Marcus Stoinis: CSKಯ ಸದ್ದಡಗಿಸಿ ಭರ್ಜರಿ ದಾಖಲೆ ಬರೆದ ಸ್ಟೊಯಿನಿಸ್

| Updated By: ಝಾಹಿರ್ ಯೂಸುಫ್

Updated on: Apr 24, 2024 | 7:52 AM

IPL 2024: ಐಪಿಎಲ್ 2024 ರ 39ನೇ ಪಂದ್ಯದ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ದಾಂಡಿಗ ಮಾರ್ಕಸ್ ಸ್ಟೊಯಿನಿಸ್ ಹೊಸ ಇತಿಹಾಸ ಬರೆದಿದ್ದಾರೆ. ಅದು ಸಹ 13 ವರ್ಷಗಳ ಹಳೆಯ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ. ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸ್ಟೊಯಿನಿಸ್ 63 ಎಸೆತಗಳಲ್ಲಿ ಅಜೇಯ 124 ರನ್​ ಬಾರಿಸಿದರು. ಈ ಅಜೇಯ ಶತಕದೊಂದಿಗೆ ಸ್ಟೊಯಿನಿಸ್ ವಿಶೇಷ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

1 / 5
ಇಂಡಿಯನ್ ಪ್ರೀಮಿಯರ್ ಲೀಗ್​ನ (IPL 2024) 39ನೇ ಪಂದ್ಯದಲ್ಲಿ ಸ್ಪೋಟಕ ಸೆಂಚುರಿ ಸಿಡಿಸಿ ಮಾರ್ಕಸ್ ಸ್ಟೊಯಿನಿಸ್ ಐಪಿಎಲ್​ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್​ ಪರ ರುತುರಾಜ್ ಗಾಯಕ್ವಾಡ್ (108) ಆಕರ್ಷಕ ಶತಕ ಬಾರಿಸಿದರು. ಈ ಸೆಂಚುರಿ ನೆರವಿನೊಂದಿಗೆ ಸಿಎಸ್​ಕೆ ತಂಡವು 20 ಓವರ್​ಗಳಲ್ಲಿ 210 ರನ್ ಕಲೆಹಾಕಿತು.

2 / 5
ಈ ಗುರಿಯನ್ನು ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ ಪರ ಮಾರ್ಕಸ್ ಸ್ಟೊಯಿನಿಸ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ ಸ್ಟೊಯಿನಿಸ್ (124) ಅಜೇಯ ಶತಕ ಸಿಡಿಸಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಜಯ ತಂದುಕೊಡುವಲ್ಲಿ ಯಶಸ್ವಿಯಾದರು.

3 / 5
ವಿಶೇಷ ಎಂದರೆ 124 ರನ್​ಗಳೊಂದಿಗೆ ಮಾರ್ಕಸ್ ಸ್ಟೊಯಿನಿಸ್ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅಂದರೆ ಐಪಿಎಲ್​ನಲ್ಲಿ ಚೇಸಿಂಗ್​ ವೇಳೆ ಅತ್ಯಧಿಕ ರನ್ ಬಾರಿಸಿದ ದಾಖಲೆ ಇದೀಗ ಸ್ಟೊಯಿನಿಸ್ ಪಾಲಾಗಿದೆ.

4 / 5
ಇದಕ್ಕೂ ಮುನ್ನ ಈ ದಾಖಲೆ ಪೌಲ್ ವಾಲ್ತಟಿ ಹೆಸರಿನಲ್ಲಿತ್ತು. 2011 ರಲ್ಲಿ ಸಿಎಸ್​ಕೆ ವಿರುದ್ಧ ಪಂಜಾಬ್ ಕಿಂಗ್ಸ್ ಪರ ಕಣಕ್ಕಿಳಿದಿದ್ದ ಪೌಲ್ ವಾಲ್ತಟಿ 63 ಎಸೆತಗಳಲ್ಲಿ ಅಜೇಯ 120 ರನ್ ಬಾರಿಸಿ ದಾಖಲೆ ಬರೆದಿದ್ದರು. ಇದೀಗ ಈ ದಾಖಲೆಯನ್ನು ಸ್ಟೊಯಿನಿಸ್ ಅಳಿಸಿ ಹಾಕಿದ್ದಾರೆ.

5 / 5
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 63 ಎಸೆತಗಳನ್ನು ಎದುರಿಸಿದ ಮಾರ್ಕಸ್ ಸ್ಟೊಯಿನಿಸ್ 6 ಭರ್ಜರಿ ಸಿಕ್ಸ್, 13 ಫೋರ್​ಗಳೊಂದಿಗೆ ಅಜೇಯ 124 ರನ್​ ಬಾರಿಸಿ, ಐಪಿಎಲ್​ ಇತಿಹಾಸದಲ್ಲಿ ಚೇಸಿಂಗ್ ವೇಳೆ ಅತೀ ಹೆಚ್ಚು ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈ ಮೂಲಕ 13 ವರ್ಷಗಳ ಹಿಂದಿನ ದಾಖಲೆಯನ್ನು ಅಳಿಸಿ ಹಾಕುವಲ್ಲಿ ಸ್ಟೊಯಿನಿಸ್ ಯಶಸ್ವಿಯಾಗಿದ್ದಾರೆ.