IPL 2024: ಐಪಿಎಲ್ಗೆ ಸ್ಟಾರ್ ಆಟಗಾರರು ಕೈ ಕೊಡುವ ಸಾಧ್ಯತೆ
TV9 Web | Updated By: ಝಾಹಿರ್ ಯೂಸುಫ್
Updated on:
Jan 28, 2024 | 7:35 AM
IPL 2024: ಐಪಿಎಲ್ 2024 ಮಾರ್ಚ್ 22 ರಿಂದ ಶುರುವಾಗುವ ಸಾಧ್ಯತೆಯಿದೆ. ಲೋಕಸಭಾ ಚುನಾವಣಾ ನಿಮಿತ್ತ ಈ ಬಾರಿಯ ಐಪಿಎಲ್ ಅನ್ನು ಎರಡು ಹಂತಗಳಲ್ಲಿ ನಡೆಸಲು ಬಿಸಿಸಿಐ ಪ್ಲ್ಯಾನ್ ರೂಪಿಸಿದ್ದು, ಅದರಂತೆ ಮೊದಲಾರ್ಧದ ಪಂದ್ಯಗಳು ಭಾರತದಲ್ಲಿ ಹಾಗೂ ದ್ವಿತೀಯಾರ್ಧದ ಪಂದ್ಯಗಳು ವಿದೇಶದಲ್ಲಿ ನಡೆಯುವ ಸಾಧ್ಯತೆಯಿದೆ.
1 / 6
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-17 ರಿಂದ ಇಂಗ್ಲೆಂಡ್ ತಂಡದ ಕೆಲ ಆಟಗಾರರು ಹೊರಗುಳಿಯುವ ಸಾಧ್ಯತೆಯಿದೆ. ರಾಷ್ಟ್ರೀಯ ಬದ್ಧತೆಯ ಕಾರಣದಿಂದಾಗಿ ಇದೀಗ ವುಮೆನ್ಸ್ ಪ್ರೀಮಿಯರ್ ಲೀಗ್ನಿಂದ (WPL 2024) ಇಬ್ಬರು ಇಂಗ್ಲೆಂಡ್ ಆಟಗಾರ್ತಿಯರು ಹಿಂದೆ ಸರಿದಿದ್ದಾರೆ.
2 / 6
ಇದರ ಬೆನ್ನಲ್ಲೇ ಇಂಗ್ಲೆಂಡ್ ಪುರುಷರ ತಂಡದ ಕೆಲ ಆಟಗಾರರು ಐಪಿಎಲ್ನಲ್ಲಿ ಕಾಣಿಸಿಕೊಳ್ಳುವುದು ಅನುಮಾನ ಎನ್ನಲಾಗುತ್ತಿದೆ. ಏಕೆಂದರೆ ಮೇ ತಿಂಗಳಲ್ಲಿ ಇಂಗ್ಲೆಂಡ್ ಪಾಕಿಸ್ತಾನ್ ವಿರುದ್ಧ ಟಿ20 ಸರಣಿ ಆಡಬೇಕಿದೆ. ಈ ಸರಣಿಯು ಮೇ 22 ರಂದು ಪ್ರಾರಂಭವಾಗಲಿದ್ದು, 2024ರ T20 ವಿಶ್ವಕಪ್‌ಗೆ ಮುಂಚಿತವಾಗಿ ಇದು ನಿರ್ಣಾಯಕ ಅಭ್ಯಾಸ ಸರಣಿಯಾಗಿದೆ. ಇತ್ತ ಇದೇ ಅವಧಿಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಕೂಡ ನಡೆಯಲಿದೆ.
3 / 6
ಸದ್ಯ ಇಂಗ್ಲೆಂಡ್ ತಂಡದ ಕೆಲ ಆಟಗಾರರು ಭಾರತದಲ್ಲಿ ಟೆಸ್ಟ್ ಸರಣಿ ಆಡುತ್ತಿದ್ದರೆ, ಮತ್ತೆ ಕೆಲವರು ಇಂಟರ್ನ್ಯಾಷನಲ್ ಲೀಗ್ ಟಿ20 ಹಾಗೂ ಸೌತ್ ಆಫ್ರಿಕಾ ಟಿ20 ಲೀಗ್ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಟೂರ್ನಿಗಳ ಮುಕ್ತಾಯದ ಬೆನ್ನಲ್ಲೇ ಐಪಿಎಲ್ ಶುರುವಾಗಲಿದೆ. ಇನ್ನು ಐಪಿಎಲ್ ಬೆನ್ನಲ್ಲೇ ಟಿ20 ವಿಶ್ವಕಪ್ ಕೂಡ ಆರಂಭವಾಗಲಿದೆ.
