IPL 2024: ಮತ್ತೆ ಮೈದಾನದಲ್ಲೇ ಕೆಎಲ್ ರಾಹುಲ್ ಜೊತೆ LSG ಮಾಲೀಕನ ಚರ್ಚೆ..!

|

Updated on: May 15, 2024 | 4:53 PM

IPL 2024: ಐಪಿಎಲ್ ಸೀಸನ್ 17 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಈವರೆಗೆ 13 ಪಂದ್ಯಗಳನ್ನಾಡಿದೆ. ಈ ಪಂದ್ಯಗಳಲ್ಲಿ ಗೆದ್ದಿರುವುದು 6 ಮ್ಯಾಚ್​ಗಳನ್ನು ಮಾತ್ರ. ಇದೀಗ 12 ಅಂಕಗಳನ್ನು ಕಲೆಹಾಕಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡವು ಅಂಕ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಇನ್ನು ಎಲ್​ಎಸ್​ಜಿ ತಂಡಕ್ಕೆ ಒಂದು ಪಂದ್ಯವಿದ್ದು, ಈ ಮ್ಯಾಚ್​ನಲ್ಲಿ ಅಮೋಘ ಗೆಲುವು ಸಾಧಿಸಿದರೆ ಅಂಕ ಪಟ್ಟಿಯಲ್ಲಿ ಮೇಲೇರಬಹುದು.

1 / 6
ಇಂಡಿಯನ್ ಪ್ರೀಮಿಯರ್ ಲೀಗ್​ನ (IPL 2024) 64ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್​ಗಳಲ್ಲಿ 208 ರನ್​ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು 20 ಓವರ್​ಗಳಲ್ಲಿ 189 ರನ್​ಗಳಿಸಲಷ್ಟೇ ಶಕ್ತರಾಗಿದ್ದರು. ಈ ಮೂಲಕ ನಿರ್ಣಾಯಕ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ 19 ರನ್​ಗಳಿಂದ ಸೋಲನುಭವಿಸಿತು.

2 / 6
ಈ ಸೋಲಿನ ಬಳಿಕ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಲೀಕ ಸಂಜತ್ ಗೊಯೆಂಕಾ ಮೈದಾನದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಈ ಬಾರಿ ಮಾತ್ರ ಕೋಪ-ತಾಪವನ್ನು ಪ್ರದರ್ಶಿಸಿರಲಿಲ್ಲ. ಬದಲಾಗಿ ರಾಹುಲ್ ಜೊತೆ ಚರ್ಚಿಸುತ್ತಿರುವುದು ಕಂಡು ಬಂತು. ಆದರೆ ಈ ಚರ್ಚೆಯ ನಡುವೆ ಕೆಎಲ್ ರಾಹುಲ್ ಮುಖದಲ್ಲಿ ಹತಾಶೆ ಮನೆ ಮಾಡಿತ್ತು ಎಂಬುದಕ್ಕೆ ಈ ಫೋಟೋನೇ ಸಾಕ್ಷಿ.

3 / 6
ಇದಕ್ಕೂ ಮುನ್ನ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಸೋತಿದಕ್ಕಾಗಿ ಸಂಜಯ್ ಗೊಯೆಂಕಾ ಕೆಎಲ್ ರಾಹುಲ್ ಅವರನ್ನು ಮೈದಾನದಲ್ಲೇ ತರಾಟೆಗೆ ತೆಗೆದುಕೊಂಡಿದ್ದರು. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಎಲ್​ಎಸ್​ಜಿ ತಂಡದ ಮಾಲೀಕನ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶಗಳು ವ್ಯಕ್ತವಾಗಿದ್ದವು.

4 / 6
ಈ ಆಕ್ರೋಶಗಳ ನಡುವೆ ಕೆಎಲ್ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ತೊರೆಯಲಿದ್ದಾರೆ ಎಂಬ ಸುದ್ದಿಗಳು ಕೂಡ ಹರಿದಾಡಿದ್ದವು. ಇದರ ನಡುವೆ ರಾಹುಲ್ ಅವರನ್ನು ಮನೆಗೆ ಆಹ್ವಾನಿಸಿದ ಸಂಜಯ್ ಗೊಯೆಂಕಾ, ಆಲಿಂಗನದೊಂದಿಗೆ ಎಲ್ಲಾ ವಿವಾದಕ್ಕೂ ತೆರೆ ಎಳೆದಿದ್ದರು.

5 / 6
ಇದೀಗ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಸೋಲಿನ ಬೆನ್ನಲ್ಲೇ ಸಂಜಯ್ ಗೊಯೆಂಕಾ ಮತ್ತೊಮ್ಮೆ ಮೈದಾನದಲ್ಲೇ ಕೆಎಲ್ ರಾಹುಲ್ ಜೊತೆ ಚರ್ಚಿಸುತ್ತಿರುವುದು ಕಂಡು ಬಂದಿದೆ. ಇಂತಹ ಚರ್ಚೆಗಳು ಅನಾವಶ್ಯಕ, ನಾಯಕ ಹಾಗೂ ಕೋಚ್ ಮತ್ತು ಆಟಗಾರರ ಜೊತೆ ಚರ್ಚಿಸಲು ಡ್ರೆಸ್ಸಿಂಗ್​ ರೂಮ್​ ಇದೆ. ಸಂಜಯ್ ಗೊಯೆಂಕಾ ಅಲ್ಲಿಯೇ ಚರ್ಚಿಸಬಹುದಿತ್ತಲ್ಲವೇ ಎಂಬ ಪ್ರಶ್ನೆಗಳನ್ನು ಅಭಿಮಾನಿಗಳು ಮುಂದಿಟ್ಟಿದ್ದಾರೆ.

6 / 6
ಒಟ್ಟಿನಲ್ಲಿ ಒಮ್ಮೆ ವಿವಾದಕ್ಕೀಡಾಗಿರುವ ಎಲ್​ಎಸ್​ಜಿ ಮಾಲೀಕರು ಸದ್ಯದ ಮಟ್ಟಿಗೆ ಮೈದಾನದಿಂದ ದೂರ ಉಳಿಯುವುದು ಒಳಿತು. ಇದಾಗ್ಯೂ ಸೋಲಿನ ಹತಾಶೆಯಲ್ಲಿರುವ ಆಟಗಾರರ ಜೊತೆ ಮೈದಾನಕ್ಕಿಳಿದು ಚರ್ಚಿಸುವುದು ಉತ್ತಮವಲ್ಲ ಎಂಬುದು ಕ್ರಿಕೆಟ್ ಪಂಡಿತರ ಅಭಿಪ್ರಾಯ.

Published On - 4:52 pm, Wed, 15 May 24