IPL 2024: ಮುಂಬೈ ನಾಯಕನಾಗಿ ನಾಚಿಕೆಗೇಡಿನ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ..!
IPL 2024: ಮುಂಬೈ ತಂಡದ ನಾಯಕನಾಗಿ ಆಡಿದ ಎರಡೂ ಪಂದ್ಯಗಳನ್ನು ಸೋತಿರುವ ಹಾರ್ದಿಕ್ ಪಾಂಡ್ಯ ತನ್ನ ಖಾತೆಗೆ ಬೇಡದ ದಾಖಲೆಯೊಂದನ್ನು ಹಾಕಿಕೊಂಡಿದ್ದಾರೆ. ಅದರಂತೆ 2008 ರ ನಂತರ ಮುಂಬೈ ತಂಡ ನೂತನ ನಾಯಕನಡಿಯಲ್ಲಿ ಸೀಸನ್ ಆರಂಭಿಕ ಎರಡೂ ಪಂದ್ಯಗಳನ್ನು ಸೋತಿದೆ.
1 / 7
ಐಪಿಎಲ್ 17 ನೇ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಇದುವರೆಗೆ 2 ಪಂದ್ಯಗಳನ್ನು ಆಡಿದ್ದು, ಎರಡರಲ್ಲೂ ಸೋಲನ್ನು ಎದುರಿಸಿದೆ. ಐದು ಬಾರಿಯ ಚಾಂಪಿಯನ್ ತಂಡಕ್ಕೆ ಈ ರೀತಿಯಾಗಿ ಸತತ ಸೋಲುಗಳು ಎದುರಾಗುತ್ತವೆ ಎಂದು ಯಾರೂ ಕೂಡ ನಿರೀಕ್ಷಿಸಿರಲಿಲ್ಲ. ಆದರೆ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ತಂಡಕ್ಕೆ ಗೆಲುವು ಮರಿಚಿಕೆಯಾಗಿದೆ.
2 / 7
ವಾಸ್ತವವಾಗಿ ತಂಡವನ್ನು ಐದು ಬಾರಿ ಚಾಂಪಿಯನ್ ಮಾಡಿದ್ದ ರೋಹಿತ್ ಶರ್ಮಾರನ್ನು ಏಕಾಏಕಿ ನಾಯಕತ್ವದಿಂದ ಕೆಳಗಿಳಿಸಿ, ಗುಜರಾತ್ ಟೈಟಾನ್ಸ್ ತಂಡದಿಂದ ಟ್ರೇಡ್ ಮಾಡಿಕೊಂಡಿದ್ದ ಹಾರ್ದಿಕ್ ಪಾಂಡ್ಯಗೆ ನಾಯಕತ್ವ ಹಸ್ತಾಂತರಿಸಿತ್ತು. ಫ್ರಾಂಚೈಸಿಯ ಈ ನಿರ್ಧಾರ ಅಭಿಮಾನಿಗಳಲ್ಲಿ ಕೋಪ ತರಿಸಿತ್ತು. ಇದೀಗ ಪಾಂಡ್ಯ ನಾಯಕತ್ವದಲ್ಲಿ ತಂಡದ ಕಳಪೆ ಪ್ರದರ್ಶನ ಅಭಿಮಾನಿಗಳು ಇನ್ನಷ್ಟು ಅಸಮಾಧಾನಗೊಳ್ಳುವಂತೆ ಮಾಡಿದೆ.
3 / 7
ಇದೆಲ್ಲದರ ನಡುವೆ ಮುಂಬೈ ತಂಡದ ನಾಯಕನಾಗಿ ಆಡಿದ ಎರಡೂ ಪಂದ್ಯಗಳನ್ನು ಸೋತಿರುವ ಹಾರ್ದಿಕ್ ಪಾಂಡ್ಯ ತನ್ನ ಖಾತೆಗೆ ಬೇಡದ ದಾಖಲೆಯೊಂದನ್ನು ಹಾಕಿಕೊಂಡಿದ್ದಾರೆ. ಅದರಂತೆ 2008 ರ ನಂತರ ಮುಂಬೈ ತಂಡ ನೂತನ ನಾಯಕನಡಿಯಲ್ಲಿ ಸೀಸನ್ ಆರಂಭಿಕ ಎರಡೂ ಪಂದ್ಯಗಳನ್ನು ಸೋತಿದೆ.