4 / 6
ಇತ್ತ ಸತತ ಕ್ರಿಕೆಟ್ ಆಡುತ್ತಿರುವ ಇಂಗ್ಲೆಂಡ್ ಆಟಗಾರರು ಟಿ20 ವಿಶ್ವಕಪ್ಗೂ ಮುನ್ನ ವಿಶ್ರಾಂತಿ ತೆಗೆದುಕೊಳ್ಳಲು ಬಯಸಿದರೆ ಐಪಿಎಲ್ ಅವಧಿಯೊಂದೇ ಆಯ್ಕೆ. ಹೀಗಾಗಿ ಕೆಲ ಆಟಗಾರರು ಐಪಿಎಲ್ನಿಂದ ಹೊರಗುಳಿದು ಟಿ20 ವಿಶ್ವಕಪ್‌ಗೆ ಸಜ್ಜಾಗಲಿದ್ದಾರೆ ಎಂದು ವರದಿಯಾಗಿದೆ.
5 / 6
ಅತ್ತ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಕೂಡ ಟಿ20 ವಿಶ್ವಕಪ್ಗೂ ಮುನ್ನ ಇಂಗ್ಲೆಂಡ್ ಆಟಗಾರರಿಗೆ ಹೆಚ್ಚಿನ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದೆ ಎಂದು ವರದಿಯಾಗಿದೆ. ಅಂದರೆ ಐಪಿಎಲ್ನಲ್ಲಿ ಕೆಲ ಆಟಗಾರರು ಕಾಣಿಸಿಕೊಂಡರೂ ಅರ್ಧದಲ್ಲೇ ಟೂರ್ನಿ ತೊರೆಯಬೇಕಾಗುತ್ತದೆ. ಹೀಗಾಗಿ ಈ ಬಾರಿಯ ಐಪಿಎಲ್ಗೆ ಇಂಗ್ಲೆಂಡ್ ತಂಡದ ಕೆಲ ಪ್ರಮುಖ ಆಟಗಾರರು ಅಲಭ್ಯರಾಗುವುದು ಖಚಿತ ಎಂದೇ ಹೇಳಬಹುದು.
6 / 6
ಐಪಿಎಲ್ನಲ್ಲಿರುವ ಇಂಗ್ಲೆಂಡ್ ಆಟಗಾರರು: ಹ್ಯಾರಿ ಬ್ರೂಕ್ (ಡೆಲ್ಲಿ ಕ್ಯಾಪಿಟಲ್ಸ್), ಮೊಯೀನ್ ಅಲಿ (ಚೆನ್ನೈ ಸೂಪರ್ ಕಿಂಗ್ಸ್), ಜೇಸನ್ ರಾಯ್, ಗಸ್ ಅಟ್ಕಿನ್ಸನ್ (ಕೊಲ್ಕತ್ತಾ ನೈಟ್ ರೈಡರ್ಸ್), ಮಾರ್ಕ್ ವುಡ್ (ಲಕ್ನೋ ಸೂಪರ್ ಜೈಂಟ್ಸ್), ಲಿಯಾಮ್ ಲಿವಿಂಗ್ಸ್ಟೋನ್, ಸ್ಯಾಮ್ ಕರನ್, ಜಾನಿ ಬೈರ್‌ಸ್ಟೋವ್, ಕ್ರಿಸ್ ವೋಕ್ಸ್ (ಪಂಜಾಬ್ ಕಿಂಗ್ಸ್), ಜೋಸ್ ಬಟ್ಲರ್, ಟಾಮ್ ಕೊಹ್ಲರ್-ಕ್ಯಾಡ್ಮೋರ್ (ರಾಜಸ್ಥಾನ್ ರಾಯಲ್ಸ್), ವಿಲ್ ಜಾಕ್ಸ್, ರೀಸ್ ಟೋಪ್ಲಿ, ಟಾಮ್ ಕರನ್ (ಆರ್ಸಿಬಿ).