಡಿದ್ದಾರೆ. ಅದರಲ್ಲಿ ಕೊಂಚ ಆತಂಕ ಹುಟ್ಟಿಸುವುದೆಂದರೆ ಅದು ಮಿಚ್ ಮಾರ್ಷ್ ಇಂಜುರಿ. ಸದ್ಯ ಅವರು ಸ್ಕ್ಯಾನ್‌ಗೆ ಹೋಗಿದ್ದು, ಫಿಸಿಯೋ ಒಂದು ವಾರದಲ್ಲಿ ವರದಿಯನ್ನು ನಮಗೆ ನೀಡುತ್ತಾರೆ.

6 / 6
ಆಗ ವಾಸ್ತವ ಸ್ಥಿತಿ ಏನೆಂದು ತಿಳಿಯಲಿದೆ. ಆ ನಂತರ ಮಿಚೆಲ್ ಮಾರ್ಷ್​ ಇಡೀ ಸೀಸನ್ ಆಡುತ್ತಾರೆಯೇ ಅಥವಾ ಇಲ್ಲವೇ ಎಂಬುದು ವರದಿಯ ಮೇಲೆ ಅವಲಂಬಿತವಾಗಿರುತ್ತದೆ ಎಂದಿದ್ದಾರೆ. ಆಮ್ರೆ ಹೇಳಿಕೆ ಡೆಲ್ಲಿಗೆ ಕೊಂಚ ಹಿನ್ನಡೆಯನ್ನುಂಟು ಮಾಡಿದೆ. ಏಕೆಂದರೆ ಸತತ ಸೋಲುಗಳಿಂದ ಕಂಗೆಟ್ಟಿರುವ ತಂಡಕ್ಕೆ ಮಾರ್ಷ್​ ಅಲಭ್ಯತೆ ಇನ್ನಷ್ಟು ಸಂಕಷ್ಟ ತರಲಿದೆ.