IPL 2024 Final: RCB, CSK, MI ಇಲ್ಲದ ಮೂರನೇ ಫೈನಲ್

|

Updated on: May 26, 2024 | 2:31 PM

IPL 2024 Final KKR vs SRH: ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್​ರೈಸರ್ಸ್ ಹೈದರಾಬಾದ್ ತಂಡಗಳು ಈವರೆಗೆ 27 ಬಾರಿ ಮುಖಾಮುಖಿಯಾಗಿದೆ. ಈ ವೇಳೆ ಕೆಕೆಆರ್ ತಂಡ 18 ಬಾರಿ ಜಯ ಸಾಧಿಸಿದರೆ, ಎಸ್​ಆರ್​ಹೆಚ್ ತಂಡ ಗೆದ್ದಿರುವುದು ಕೇವಲ 9 ಬಾರಿ ಮಾತ್ರ. ಅದರಲ್ಲೂ ಈ ಸಲ ಆಡಲಾದ ಎರಡೂ ಪಂದ್ಯಗಳಲ್ಲೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಗೆಲುವು ಸಾಧಿಸಿತ್ತು.

1 / 5
IPL 2024: ಇಂಡಿಯನ್ ಪ್ರೀಮಿಯರ್ ಲೀಗ್​ನ 17ನೇ ಫೈನಲ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಭಾನುವಾರ (ಮೇ 26) ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ (KKR) ಮತ್ತು ಸನ್​ರೈಸರ್ಸ್ ಹೈದರಾಬಾದ್ (SRH) ತಂಡಗಳು ಮುಖಾಮುಖಿಯಾಗಲಿದೆ.

2 / 5
ವಿಶೇಷ ಎಂದರೆ ಈ ಬಾರಿಯ ಫೈನಲ್​ನಲ್ಲೂ ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್​ ಅಥವಾ ರಾಯಲ್ ಚಾಲೆಂಜರ್ಸ್​ ತಂಡಗಳು ಕಾಣಿಸಿಕೊಳ್ಳುತ್ತಿಲ್ಲ. ಅಂದರೆ ಕಳೆದ 16 ಸೀಸನ್ ಐಪಿಎಲ್​​ ಫೈನಲ್​ನಲ್ಲಿ 14 ಬಾರಿ ಮೂರು ತಂಡಗಳಲ್ಲಿ ಒಂದು ತಂಡ ಫೈನಲ್​ನಲ್ಲಿ ಕಾಣಿಸಿಕೊಂಡಿತ್ತು.

3 / 5
ಆದರೆ 2014 ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ (ಈಗಿನ ಪಂಜಾಬ್ ಕಿಂಗ್ಸ್) ಫೈನಲ್​ಗೇರುವ ಮೂಲಕ ಈ ಸಾಂಪ್ರದಾಯಕ್ಕೆ ಇತಿಶ್ರೀ ಹಾಡಿದ್ದರು. ಇದಾದ ಬಳಿಕ 2022 ರಲ್ಲಿ ಸಿಎಸ್​ಕೆ, ಮುಂಬೈ ಇಂಡಿಯನ್ಸ್ ಮತ್ತು ಆರ್​ಸಿಬಿ ತಂಡಗಳನ್ನು ಹಿಂದಿಕ್ಕಿ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡ ಫೈನಲ್​ ಆಡಿತ್ತು.

4 / 5
ಇದೀಗ ಮೂರನೇ ಬಾರಿ ಆರ್​ಸಿಬಿ, ಸಿಎಸ್​ಕೆ ಅಥವಾ ಮುಂಬೈ ಇಂಡಿಯನ್ಸ್​... ಈ ಮೂರು ತಂಡಗಳಲ್ಲಿ ಒಂದು ತಂಡ ಕೂಡ ಇಲ್ಲದೆ ಫೈನಲ್​ ಪಂದ್ಯ ನಡೆಯುತ್ತಿದೆ. ಆದರೆ ಈ ಬಾರಿ ಕೂಡ ಗೆಲ್ಲುವುದು ಹಳೆಯ ಚಾಂಪಿಯನ್​ಗಳು ಎಂಬುದು ವಿಶೇಷ.

5 / 5
ಅಂದರೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ 2012 ರಲ್ಲಿ ಮತ್ತು 2014 ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇನ್ನು ಹೈದರಾಬಾದ್ ಫ್ರಾಂಚೈಸಿಯು 2009 ರಲ್ಲಿ ಡೆಕ್ಕನ್ ಚಾರ್ಜರ್ಸ್ ಹೆಸರಿನಲ್ಲಿ ಚಾಂಪಿಯನ್ ಪಟ್ಟಕ್ಕೇರಿದರೆ, 2016 ರಲ್ಲಿ ಸನ್​ರೈಸರ್ಸ್ ಹೈದರಾಬಾದ್ ಕಿರೀಟ ಮುಡಿಗೇರಿಸಿಕೊಂಡಿತು. ಹೀಗಾಗಿ ಈ ಬಾರಿ ಗೆಲ್ಲುವ ತಂಡ ಮೂರನೇ ಬಾರಿ ಟ್ರೋಫಿ ಎತ್ತಿ ಹಿಡಿಯಲಿದೆ. ಹೀಗಾಗಿ ಹಳೆಯ ಚಾಂಪಿಯನ್ಸ್ ತಂಡಗಳೇ ಈ ಬಾರಿ ಮತ್ತೊಮ್ಮೆ ಚಾಂಪಿಯನ್ ಪಟ್ಟಕ್ಕೇರಲಿದೆ.