RCB ಯ ಫೈನಲ್ ಸೋಲು ಕಾಡುತ್ತಲೇ ಇದೆ: ಅನಿಲ್ ಕುಂಬ್ಳೆ

IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) ಸೀಸನ್ 17ರ ನಡುವೆ ಆರ್​ಸಿಬಿ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಅದರಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೊಚ್ಚಲ ಬಾರಿ ಫೈನಲ್ ಪ್ರವೇಶಿಸಿ ಕಪ್ ಗೆಲ್ಲದಿರುವ ಬಗ್ಗೆ ಕುಂಬ್ಳೆ ಮನಬಿಚ್ಚಿ ಮಾತನಾಡಿದ್ದಾರೆ. ಆ ಸೋಲಿಗೆ ಏನು ಕಾರಣ ಎಂಬುದನ್ನು ಸಹ ವಿವರಿಸಿದ್ದಾರೆ.

TV9 Web
| Updated By: ಝಾಹಿರ್ ಯೂಸುಫ್

Updated on: Apr 25, 2024 | 12:53 PM

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ (IPL) ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಮೂರು ಬಾರಿ ಫೈನಲ್ ಆಡಿದೆ. 2009 ರಲ್ಲಿ ಚೊಚ್ಚಲ ಬಾರಿ ಫೈನಲ್​ಗೆ ಎಂಟ್ರಿ ಕೊಟ್ಟಿದ್ದ ಆರ್​ಸಿಬಿ ಇದಾದ ಬಳಿಕ 2011 ರಲ್ಲಿ ಅಂತಿಮ ಸುತ್ತಿಗೆ ಪ್ರವೇಶಿಸಿತ್ತು. ಇನ್ನು ಆರ್​ಸಿಬಿ ಕೊನೆಯ ಬಾರಿ ಫೈನಲ್ ಆಡಿದ್ದು 2016 ರಲ್ಲಿ. ಇದಾದ ಬಳಿಕ ಒಮ್ಮೆಯೂ ಅಂತಿಮ ಸುತ್ತಿಗೆ ಪ್ರವೇಶಿಸಿಲ್ಲ.

1 / 7
ವಿಶೇಷ ಎಂದರೆ ಆರ್​ಸಿಬಿ ತಂಡವು ಚೊಚ್ಚಲ ಬಾರಿಗೆ ಫೈನಲ್ ಪ್ರವೇಶಿಸಿದ್ದು ಅನಿಲ್ ಕುಂಬ್ಳೆ ನಾಯಕತ್ವದಲ್ಲಿ. 2009 ರಲ್ಲಿ ಕೆವಿನ್ ಪೀಟರ್ಸನ್ ಅರ್ಧದಲ್ಲೇ ಆರ್​ಸಿಬಿ ತಂಡವನ್ನು ತೊರೆದ ಕಾರಣ, ಅನಿಲ್ ಕುಂಬ್ಳೆ ತಂಡವನ್ನು ಮುನ್ನಡೆಸಿದ್ದರು. ಕುಂಬ್ಳೆ ಸಾರಥ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಆರ್​ಸಿಬಿ ಫೈನಲ್ ಪ್ರವೇಶಿಸಿತ್ತು.

2 / 7
ಆದರೆ ಫೈನಲ್ ಪಂದ್ಯದಲ್ಲಿ ಡೆಕ್ಕನ್ ಚಾರ್ಜರ್ಸ್ ವಿರುದ್ಧ ಕೇವಲ 6 ರನ್​ಗಳಿಂದ ಸೋಲುವ ಮೂಲಕ ಆರ್​ಸಿಬಿ ಚೊಚ್ಚಲ ಬಾರಿಗೆ ಟ್ರೋಫಿ ಮುಡಿಗೇರಿಸಿಕೊಳ್ಳುವ ಅವಕಾಶವನ್ನು ಕೈ ತಪ್ಪಿಸಿಕೊಂಡಿತು. ಈ ಸೋಲಿನ ನೋವು ಈಗಲೂ ಕಾಡುತ್ತೆ ಎಂದಿದ್ದಾರೆ ಆರ್​ಸಿಬಿ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ.

