IPL 2024: ಐಪಿಎಲ್ನಲ್ಲಿ 9 ತಂಡಗಳ ಪರ ಕಣಕ್ಕಿಳಿದ ಆಟಗಾರ ಯಾರು ಗೊತ್ತಾ?
TV9 Web | Updated By: ಝಾಹಿರ್ ಯೂಸುಫ್
Updated on:
Mar 31, 2024 | 11:53 AM
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದಲ್ಲೇ 9 ತಂಡಗಳ ಪರ ಆಡಿದ್ದು ಏಕೈಕ ಆಟಗಾರ. ಅದು ಕೂಡ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಎಂಬುದು ವಿಶೇಷ. ಈ ಮೂಲಕ ಐಪಿಎಲ್ನಲ್ಲಿ ವಿಶೇಷ ದಾಖಲೆ ನಿರ್ಮಿಸಿರುವ ಆಸೀಸ್ ಕ್ರಿಕೆಟಿಗ ಇದೀಗ ಎಲ್ಲಾ ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳಿ, ಕಾಮೆಂಟೇಟರ್ ಆಗಿ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ.
1 / 11
ಇಂಡಿಯನ್ ಪ್ರೀಮಿಯರ್ ಲೀಗ್ (IPL) ಇತಿಹಾಸದಲ್ಲಿ ಅತ್ಯಧಿಕ ತಂಡಗಳ ಪರ ಕಣಕ್ಕಿಳಿದ ಆಟಗಾರ ಯಾರು? ಈ ಪ್ರಶ್ನೆಗೆ ಉತ್ತರ ಆರೋನ್ ಫಿಂಚ್. ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಐಪಿಎಲ್ನಲ್ಲಿ 9 ತಂಡಗಳ ಪರ ಕಣಕ್ಕಿಳಿಯುವ ಮೂಲಕ ದಾಖಲೆ ಬರೆದಿಟ್ಟಿದ್ದಾರೆ. 2023 ರಲ್ಲಿ ಬರೆದ ಈ ದಾಖಲೆ ಈ ವರ್ಷ ಕೂಡ ಮುಂದುವರೆದಿದೆ. ಹಾಗಿದ್ರೆ ಫಿಂಚ್ ಯಾವೆಲ್ಲಾ ತಂಡಗಳ ಪರ ಆಡಿದ್ದರು ಎಂದು ನೋಡೋಣ...
2 / 11
ರಾಜಸ್ಥಾನ್ ರಾಯಲ್ಸ್ (2010): ರಾಜಸ್ಥಾನ್ ರಾಯಲ್ಸ್ ತಂಡದ ಪರ ಕಣಕ್ಕಿಳಿಯುವ ಮೂಲಕ ಆರೋನ್ ಫಿಂಚ್ 2010ರಲ್ಲಿ ಐಪಿಎಲ್ಗೆ ಪಾದಾರ್ಪಣೆ ಮಾಡಿದ್ದರು. ಅಲ್ಲದೆ ಚೊಚ್ಚಲ ಸೀಸನ್ನಲ್ಲಿ ಕೇವಲ 1 ಪಂದ್ಯವನ್ನಾಡಿದ್ದರು.
3 / 11
ಡೆಲ್ಲಿ ಡೇರ್ ಡೇವಿಲ್ಸ್ (2011-12): ಒಂದೇ ವರ್ಷಕ್ಕೆ ರಾಜಸ್ಥಾನ್ ರಾಯಲ್ಸ್ ತಂಡದಿಂದ ಹೊರಬಿದ್ದ ಫಿಂಚ್ ಆ ಬಳಿಕ 2 ವರ್ಷಗಳ ಕಾಲ ಡೆಲ್ಲಿ ಡೇರ್ ಡೇವಿಲ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಡಿಡಿ ಪರ ಒಟ್ಟು 8 ಪಂದ್ಯಗಳನ್ನಾಡಿದ್ದರು.
4 / 11
ಪುಣೆ ವಾರಿಯರ್ಸ್ (2013): ನಾಲ್ಕನೇ ವರ್ಷದಲ್ಲಿ ಪುಣೆ ವಾರಿಯರ್ಸ್ ತಂಡಕ್ಕೆ ಆಯ್ಕೆಯಾದ ಆರೋನ್ ಫಿಂಚ್ ಒಟ್ಟು 14 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಪುಣೆ ತಂಡದ ನಾಯಕತ್ವವನ್ನೂ ಸಹ ವಹಿಸಿಕೊಂಡಿದ್ದರು.
