IPL 2024: ಐಪಿಎಲ್ ಇತಿಹಾಸದಲ್ಲೇ ದಾಖಲೆ ಬರೆದ ಸಿಎಸ್ಕೆ- ಆರ್ಸಿಬಿ ಪಂದ್ಯ..!
IPL 2024: ಡಿಸ್ನಿ ಸ್ಟಾರ್ ಪ್ರಕಾರ, ಮೊದಲ ದಿನದ ವೀಕ್ಷಣೆಯ ಸಮಯ 1276 ಕೋಟಿ ನಿಮಿಷಗಳಾಗಿದ್ದು, ಇದು ಹಿಂದಿನ ಆವೃತ್ತಿಗಳಿಗೆ ಹೊಲಿಸಿದರೆ, ಮೊದಲ ದಿನ ಅತ್ಯಧಿಕ ವೀಕ್ಷಣೆ ಕಂಡ ದಾಖಲೆ ನಿರ್ಮಿಸಿದೆ. ಐಪಿಎಲ್‌ನ 17ನೇ ಸೀಸನ್‌ನ ಮೊದಲ ದಿನದಂದು ಡಿಸ್ನಿ ಸ್ಟಾರ್ ನೆಟ್‌ವರ್ಕ್‌ನಲ್ಲಿ 6.1 ಕೋಟಿ ವೀಕ್ಷಕರು ಏಕಕಾಲದಲ್ಲಿ ಪಂದ್ಯದ ಪ್ರಸಾರವನ್ನು ವೀಕ್ಷಿಸಿದ್ದಾರೆ, ಇದು ಇಲ್ಲಿಯವರೆಗಿನ ಅತಿ ಹೆಚ್ಚು ಅಂಕಿ ಅಂಶವಾಗಿದೆ.
1 / 8
ಐಪಿಎಲ್ 2024 ರ ಸೀಸನ್ ಅಬ್ಬರದಿಂದ ಆರಂಭವಾಗಿದೆ. ಈ ಟೂರ್ನಿ ಆರಂಭವಾಗಿ ಒಂದು ವಾರ ಕಳೆದಿದೆ. ಪಂದ್ಯದಿಂದ ಪಂದ್ಯಕ್ಕೆ ರೋಚಕತೆ ಹೆಚ್ಚಾಗುವುದರೊಂದಿಗೆ ಅಭಿಮಾನಿಗಳಿಗೆ ಮನರಂಜನೆಯ ರಸದೌತಣವೇ ಸಿಗುತ್ತಿದೆ. ಇದಕ್ಕೆ ಪೂರಕವಾಗಿ ಡಿಸ್ನಿ ಸ್ಟಾರ್ ಬಿಡುಗಡೆ ಮಾಡಿರುವ ವೀಕ್ಷಣೆ ವಿವರಗಳು ಸಾಕ್ಷಿ ಒದಗಿಸಿವೆ.
2 / 8
ವಾಸ್ತವವಾಗಿ ಐಪಿಎಲ್ 17 ನೇ ಸೀಸನ್ ಮಾರ್ಚ್ 22 ರಂದು ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಡುವಿನ ಪಂದ್ಯದೊಂದಿಗೆ ಪ್ರಾರಂಭವಾಯಿತು. ಐಪಿಎಲ್‌ನ ಅಧಿಕೃತ ಪ್ರಸಾರಕರಾದ ಡಿಸ್ನಿ ಸ್ಟಾರ್ ಪ್ರಕಾರ, ಮೊದಲ ದಿನ ಒಟ್ಟು 16.8 ಕೋಟಿ ಜನರು ಪಂದ್ಯವನ್ನು ವೀಕ್ಷಿಸಿದ್ದು, ಐಪಿಎಲ್ ಇತಿಹಾಸದಲ್ಲಿ ಇದು ದಾಖಲೆಯಾಗಿದೆ.
3 / 8
ಡಿಸ್ನಿ ಸ್ಟಾರ್ ಪ್ರಕಾರ, ಮೊದಲ ದಿನದ ವೀಕ್ಷಣೆಯ ಸಮಯ 1276 ಕೋಟಿ ನಿಮಿಷಗಳಾಗಿದ್ದು, ಇದು ಹಿಂದಿನ ಆವೃತ್ತಿಗಳಿಗೆ ಹೊಲಿಸಿದರೆ, ಮೊದಲ ದಿನ ಅತ್ಯಧಿಕ ವೀಕ್ಷಣೆ ಕಂಡ ದಾಖಲೆ ನಿರ್ಮಿಸಿದೆ. ಐಪಿಎಲ್‌ನ 17ನೇ ಸೀಸನ್‌ನ ಮೊದಲ ದಿನದಂದು ಡಿಸ್ನಿ ಸ್ಟಾರ್ ನೆಟ್‌ವರ್ಕ್‌ನಲ್ಲಿ 6.1 ಕೋಟಿ ವೀಕ್ಷಕರು ಏಕಕಾಲದಲ್ಲಿ ಪಂದ್ಯದ ಪ್ರಸಾರವನ್ನು ವೀಕ್ಷಿಸಿದ್ದಾರೆ, ಇದು ಇಲ್ಲಿಯವರೆಗಿನ ಅತಿ ಹೆಚ್ಚು ಅಂಕಿ ಅಂಶವಾಗಿದೆ.