3 / 7
ರವಿಚಂದ್ರನ್ ಅಶ್ವಿನ್ ಅವರ ಯೂಟ್ಯೂಬ್ ಚಾನೆಲ್​ ಸಂದರ್ಶನದಲ್ಲಿ ಭಾಗವಹಿಸಿದ್ದ ಅನಿಲ್ ಕುಂಬ್ಳೆ ಆರ್​ಸಿಬಿ ಕುರಿತಾದ ಹಲವು ವಿಚಾರಗಳನ್ನು ಮಾತನಾಡಿದರು. ಈ ವೇಳೆ 2009ರ ಫೈನಲ್ ಸೋಲನ್ನು ಕೂಡ ಮೆಲುಕು ಹಾಕಿದ್ದಾರೆ. ಅಂದು ನಾವು ಗೆಲ್ಲಬೇಕಿತ್ತು. ಆದರೆ ಸಿಕ್ಕ ಅವಕಾಶವನ್ನು ಕೈಚೆಲ್ಲುವ ಮೂಲಕ ಪ್ರಶಸ್ತಿ ಗೆಲ್ಲುವುದನ್ನು ತಪ್ಪಿಸಿಕೊಂಡೆವು ಎಂದು ಕುಂಬ್ಳೆ ಹೇಳಿದ್ದಾರೆ.

4 / 7
2009 ರ ಫೈನಲ್ ಪಂದ್ಯದಲ್ಲಿ ಡೆಕ್ಕನ್ ಚಾರ್ಜರ್ಸ್ 143 ರನ್ ಬಾರಿಸಿತ್ತು. 144 ರನ್​ಗಳ ಗುರಿ ಪಡೆದಿದ್ದ ನಮಗೆ ಕೊನೆಯ ಓವರ್​ನಲ್ಲಿ 15 ರನ್ ಬೇಕಿತ್ತು. ಈ ವೇಳೆ ನಾನು (ಕುಂಬ್ಳೆ) ಹಾಗೂ ರಾಬಿನ್ ಉತ್ತಪ್ಪ ಕ್ರೀಸ್​ನಲ್ಲಿದ್ದೆವು. ಮೊದಲ ಎಸೆತದಲ್ಲಿ ನಾನು ಒಂದು ರನ್ ಕಲೆಹಾಕಿದೆ. ಆದರೆ 2ನೇ ಮತ್ತು 3ನೇ ಎಸೆತಗಳಲ್ಲಿ ರನ್ ಬಾರಿಸಲು ಉತ್ತಪ್ಪ ವಿಫಲರಾದರು.

5 / 7
ರಾಬಿನ್ ಉತ್ತಪ್ಪಗೆ ನಾನು ಮೊದಲೇ ಹೇಳಿದ್ದೆ. ಆರ್​ಪಿ ಸಿಂಗ್ ಸ್ಕೂಪ್ ಮಾಡಲು ಅವಕಾಶ ನೀಡುವುದಿಲ್ಲ. ಲೆಂಗ್ತ್ ಬಾಲ್ ಹಾಕ್ತಾನೆ. ಆದರೆ ಉತ್ತಪ್ಪ ಸ್ಕೂಪ್ ಶಾಟ್​ಗೆ ಟ್ರೈ ಮಾಡಿದ್ದರು. ಇನ್ನು 4ನೇ ಎಸೆತದಲ್ಲಿ 2 ರನ್ ಕಲೆಹಾಕಿದರು. 5ನೇ ಎಸೆತದಲ್ಲಿ ಲೆಗ್ ಬೈ ಫೋರ್ ಸಿಕ್ತು. ಆದರೆ ಕೊನೆಯ ಎಸೆತದಲ್ಲಿ 1 ರನ್ ಗಳಿಸಲಷ್ಟೇ ಶಕ್ತರಾದರು.

6 / 7
ನಾವು ಒಂದು ಸಿಕ್ಸ್​ ಬಾರಿಸಬೇಕಿತ್ತು. ನಂಗೆ ಆ ಓವರ್​ನಲ್ಲಿ ಹೆಚ್ಚಿನ ಅವಕಾಶ ಸಿಕ್ಕಿದ್ದರೆ ಸಿಕ್ಸ್​ ಬಾರಿಸಲು ಪ್ರಯತ್ನಿಸುತ್ತಿದ್ದೆ. ಅಂತಿಮವಾಗಿ ನಾವು 6 ರನ್​ಗಳಿಂದ ಸೋತೆವು. ಈಗಲೂ ಕೂಡ ನಾನು ರಾಬಿನ್ ಉತ್ತಪ್ಪ ಸಿಕ್ಕಾಗ ಆ ಸಿಕ್ಸ್ ಬಗ್ಗೆ ಹೇಳ್ತೀನಿ. ಆ ಫೈನಲ್ ಸೋಲಿನ ನೋವು ಈಗಲೂ ಕಾಡುತ್ತಿರುತ್ತೆ ಎಂದು ಅನಿಲ್ ಕುಂಬ್ಳೆ ಹೇಳಿದ್ದಾರೆ.

7 / 7
Follow us
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’

ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್

ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್

ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ

ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?

ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ

ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ

ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?

ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್

ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