5 / 11
ಸನ್ರೈಸರ್ಸ್ ಹೈದರಾಬಾದ್ (2014): 2014 ರಲ್ಲಿ ಸನ್ರೈಸರ್ಸ್ ಹೈದರಾಬಾದ್ ಪರ ಕಣಕ್ಕಿಳಿದ ಫಿಂಚ್, ಒಟ್ಟು 13 ಪಂದ್ಯಗಳನ್ನಾಡಿದ್ದರು.
6 / 11
ಮುಂಬೈ ಇಂಡಿಯನ್ಸ್ (2015): ಸನ್ರೈಸರ್ಸ್ ಹೈದರಾಬಾದ್ ತಂಡದಿಂದ ಹೊರಬಿದ್ದ ಬಳಿಕ 2015 ರಲ್ಲಿ ಫಿಂಚ್ಗೆ ಮುಂಬೈ ಇಂಡಿಯನ್ಸ್ ತಂಡದಲ್ಲಿ ಸ್ಥಾನ ಲಭಿಸಿತು. ಮುಂಬೈ ಪರ 3 ಪಂದ್ಯಗಳನ್ನಾಡಿದ್ದರು.
7 / 11
ಗುಜರಾತ್ ಲಯನ್ಸ್ (2016-17) 2016 ಮತ್ತು 2017 ರಲ್ಲಿ ಗುಜರಾತ್ ಲಯನ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದ ಆರೋನ್ ಫಿಂಚ್ ಒಟ್ಟು 16 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು.
8 / 11
ಕಿಂಗ್ಸ್ ಇಲೆವೆನ್ ಪಂಜಾಬ್ (2018): ಗುಜರಾತ್ ಲಯನ್ಸ್ ತಂಡ ಐಪಿಎಲ್ನಿಂದ ಮರೆಯಾಗುತ್ತಿದ್ದಂತೆ ಆರೋನ್ ಫಿಂಚ್ ಅವರಿಗೆ ಕಿಂಗ್ಸ್ ಇಲೆವೆನ್ ಪಂಜಾಬ್ (ಈಗಿನ ಪಂಜಾಬ್ ಕಿಂಗ್ಸ್) ಅವಕಾಶ ನೀಡಿತು. ಅದರಂತೆ 2018 ರಲ್ಲಿ ಪಂಜಾಬ್ ಪರ 10 ಪಂದ್ಯಗಳನ್ನಾಡಿದ್ದರು.
9 / 11
ರಾಯಲ್ ಚಾಲೆಂಜರ್ಸ್ ಬೆಂಗಳೂರು (2020): 2019 ರ ಐಪಿಎಲ್ನಲ್ಲಿ ಕಾಣಿಸಿಕೊಳ್ಳದ ಆರೋನ್ ಫಿಂಚ್ 2020 ರಲ್ಲಿ ಮತ್ತೆ ಹರಾಜಿಗಾಗಿ ಹೆಸರು ನೀಡಿದ್ದರು. ಈ ವೇಳೆ ಆರ್ಸಿಬಿ ತಂಡವು ಫಿಂಚ್ ಅವರನ್ನು ಖರೀದಿಸಿತು. ಅಲ್ಲದೆ ಆರ್ಸಿಬಿ ಪರ ಫಿಂಚ್ 12 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು.
10 / 11
ಕೊಲ್ಕತ್ತಾ ನೈಟ್ ರೈಡರ್ಸ್ (2022): ಐಪಿಎಲ್ 2021 ರಲ್ಲಿ ಆರೋನ್ ಫಿಂಚ್ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ. ಇದಾಗ್ಯೂ 2022 ರಲ್ಲಿ ಕೆಕೆಆರ್ ತಂಡಕ್ಕೆ ಬದಲಿ ಆಟಗಾರನಾಗಿ ಎಂಟ್ರಿ ಕೊಟ್ಟ ಫಿಂಚ್ 5 ಪಂದ್ಯಗಳನ್ನಾಡಿದ್ದರು.
11 / 11
ಈ ಮೂಲಕ ಐಪಿಎಲ್ನಲ್ಲಿ 9 ತಂಡಗಳ ಪರ ಕಣಕ್ಕಿಳಿಯುವ ಮೂಲಕ ಆರೋನ್ ಫಿಂಚ್ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಇದೀಗ ಎಲ್ಲಾ ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳಿರುವ ಫಿಂಚ್ ಕಾಮೆಂಟೇಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.