4 / 8
ಕಳೆದ ವರ್ಷ ಅಂದರೆ 2023 ರ ಐಪಿಎಲ್‌ನ ಆರಂಭಿಕ ಪಂದ್ಯ 870 ಕೋಟಿ ನಿಮಿಷ ವೀಕ್ಷಣೆ ಕಂಡಿತ್ತು. ಹಿಂದಿನ ಆವೃತ್ತಿಗೆ ಹೋಲಿಸಿದರೆ, ಟಿವಿ ಬಳಕೆಯಲ್ಲಿ ಶೇಕಡಾ 16 ರಷ್ಟು ಬೆಳವಣಿಗೆಯಾಗಿದೆ ಎಂದು ಬ್ರಾಡ್‌ಕಾಸ್ಟರ್‌ನ ಹೇಳಿಕೆ ತಿಳಿಸಿದೆ.
5 / 8
ಅಲ್ಲದೆ ಲೀಗ್ ಆರಂಭಕ್ಕೆ ಒಂದು ವಾರ ಮೊದಲು ಪ್ರಸಾರವಾದ ಪೂರ್ವ-ಟೂರ್ನಮೆಂಟ್ ಕಾರ್ಯಕ್ರಮಗಳ ಸರಣಿಯನ್ನು ಬರೋಬ್ಬರಿ 24.5 ಕೋಟಿಗೂ ಹೆಚ್ಚು ವೀಕ್ಷಕರು ವೀಕ್ಷಿಸಿದ್ದರು ಎಂದು ವರದಿಯಾಗಿದೆ.
6 / 8
ಹಾಗೆಯೇ ಲೈವ್ ಸ್ಟ್ರೀಮಿಂಗ್ ಹಕ್ಕು ಪಡೆದಿರುವ ಜಿಯೋ ಸಿನಿಮಾ ಆ್ಯಪ್ನಲ್ಲಿ ಮೊದಲ ದಿನ 11.3 ಕೋಟಿ ವೀಕ್ಷಕರು ಪಂದ್ಯವನ್ನು ವೀಕ್ಷಿಸಿರುವುದು ಕೂಡ ದಾಖಲೆಯಾಗಿದೆ. ಹಿಂದಿನ ಆವೃತ್ತಿಗಳಿಗೆ ಹೋಲಿಸಿದರೆ ಈ ಬಾರಿ ಮೊದಲ ದಿನ ಪಂದ್ಯವನ್ನು ವೀಕ್ಷಿಸಿದವರ ಸಂಖ್ಯೆ 51 ಪ್ರತಿಶತದಷ್ಟು ಜಿಗಿತ ಕಂಡಿದೆ. ಹಾಗೆಯೇ ಜಿಯೋ ಸಿನಿಮಾ ಮೊದಲ ದಿನದಂದು 660 ಕೋಟಿ ನಿಮಿಷಗಳ ವೀಕ್ಷಣೆ ಕಂಡಿರುವುದು ಕೂಡ ದಾಖಲೆಯಾಗಿದೆ.
7 / 8
17ನೇ ಆವೃತ್ತಿಯ ಐಪಿಎಲ್ ಮೊದಲ ವಾರ ವೀಕ್ಷಕರಿಗೆ ಸಾಕಷ್ಟು ಮನರಂಜನೆ ನೀಡಿತು. ಈ ಸೀಸನ್ ಮೊದಲ ಡಬಲ್ ಹೆಡರ್ ಪಂದ್ಯ ನಡೆದ ಪಂದ್ಯಾವಳಿಯ ಎರಡನೇ ದಿನದಂದು, ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಬ್ ಪಂತ್ 15 ತಿಂಗಳ ನಂತರ ಮೈದಾನಕ್ಕೆ ಮರಳಿದ್ದರು. ಇದ್ದು ಕೂಡ ಐಪಿಎಲ್ ವೀಕ್ಷಣೆ ಹೆಚ್ಚಾಗಲು ಕಾರಣವಾಗಿತ್ತು.
8 / 8
ಇದಲ್ಲದೇ ಟೂರ್ನಿಯ ಎಂಟನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಸ್ಕೋರ್ ದಾಖಲಿಸಿದ್ದು, ಈ ಪಂದ್ಯದಲ್ಲಿ ಹಲವು ದೊಡ್ಡ ದಾಖಲೆಗಳನ್ನು ಮುರಿಯಲಾಯಿತು. ಇದು ಕೂಡ ಐಪಿಎಲ್ಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿದೆ.