IPL 2024: ವಿಶ್ವ ದಾಖಲೆ ವೀರನ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್
TV9 Web | Updated By: ಝಾಹಿರ್ ಯೂಸುಫ್
Updated on:
Mar 13, 2024 | 12:53 PM
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ನ ಹೊಸ ಆವೃತ್ತಿ ಮಾರ್ಚ್ 22 ರಿಂದ ಶುರುವಾಗಲಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಆರ್ಸಿಬಿ ಮತ್ತು ಸಿಎಸ್ಕೆ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದೊಂದಿಗೆ ಐಪಿಎಲ್ನ (IPL 2024) 17ನೇ ಆವೃತ್ತಿಗೆ ಅದ್ಧೂರಿ ಚಾಲನೆ ದೊರೆಯಲಿದೆ.
1 / 5
ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2024) 17ನೇ ಆವೃತ್ತಿ ಆರಂಭಕ್ಕೆ ಇನ್ನು ದಿನಗಳು ಮಾತ್ರ ಉಳಿದಿವೆ. ಅದಕ್ಕೂ ಮುನ್ನ ತಂಡಕ್ಕೆ ಯುವ ಸ್ಪೋಟಕ ದಾಂಡಿಗನನ್ನು ಕರೆತರಲು ಡೆಲ್ಲಿ ಕ್ಯಾಪಿಟಲ್ಸ್ (DC) ಮುಂದಾಗಿದೆ. ಆದರೆ ಇದಕ್ಕೂ ಮುಂಚಿತವಾಗಿ ಇಂಗ್ಲೆಂಡ್ ಆಟಗಾರನ ಲಭ್ಯತೆಯನ್ನು ಎದುರು ನೋಡುತ್ತಿದೆ.
2 / 5
ಅಂದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರ ಹ್ಯಾರಿ ಬ್ರೂಕ್ ಈ ಬಾರಿಯ ಐಪಿಎಲ್ನಿಂದ ಹೊರಗುಳಿಯುವ ಸಾಧ್ಯತೆಯಿದೆ. ಏಕೆಂದರೆ ಇತ್ತೀಚೆಗೆ ಮುಕ್ತಾಯಗೊಂಡ ಭಾರತದ ವಿರುದ್ಧದ ಟೆಸ್ಟ್ ಸರಣಿಗೆ ಬ್ರೂಕ್ ಆಯ್ಕೆಯಾಗಿದ್ದರು. ಆದರೆ ವೈಯುಕ್ತಿಕ ಕಾರಣಗಳಿಂದಾಗಿ ಅವರು ಸರಣಿಯಿಂದ ಹಿಂದೆ ಸರಿದಿದ್ದರು.
3 / 5
ಇತ್ತ ಹ್ಯಾರಿ ಬ್ರೂಕ್ ಐಪಿಎಲ್ನಿಂದಲೂ ಹಿಂದೆ ಸರಿದರೆ, ಬದಲಿ ಆಟಗಾರನನ್ನು ಕರೆತರಲು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಸಜ್ಜಾಗಿದೆ. ಅದು ಕೂಡ ಆಸ್ಟ್ರೇಲಿಯಾದ ಯುವ ದಾಂಡಿಗ ಜೇಕ್ ಫ್ರೇಸರ್-ಮೆಕ್‌ಗುರ್ಕ್ ಅವರನ್ನು ಎಂಬುದು ವಿಶೇಷ.
4 / 5
ಆಸ್ಟ್ರೇಲಿಯಾದಲ್ಲಿ ನಡೆದ ಮಾರ್ಷ್ ಕಪ್ನಲ್ಲಿ ವೆಸ್ಟ್ ಎಂಡ್ ರೆಡ್‌ಬ್ಯಾಕ್ಸ್ ಪರ ಕಣಕ್ಕಿಳಿದಿದ್ದ ಜೇಕ್ ಫ್ರೇಸರ್ ಟಾಸ್ಮೇನಿಯಾ ವಿರುದ್ಧ ಕೇವಲ 29 ಎಸೆತಗಳಲ್ಲಿ ಶತಕ ಸಿಡಿಸಿ ವಿಶ್ವ ದಾಖಲೆ ಬರೆದಿದ್ದರು. ಇದೀಗ ಇದೇ ಸ್ಪೋಟಕ ಆಟಗಾರನನ್ನು ಹ್ಯಾರಿ ಬ್ರೂಕ್ ಬದಲಿಯಾಗಿ ಆಯ್ಕೆ ಮಾಡಲು ಡೆಲ್ಲಿ ಕ್ಯಾಪಿಟಲ್ಸ್ ತಂಡ ತುದಿಗಾಲಲ್ಲಿ ನಿಂತಿದೆ.
5 / 5
ಇತ್ತ ಇಂಗ್ಲೆಂಡ್ ಆಟಗಾರ ಬ್ರೂಕ್ ಐಪಿಎಲ್ನಿಂದ ಹೆಸರು ಹಿಂಪಡೆದರೆ, ಅತ್ತ ಕಡೆಯಿಂದ ಜೇಕ್ ಪ್ರೇಸರ್ ಐಪಿಎಲ್ಗೆ ಎಂಟ್ರಿ ಕೊಡಲಿದ್ದಾರೆ. ಹೀಗಾಗಿ ಹ್ಯಾರಿ ಬ್ರೂಕ್ ಅವರ ಮುಂದಿನ ನಿರ್ಧಾರವೇನು ಎಂಬುದನ್ನು ಡೆಲ್ಲಿ ಕ್ಯಾಪಿಟಲ್ಸ್ ಎದುರು ನೋಡುತ್ತಿದೆ. ಅದರಂತೆ ಬ್ರೂಕ್ ಹೊರಗುಳಿದರೆ 21 ವರ್ಷದ ಜೇಕ್ ಎಂಟ್ರಿ ಕೊಡುವುದು ಬಹುತೇಕ ಖಚಿತ.