- Kannada News Photo gallery Cricket photos Ravindra Jadeja now has dismissed Joe Root for the most time
Ravindra Jadeja: ಜಡ್ಡು ಜಾದೂ…ರೂಟ್ ಕ್ಲಿಯರ್ ದಾಖಲೆ
Ravindra Jadeja Records: ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೂಲಕ ಟೀಮ್ ಇಂಡಿಯಾ ಆಲ್ರೌಂಡರ್ ರವೀಂದ್ರ ಜಡೇಜಾ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಆ ದಾಖಲೆಗಳಾವುವು ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ...
Updated on: Jan 28, 2024 | 9:58 AM

ಹೈದರಾಬಾದ್ನ ರಾಜೀವ್ ಗಾಂಧಿ ಇಂಟರ್ನ್ಯಾಷನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೂಲಕ ರವೀಂದ್ರ ಜಡೇಜಾ (Ravindra Jadeja) ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಈ ದಾಖಲೆಗಳಲ್ಲಿ ರೂಟ್ ಕ್ಲಿಯರ್ ರೆಕಾರ್ಡ್ ಕೂಡ ಸೇರಿದೆ.

ಅಂದರೆ ಟೆಸ್ಟ್ ಕ್ರಿಕೆಟ್ನಲ್ಲಿ ಜೋ ರೂಟ್ ಅವರನ್ನು ಅತ್ಯಧಿಕ ಬಾರಿ ಔಟ್ ಮಾಡಿದ ವಿಶೇಷ ದಾಖಲೆ ಇದೀಗ ರವೀಂದ್ರ ಜಡೇಜಾ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಆಸ್ಟ್ರೇಲಿಯಾದ ನಾಥನ್ ಲಿಯಾನ್ ಹೆಸರಿನಲ್ಲಿತ್ತು.

ಟೆಸ್ಟ್ ಕ್ರಿಕೆಟ್ನ ಅತ್ಯುತ್ತಮ ಬ್ಯಾಟರ್ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ಜೋ ರೂಟ್ ಅವರನ್ನು ಆಸ್ಟ್ರೇಲಿಯಾ ಸ್ಪಿನ್ನರ್ ನಾಥನ್ ಲಿಯಾನ್ ಒಟ್ಟು 8 ಬಾರಿ ಔಟ್ ಮಾಡಿ ದಾಖಲೆ ಬರೆದಿದ್ದರು. ಇದೀಗ ಈ ದಾಖಲೆಯನ್ನು ಜಡ್ಡು ಅಳಿಸಿ ಹಾಕಿದ್ದಾರೆ.

ಹೈದರಾಬಾದ್ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಜೋ ರೂಟ್ (29) ಅವರನ್ನು ಜಡೇಜಾ ಔಟ್ ಮಾಡಿದ್ದಾರೆ. ಇದರೊಂದಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ರೂಟ್ ಅವರನ್ನು ಅತ್ಯಧಿಕ ಬಾರಿ ಔಟ್ ಮಾಡಿದ ಬೌಲರ್ ಎಂಬ ದಾಖಲೆ ಜಡೇಜಾ ಪಾಲಾಯಿತು.

ರವೀಂದ್ರ ಜಡೇಜಾ ಇದುವರೆಗೆ 9 ಬಾರಿ ಜೋ ರೂಟ್ಗೆ ಪೆವಿಲಿಯನ್ ಹಾದಿ ತೋರಿಸಿದ್ದಾರೆ. ಈ ಮೂಲಕ ರೂಟ್ ವಿರುದ್ಧ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡಿದ್ದಾರೆ. ಹಾಗೆಯೇ ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 3 ವಿಕೆಟ್ ಕಬಳಿಸುವುದರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 550+ ವಿಕೆಟ್ ಪಡೆದ ವಿಶೇಷ ಸಾಧಕರ ಪಟ್ಟಿಗೂ ಜಡೇಜಾ ಸೇರ್ಪಡೆಯಾಗಿದ್ದಾರೆ.

ಈ ಸಾಧನೆ ಮಾಡಿದ ಭಾರತದ 7ನೇ ಬೌಲರ್ ಎಂಬ ಹಿರಿಮೆಗೆ ಜಡೇಜಾ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಅನಿಲ್ ಕುಂಬ್ಳೆ, ಕಪಿಲ್ ದೇವ್, ಝಹೀರ್ ಖಾನ್, ಹರ್ಭಜನ್ ಸಿಂಗ್, ಜಾವಗಲ್ ಶ್ರೀನಾಥ್ ಮತ್ತು ರವಿಚಂದ್ರನ್ ಅಶ್ವಿನ್ ಈ ಸಾಧನೆ ಮಾಡಿದ್ದರು. ಇದೀಗ 550+ ವಿಕೆಟ್ಗಳೊಂದಿಗೆ ಈ ಸಾಧಕರ ಪಟ್ಟಿಯಲ್ಲಿ ರವೀಂದ್ರ ಜಡೇಜಾ ಕೂಡ ಕಾಣಿಸಿಕೊಂಡಿದ್ದಾರೆ.
