IPL 2024: ಐಪಿಎಲ್ ಆಡ್ತಾರಾ ರಿಷಬ್ ಪಂತ್? ಬಿಗ್ ಅಪ್ಡೇಟ್ ನೀಡಿದ ಕೋಚ್ ಪಾಂಟಿಂಗ್
IPL 2024: 2022 ರ ಡಿಸೆಂಬರ್ನಲ್ಲಿ ಕಾರು ಅಪಘಾತಕ್ಕೀಡಾಗಿ ಕ್ರಿಕೆಟ್ನಿಂದ ದೂರ ಉಳಿದಿರುವ ಟೀಂ ಇಂಡಿಯಾದ ವಿಕೆಟ್ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಕ್ರಿಕೆಟ್ಗೆ ಮರಳುವ ಸನಿಹದಲ್ಲಿದ್ದಾರೆ. ಈ ಬಗ್ಗೆ ಕೋಚ್ ರಿಕಿ ಪಾಂಟಿಂಗ್ ಕೂಡ ಖಚಿತ ಮಾಹಿತಿ ನೀಡಿದ್ದಾರೆ.
1 / 6
2024 ರ ಐಪಿಎಲ್ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವ ಬೆನ್ನಲ್ಲೇ ಟೀಂ ಇಂಡಿಯಾ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಅದರಂತೆ 2022 ರ ಡಿಸೆಂಬರ್ನಲ್ಲಿ ಕಾರು ಅಪಘಾತಕ್ಕೀಡಾಗಿ ವರ್ಷದಿಂದ ಕ್ರಿಕೆಟ್ನಿಂದ ದೂರ ಉಳಿದಿರುವ ಟೀಂ ಇಂಡಿಯಾದ ವಿಕೆಟ್ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ವಾಪಸ್ಸಾತಿಯ ಬಗ್ಗೆ ಬಿಗ್ ಅಪ್ಡೇಟ್ ಹೊರಬಿದ್ದಿದೆ.
2 / 6
ರಿಷಬ್ ಪಂತ್ ಪುನರಾಗಮನದ ಬಗ್ಗೆ ಮಾಹಿತಿ ನೀಡಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ರಿಕಿ ಪಾಂಟಿಂಗ್, ಪಂತ್ ಅವರು ಮುಂದಿನ ಐಪಿಎಲ್ ಆಡುತ್ತಾರೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ. ಆದರೆ ಅವರು ನಾಯಕರಾಗಿ ಕಣಕ್ಕಿಳಿಯುತ್ತಾರೋ ಅಥವಾ ಇಲ್ಲವೋ ಎಂದು ಹೇಳುವುದು ಕಷ್ಟ ಎಂದಿದ್ದಾರೆ.
3 / 6
ಇಎಸ್‌ಪಿಎನ್ ಕ್ರಿಕ್‌ಇನ್‌ಫೋದಲ್ಲಿ ರಿಷಭ್ ಪಂತ್ ವಾಪಸಾತಿ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಿಕಿ ಪಾಂಟಿಂಗ್, ರಿಷಭ್ ಮುಂಬರುವ ಐಪಿಎಲ್ನ ಸಂಪೂರ್ಣ ಸೀಸನ್‌ನಲ್ಲಿ ಆಡಬಹುದೆಂಬ ವಿಶ್ವಾಸವಿದೆ. ಆದರೆ ಅವರು ಯಾವ ಜವಬ್ದಾರಿಯೊಂದಿಗೆ ಕಣಕ್ಕಿಳಿಯುತ್ತಾರೆ ಎಂಬುದರ ಕುರಿತು ನಾವು ಇನ್ನೂ ಏನನ್ನೂ ಹೇಳಲು ಸಾಧ್ಯವಿಲ್ಲ.
4 / 6
ರಿಷಬ್ ಪಂತ್ ಈಗಾಗಲೇ ಕ್ರಿಕೆಟ್ ಅಭ್ಯಾಸದಲ್ಲಿ ನಿರತರಾಗಿರುವುದನ್ನು ಸಾಮಾಜಿಕ ಜಾಲತಾಣಗಳಲ್ಲಿ ನೀವೆಲ್ಲರೂ ನೋಡಿರಬೇಕು. ಆದಾಗ್ಯೂ, ಐಪಿಎಲ್ ಆರಂಭಕ್ಕೆ ಕೇವಲ 6 ವಾರಗಳಿಗಿಂತ ಕಡಿಮೆ ಸಮಯ ಉಳಿದಿದೆ. ಆದ್ದರಿಂದ ಅವರು ವಿಕೆಟ್ ಕೀಪ್ ಮಾಡಲು ಸಾಧ್ಯವಾಗುತ್ತದೆಯೇ ಅಥವಾ ಇಲ್ಲವೇ ಎಂಬುದು ಖಚಿತವಾಗಿಲ್ಲ.
5 / 6
ಆದರೆ ಈ ಬಗ್ಗೆ ನಾನು ಪಂತ್ ಬಳಿ ಕೇಳಿದಾಗ ಅವರು ನಾನು ಪ್ರತಿ ಪಂದ್ಯವನ್ನು ಆಡುತ್ತೇನೆ. ಪ್ರತಿ ಪಂದ್ಯದಲ್ಲೂ ವಿಕೆಟ್ ಕೀಪ್ ಮಾಡುತ್ತೇನೆ ಮತ್ತು 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತೇನೆ ಎಂದು ಹೇಳುತ್ತಾರೆ. ಅದು ಹಾಗೆ ಆದರೆ ಅಂದಿನ ಪರಿಸ್ಥಿತಿ ನೋಡಿ ನಿರ್ಧಾರ ತೆಗೆದುಕೊಳ್ಳಬೇಕಷ್ಟೇ ಎಂದು ಪಾಂಟಿಂಗ್ ಹೇಳಿದ್ದಾರೆ.
6 / 6
ಇನ್ನು ಕಳೆದ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕಳಪೆ ಪ್ರದರ್ಶನದ ಬಗ್ಗೆ ಮಾತನಾಡಿದ ರಿಕಿ ಪಾಂಟಿಂಗ್, ಕಳೆದ ಸೀಸನ್‌ನಲ್ಲಿ ರಿಷಬ್ ಪಂತ್ ಅನುಪಸ್ಥಿತಿಯನ್ನು ನಾವು ಅನುಭವಿಸಿದ್ದೇವೆ . ಆದರೆ ಮುಂದಿನ ಸೀಸನ್‌ನಲ್ಲಿ ಅವರು 14 ಲೀಗ್ ಪಂದ್ಯಗಳಲ್ಲಿ 10 ಪಂದ್ಯಗಳನ್ನು ಆಡುವಲ್ಲಿ ಯಶಸ್ವಿಯಾದರೆ, ಅದು ನಮಗೆ ದೊಡ್ಡ ವಿಷಯವಾಗಿದೆ. ಅಲ್ಲದೆ ಈ ಐಪಿಎಲ್ನಲ್ಲಿ ಪಂತ್ ತಂಡದ ನಾಯಕತ್ವವನ್ನು ವಹಿಸದಿದ್ದರೆ, ಡೇವಿಡ್ ವಾರ್ನರ್ ಈ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ ಎಂದು ಪಾಂಟಿಂಗ್ ಸ್ಪಷ್ಟಪಡಿಸಿದ್ದಾರೆ.