4 / 7
ವಾಸ್ತವವಾಗಿ ಮುಂಬೈ ಇಂಡಿಯನ್ಸ್ ತಂಡವು ಮೊದಲ ಬಾರಿಗೆ ತಂಡವನ್ನು ಮುನ್ನಡೆಸುತ್ತಿದ್ದ ಹರ್ಭಜನ್ ಸಿಂಗ್ ಅವರ ನಾಯಕತ್ವದಲ್ಲಿ 2008 ರ ಐಪಿಎಲ್ ಸೀಸನ್ ಆಡಿತ್ತು. ಆದರೆ ತಂಡವು ಸೀಸನ್ನ ಮೊದಲ ಮೂರು ಪಂದ್ಯಗಳಲ್ಲಿ ಸತತ ಸೋಲುಗಳನ್ನು ಎದುರಿಸಬೇಕಾಯಿತು. ಆ ನಂತರ ತಂಡ ಮೊದಲ ಪಂದ್ಯ ಸೋತರೂ ಆ ನಂತರದ ಪಂದ್ಯಗಳಲ್ಲಿ ಗೆಲುವಿನ ಟ್ರ್ಯಾಕ್ಗೆ ಮರಳುತ್ತಿತ್ತು.
5 / 7
ಆದರೆ ಇದೀಗ ಮುಂಬೈ ತಂಡ ನೂತನ ನಾಯಕ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಸತತ ಎರಡು ಪಂದ್ಯಗಳಲ್ಲಿ ಸೋಲು ಕಂಡಿದೆ. ಈ ಮೂಲಕ ಪಾಂಡ್ಯ ಮೊದಲ ಬಾರಿಗೆ ಈ ಫ್ರಾಂಚೈಸಿಯ ನಾಯಕರಾಗಿ ಐಪಿಎಲ್ ಸೀಸನ್ನ ಮೊದಲ 2 ಪಂದ್ಯಗಳಲ್ಲಿ ಸೋತಿದ್ದಾರೆ.
6 / 7
ನಾಯಕತ್ವದಲ್ಲಿ ಮಾತ್ರವಲ್ಲದೆ ಹಾರ್ದಿಕ್ ಆಟಗಾರನಾಗಿಯೂ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ಮೊದಲ ಪಂದ್ಯದಲ್ಲಿ 30 ರನ್ ನೀಡಿ ಯಾವುದೇ ವಿಕೆಟ್ ಪಡೆಯಲು ಸಾಧ್ಯವಾಗದ ಹಾರ್ದಿಕ್ ಬ್ಯಾಟ್‌ನಿಂದ 11 ರನ್ ಗಳಿಸಲಷ್ಟೇ ಶಕ್ತರಾಗಿದ್ದರು.
7 / 7
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ತಮ್ಮ 4 ಓವರ್‌ಗಳಲ್ಲಿ 46 ರನ್ ನೀಡಿ 1 ವಿಕೆಟ್ ಮಾತ್ರ ಕಬಳಿಸಲು ಶಕ್ತರಾದರು. ತಂಡ 278 ರನ್‌ಗಳ ದೊಡ್ಡ ಗುರಿಯನ್ನು ಬೆನ್ನಟ್ಟಿದ ಸಂದರ್ಭದಲ್ಲಿ ಹಾರ್ದಿಕ್ 20 ಎಸೆತಗಳಲ್ಲಿ 24 ರನ್ ಗಳಿಸಿ ನಿಧಾನಗತಿಯ ಆಟವಾಡಿ ಪೆವಿಲಿಯನ್‌ಗೆ ಮರಳಿದರು.
Published On - 4:13 pm, Thu, 28 March 24