IPL 2024: ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯಗೆ ಮುಂಬೈಯದ್ದೇ ಚಿಂತೆ..!
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) ಆರಂಭಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯಗೆ ಕ್ಯಾಪ್ಟನ್ ಪಟ್ಟ ನೀಡಿತ್ತು. ಇದೀಗ ಪಾಂಡ್ಯರನ್ನು ನಾಯಕನಾಗಿ ಒಪ್ಪಲು ಮುಂಬೈ ಇಂಡಿಯನ್ಸ್ ತಂಡದ ಕೆಲ ಅಭಿಮಾನಿಗಳು ಸುತಾರಾಂ ಸಿದ್ಧರಿಲ್ಲ. ಈ ಹಿನ್ನಲೆಯಲ್ಲಿ ಪಂದ್ಯದ ವೇಳೆ ಪಾಂಡ್ಯರನ್ನು ಅಪಹಾಸ್ಯ ಮಾಡುತ್ತಿದ್ದಾರೆ.