IPL 2024: ಮಿತಿಮೀರಿದ ಸಂಭ್ರಮಾಚರಣೆ ಡೆಲ್ಲಿ ವೇಗಿಗೆ ವಾಗ್ದಂಡನೆ..!
IPL 2024: ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ವಿಕೆಟ್ ಕಬಳಿಸಿ ಅತಿಯಾಗಿ ಸಂಭ್ರಮಿಸಿದ್ದಕ್ಕಾಗಿ ಡೆಲ್ಲಿ ತಂಡದ ವೇಗದ ಬೌಲರ್ ರಸಿಖ್ ಸಲಾಮ್ ದಾರ್ ವಾಗ್ದಂಡನೆಗೆ ಗುರಿಯಾಗಿದ್ದಾರೆ. ಈ ಯುವ ವೇಗಿ ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.5 ರ ಅಡಿಯಲ್ಲಿ ಲೆವೆಲ್ 1 ಅಪರಾಧವನ್ನು ಮಾಡಿದ್ದಾರೆ.
1 / 6
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕಳೆದ ಬಾರಿಯ ರನ್ನರ್ ಅಪ್ ಗುಜರಾತ್ ಟೈಟಾನ್ಸ್ ತಂಡವನ್ನು 4 ರನ್‌ಗಳಿಂದ ಮಣಿಸುವಲ್ಲಿ ಯಶಸ್ವಿಯಾಯಿತು. ಆದರೆ ಪಂದ್ಯದ ವೇಳೆ ಐಪಿಎಲ್ ನಿಯಮ ಉಲ್ಲಂಘಿಸಿದಕ್ಕಾಗಿ ತಂಡದ ವೇಗದ ಬೌಲರ್ ಬಿಸಿಸಿಐನಿಂದ ಶಿಕ್ಷೆಗೊಳಗಾಗಬೇಕಿದೆ.
2 / 6
ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ವಿಕೆಟ್ ಕಬಳಿಸಿ ಅತಿಯಾಗಿ ಸಂಭ್ರಮಿಸಿದ್ದಕ್ಕಾಗಿ ಡೆಲ್ಲಿ ತಂಡದ ವೇಗದ ಬೌಲರ್ ರಸಿಖ್ ಸಲಾಮ್ ದಾರ್ ವಾಗ್ದಂಡನೆಗೆ ಗುರಿಯಾಗಿದ್ದಾರೆ. ಈ ಯುವ ವೇಗಿ ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.5 ರ ಅಡಿಯಲ್ಲಿ ಲೆವೆಲ್ 1 ಅಪರಾಧವನ್ನು ಮಾಡಿದ್ದಾರೆ.
3 / 6
ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.5 ರ ಅಡಿಯಲ್ಲಿ ರಸಿಖ್ ಸಲಾಮ್ ದಾರ್ ಲೆವೆಲ್ 1 ಅಪರಾಧ ಎಸಗಿದ್ದಾರೆ ಎಂದು ಐಪಿಎಲ್ ಗುರುವಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ದಾರ್ ಈಗಾಗಲೇ ತಮ್ಮ ಅಪರಾಧವನ್ನು ಮ್ಯಾಚ್ ರೆಫರಿಯ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದೆ.
4 / 6
ವಾಗ್ದಂಡನೆಯ ಹೊರತಾಗಿ ನಿನ್ನೆಯ ಪಂದ್ಯದಲ್ಲಿ ರಸಿಖ್ ಸಲಾಮ್ ದಾರ್ ತಮ್ಮ ಖೋಟಾದ ನಾಲ್ಕು ಓವರ್‌ಗಳಲ್ಲಿ 44 ರನ್ ನೀಡಿ ಪ್ರಮುಖ 3 ವಿಕೆಟ್ ಪಡೆದರು. ಇದರಲ್ಲಿ ಬಿ. ಸಾಯಿ ಸುದರ್ಶನ್, ಶಾರುಖ್ ಖಾನ್ ಮತ್ತು ಆರ್ ಸಾಯಿ ಕಿಶೋರ್ ಅವರ ವಿಕೆಟ್ಗಳು ಸೇರಿದ್ದವು.
5 / 6
2018 ರಲ್ಲಿ ವೃತ್ತಿಜೀವನ ಆರಂಭಿಸಿದ ರಸಿಖ್ ಸಲಾಮ್ ದಾರ್ ಇದುವರೆಗೆ ಕೇವಲ ಎರಡು ಪ್ರಥಮ ದರ್ಜೆ ಮತ್ತು ಏಳು ಲಿಸ್ಟ್ ಎ ಪಂದ್ಯಗಳನ್ನು ಆಡಿದ್ದಾರೆ. ನಿನ್ನೆಯ ಪಂದ್ಯದಲ್ಲಿ ಗುಜರಾತ್ ಗೆಲುವಿಗೆ 12 ಎಸೆತಗಳಲ್ಲಿ 32 ರನ್ ಬೇಕಿದ್ದಾಗ 19ನೇ ಓವರ್ ಬೌಲ್ ಮಾಡುವ ಜವಬ್ದಾರಿ ಪಡೆದ ದಾರ್ 18 ರನ್ ಬಿಟ್ಟುಕೊಟ್ಟರು.
6 / 6
ಇದೇ ಓವರ್ನಲ್ಲಿ ಸತತ ಎರಡು ಸಿಕ್ಸರ್‌ಗಳನ್ನು ಬಾರಿಸಿದ್ದ ಸಾಯಿ ಕಿಶೋರ್ ಅವರ ನಿರ್ಣಾಯಕ ವಿಕೆಟ್ ಪಡೆಯುವ ಮೂಲಕ ಟೈಟಾನ್ಸ್ ಸೋಲಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಪಂದ್ಯದ ಗೆಲುವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ಪಾಯಿಂಟ್ಸ್ ಪಟ್ಟಿಯಲ್ಲಿ ಲಾಭ ಗಳಿಸಿದ್ದು, ತಂಡ ಈಗ 8ನೇ ಸ್ಥಾನದಿಂದ ಆರನೇ ಸ್ಥಾನಕ್ಕೇರಿದೆ.
Published On - 5:28 pm, Thu, 25 April 24